ಪ್ರಮಾಣವಚನ ತೆಗೆದುಕೊಂಡು ಮಾತನಾಡುತ್ತೇನೆ; ರಂಜನ್ ಗೊಗಯ್
ಗುವಾಹಟಿ, ಮಾರ್ಚ್ 18; ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ.
ಈ ಕುರಿತು ಅಸ್ಸಾಂನ ಗುವಾಹಟಿಯಲ್ಲಿ ಮಾತನಾಡಿರುವ ರಂಜನ್ ಗೊಗಯ್ ಅವರು, ಮೊದಲು ಪ್ರಮಾಣವಚನ ತಗೆದುಕೊಳ್ಳುತ್ತೇನೆ. ಆ ನಂತರ ನಾನು ಏಕೆ ರಾಜ್ಯಸಭಾ ಸ್ಥಾನವನ್ನು ಒಪ್ಪಿಕೊಂಡೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದಿದ್ದಾರೆ.
ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ರಾಜ್ಯಸಭೆಯಲ್ಲಿ ನ್ಯಾಯಂಗವನ್ನು ಪ್ರತಿನಿಧಿಸುವ ಅದ್ಭುತ ಅವಕಾಶ ಸಿಕ್ಕಿದೆ. ಆ ನಂತರವೇ ನಾನು ಈಗಿನ ವಿವಾದಗಳಿಗೆ ಉತ್ತರಿಸುತ್ತೇನೆ ಎಂದರು.

ನಿನ್ನೆಯಷ್ಟೇ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ರಂಜನ್ ಗೊಗಯ್ ಅಂತಹ ಲಜ್ಜಿಗೇಡಿ ಮನುಷ್ಯನನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿರಲಿಲ್ಲ ಎಂದು ರಂಜನ್ ಗೊಗಯ್ ಅವರ ರಾಜ್ಯ ಸಭೆ ನಾಮನಿರ್ದೇಶನ ವಿರೋಧಿಸಿದ್ದರು.
ಭಾರತದ ಸುಪ್ರೀಂಕೋರ್ಟ ನ 46 ನೇ ಮುಖ್ಯ ನ್ಯಾಯಮೂರ್ತಿ ಆಗಿ ರಂಜನ್ ಗೊಗಯ್ ಅವರು 2018-19 ರ ಅವಧಿಯಲ್ಲಿ 13 ತಿಂಗಳು ಕೆಲಸ ಮಾಡಿದ್ದಾರೆ. ಅವರು ಈಗ ರಾಜ್ಯಸಭೆಗೆ ಹೋಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.












Click it and Unblock the Notifications