ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಕೊರೊನಾ ಸೋಂಕಿಗೆ ಬಲಿ
ಗುವಾಹಟಿ, ನವೆಂಬರ್ 23: ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಾಯ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಗೊಗಾಯ್, ಕೊರೊನಾ ನಂತರದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಗುವಾಹಟಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಿಎಂಸಿಎಚ್ ಆಸ್ಪತ್ರೆಯ ಸೂಪರಿಂಡೆಂಟ್ ಅಭಿಜಿತ್ ಶರ್ಮಾ ನೇತೃತ್ವದ ತಂಡ ಗೊಗಾಯ್ ಅವರ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಗೊಗಾಯ್ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಭಾನುವಾರ ಆರು ಗಂಟೆಗಳ ಕಾಲ ಡಯಾಲಿಸಿಸ್ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆಗಸ್ಟ್ 25ರಂದು ಕೊವಿಡ್ 19 ಪಾಸಿಟಿವ್ ಎಂದು ಸೋಂಕಿಗೆ ಚಿಕಿತ್ಸೆ ಪಡೆಯಲು ಇದೇ ಆಸ್ಪತ್ರೆಗೆ ತರುಣ್ ಅವರನ್ನು ಸೇರಿಸಲಾಯಿತು.
ಸುಮಾರು ಎರಡು ತಿಂಗಳುಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಅಕ್ಟೋಬರ್ 25ರಂದು ಬಿಡುಗಡೆಯಾಗಿದ್ದರು. ಆದರೆ, ನವೆಂಬರ್ 2ರಂದು ಕೊವಿಡ್ 19 ನಂತರದ ದೇಹಾರೋಗ್ಯ ಸ್ಥಿತಿ ಸುಧಾರಿಸದೆ ಮತ್ತೊಮ್ಮೆ ಆಸ್ಪತ್ರೆಗೆ ಸೇರಬೇಕಾಯಿತು.












Click it and Unblock the Notifications