ಗಡಿ ವಿವಾದ: ಗುವಾಹಟಿಯಲ್ಲಿ ಸಭೆ ನಡೆಸಿದ ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳು
ಗುವಾಹಟಿ, ಆ.06: ಅಸ್ಸಾಂ ಮತ್ತು ಮೇಘಾಲಯ ಆಗಸ್ಟ್ 6 ರಂದು ಅಂತರ್ ರಾಜ್ಯ ಗಡಿ ವಿವಾದ ಸಮಸ್ಯೆಗಳನ್ನು ಹಂತ-ಹಂತದ ರೀತಿಯಲ್ಲಿ ಪರಿಹರಿಸಲು ನಿರ್ಧರಿಸಿದೆ. ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯಲ್ಲಿ ಭೇಟಿಯಾಗಿ ಗಡಿ ವಿವಾದದ ಕುರಿತು ಎರಡನೇ ಹಂತದ ಮುಖ್ಯಮಂತ್ರಿ ಮಟ್ಟದ ಮಾತುಕತೆ ನಡೆಸಿದರು. ವಿವಾದಿತ 12 ಪ್ರದೇಶಗಳಲ್ಲಿ ಆರು ಗುರುತಿಸಲಾಗಿದೆ ಮತ್ತು ಆದ್ಯತೆಯ ಆಧಾರದ ಮೇಲೆ ಪರಿಹರಿಸಲಾಗುವುದು ಎಂದು ಮುಖ್ಯುಮಂತ್ರಿಗಳು ತಿಳಿಸಿದರು.
ಎರಡೂ ರಾಜ್ಯಗಳು ಸಂಪುಟ ಸಚಿವರುಗಳ ನೇತೃತ್ವದಲ್ಲಿ ಪ್ರತಿ ಕಡೆಯಿಂದ ಮೂರು ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ. ಗುರುತಿಸಲಾದ ಆರು ಸ್ಥಳಗಳಿಗೆ ಸಮಿತಿಗಳು ಭೇಟಿ ನೀಡುತ್ತವೆ, ಸಭೆ ನಿರ್ಧರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ''ನಮ್ಮ ಪರಸ್ಪರ ಸ್ನೇಹದ ಮನೋಭಾವವನ್ನು ಮುಂದುವರಿಸುತ್ತಾ, ಜುಲೈ 23 ರಂದು ಶಿಲ್ಲಾಂಗ್‌ನಲ್ಲಿ ನಡೆದ ಸಭೆಯ ನಂತರ ಅಸ್ಸಾಂ ಮತ್ತು ಮೇಘಾಲಯ ನಡುವಿನ ಮಹತ್ವದ ಗಡಿ ಸಮಸ್ಯೆಗಳನ್ನು ಪರಿಹರಿಸಲು, ಇಂದು ಗುವಾಹಟಿಯಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾರನ್ನು ಭೇಟಿ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ನಡೆದ ಅತಿದೊಡ್ಡ ಸಮಾಲೋಚನೆ ಇದು,'' ಎಂದು ಹೇಳಿದ್ದಾರೆ.
''ಈ ಸಭೆಯ ನಂತರ ನಾವು ಅಸ್ಸಾಂ ಮತ್ತು ಮೇಘಾಲಯದ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುವ ಒಂದು ಸಾಮಾನ್ಯ ಕಾರ್ಯಸೂಚಿಯನ್ನು ಹೊರತರಲು ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ.ಎರಡೂ ಕಡೆಯ ಅನೇಕ ಹಿರಿಯ ಮಂತ್ರಿಗಳು, ಸಿಎಸ್ ಮತ್ತು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಇದ್ದರು,'' ಎಂದು ಕೂಡಾ ತಿಳಿಸಿದ್ದಾರೆ.

ಇನ್ನು ಈ ಮಾತುಕತೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, "ಈ ಮಾತುಕತೆಯ ಮೂಲಕ, ನಾವು ಗಡಿಯನ್ನು ಪುನಃ ರಚಿಸುವುದಿಲ್ಲ. ಆದರೆ ಆ ಪ್ರದೇಶಗಳು ಅಥವಾ ಹಳ್ಳಿಗಳ ಬಗ್ಗೆ ಗ್ರಹಿಕೆಯನ್ನು ಬದಲಾಯಿಸುತ್ತೇವೆ. ಗಡಿ ಪುನರ್ರಚನೆ ಅಗತ್ಯವಿದ್ದರೆ, ನಾವು ಅದನ್ನು ಸಂಸತ್ತಿಗೆ ಶಿಫಾರಸು ಮಾಡುತ್ತೇವೆ," ಎಂದಿದ್ದಾರೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಾತನಾಡಿ, ''ಇಂದು ಸಭೆಯಲ್ಲಿ, ಅಸ್ಸಾಂ ಸರ್ಕಾರವು ವಿವಾದದ ಹನ್ನೆರಡು ಕ್ಷೇತ್ರಗಳಲ್ಲಿ ಆರರ ಕುರಿತು ವಿವರವಾದ ಮಾತುಕತೆ ನಡೆಸಿದ್ದೇವೆ. ಎರಡೂ ರಾಜ್ಯಗಳು ಕ್ಯಾಬಿನೆಟ್ ಮಂತ್ರಿಗಳ ನೇತೃತ್ವದಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ,'' ಎಂದು ಮಾಹಿತಿ ನೀಡಿದ್ದಾರೆ.
''ನಾವು ಮೂರು ಪ್ರದೇಶಗಳನ್ನು ಹೊಂದಿದ್ದೇವೆ, ಅಲ್ಲಿ ಈ ಆರು ಭಿನ್ನಾಭಿಪ್ರಾಯಗಳು ಸೇರುತ್ತವೆ. ಮೇಘಾಲಯದಿಂದ 3 ಮತ್ತು ಅಸ್ಸಾಂನ 3 ಸಮಿತಿಗಳು ಐತಿಹಾಸಿಕ ಸಂಗತಿಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಇಚ್ಛೆ ಮತ್ತು ಸಾಂದರ್ಭಿಕತೆಯ ಮೇಲೆ ಕೇಂದ್ರೀಕರಿಸುತ್ತವೆ ಮತ್ತು 30 ದಿನಗಳಲ್ಲಿ ತಮ್ಮ ವರದಿಗಳನ್ನು ಸಲ್ಲಿಸುತ್ತವೆ,'' ಎಂದು ಕೂಡಾ ಹೇಳಿದ್ದಾರೆ.
ಅಸ್ಸಾಂ ತನ್ನ ಎಲ್ಲಾ ಗಡಿ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದು ಅಸ್ಸಾಂನ ಆರು ಪೊಲೀಸರು ಸಾವನ್ನಪ್ಪಿದ ಬಳಿಕ ಅಸ್ಸಾಂ ಹಾಗೂ ಮಿಜೋರಾಂ ಗಡಿ ಸಂಘರ್ಷ ಹೆಚ್ಚಾಯಿತು. ಈ ನಡುವೆ ಅಸ್ಸಾಂ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡುವಲ್ಲಿ ಮುಂದಡಿ ಇಟ್ಟಿತು. ಉಭಯ ರಾಜ್ಯಗಳು ಗಡಿ ವಿವಾದಕ್ಕೆ ಸಂಬಂಧಿಸಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಹಾಗೆಯೇ ಈ ಬೆನ್ನಲ್ಲೇ ಅಸ್ಸಾಂ ಹಾಗೂ ಮಿಜೋರಾಂ ಅಧಿಕಾರಿಗಳು ತಮ್ಮ ಗಡಿ ವಿವಾದದ ಪರಿಹಾರಕ್ಕೆ ಮಾತುಕತೆ ನಡೆಸಿದ್ದಾರೆ. ಈಗ ಮೇಘಾಲಯ ಗಡಿ ವಿವಾದವನ್ನು ಪರಿಹರಿಸುವತ್ತ ಅಸ್ಸಾಂ ಗಮನ ಹರಿಸಿದೆ.
(ಒನ್‌ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications