ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೀಶ್ ಸಿಸೋಡಿಯಾಗೆ ಅಸ್ಸಾಂ ಕೋರ್ಟ್ ಸಮನ್ಸ್

|
Google Oneindia Kannada News

ನವದೆಹಲಿ, ಆಗಸ್ಟ್ 24: ದೆಹಲಿಯ ಅಬಕಾರಿ ನೀತಿ ಅಕ್ರಮ ಹಗರಣದಲ್ಲಿ ಪ್ರಕರಣ ಎದುರಿಸುತ್ತಿರುವ ದೆಹಲಿ ಸಿಎಂ ಮನೀಶ್ ಸಿಸೋಡಿಯಾ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಅಸ್ಸಾಮ್ ನ್ಯಾಯಾಲಯದಿಂದ ಸಿಸೋಡಿಯಾಗೆ ಸಮನ್ಸ್ ಜಾರಿಯಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧ ಕೋರ್ಟ್‌ನಿಂದ ಅವರಿಗೆ ಸಮನ್ಸ್ ಕೊಡಲಾಗಿದೆ. ಸೆಪ್ಟೆಂಬರ್ 29ರ ಒಳಗೆ ಸಿಸೋಡಿಯಾ ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಬೇಕು ಎಂದು ಕಾಮರೂಪ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮೋನ್ಮೀ ಶರ್ಮಾ ನಿನ್ನೆ ಮಂಗಳವಾರ ಆದೇಶಿಸಿದ್ದಾರೆ.

ಏನಿದು ಮಾನನಷ್ಟ ಪ್ರಕರಣ?: ಜೂನ್ 4ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ಮನೀಶ್ ಸಿಸೋಡಿಯಾ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಮುಂದಿನ 2-3 ದಿನಗಳಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ!ಮುಂದಿನ 2-3 ದಿನಗಳಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ!

ಅಸ್ಸಾಂ ಮುಖ್ಯಮಂತ್ರಿಗಳು ತಮ್ಮ ಪತ್ನಿ ಮತ್ತು ಮಗನ ಬಿಸಿನೆಸ್ ಪಾರ್ಟ್ನರ್ಸ್‌ನ ಸಂಸ್ಥೆಗಳಿಗೆ 990 ರೂ ಬೆಲೆಗೆ ಪಿಪಿಇ ಕಿಟ್‌ಗಳ ಸರಬರಾಜಿಗೆ ಆರ್ಡರ್ಸ್ ಕೊಟ್ಟಿದ್ದರು. ಆದರೆ, ಇವೇ ಕಿಟ್‌ಗಳನ್ನು ರಾಜ್ಯ ಸರಕಾರ ಇತರ ಕಂಪನಿಗಳಿಂದ 600 ರೂಗೆ ಖರೀದಿಸಿದೆ ಎಂದು ಮನೀಶ್ ಸಿಸೋಡಿಯಾ ಆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಪಿಪಿಇ ಕಿಟ್‌ಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಖರೀದಿಸಲಾಗಿದೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ರಿಣಿಕಿ ಭುಯನ್ ಶರ್ಮಾ ಜೂನ್ 21ರಂದು ಮನೀಶ್ ಸಿಸೋಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು.

ಸರ್ಕಾರದಿಂದ ಯಾವುದೇ ಹಣವನ್ನು ಪಡೆದಿಲ್ಲ

ಸರ್ಕಾರದಿಂದ ಯಾವುದೇ ಹಣವನ್ನು ಪಡೆದಿಲ್ಲ

ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ಇಬ್ಬರೂ ಮನೀಶ್ ಸಿಸೋಡಿಯಾ ಅವರ ಆರೋಪಗಳನ್ನು ನಿರಾಕರಿಸಿದ್ದು, ಅವರ ವಿರುದ್ದ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದರು. ರಿನಿಕಿ ಶರ್ಮಾ ಭುಯಾನ್ ಒಡೆತನದ ಸಂಸ್ಥೆಯು ಸರ್ಕಾರದಿಂದ ಯಾವುದೇ ಹಣವನ್ನು ಪಡೆದಿಲ್ಲ ಮತ್ತು ಪಿಪಿಇ ಕಿಟ್‌ಗಳನ್ನು ರಾಜ್ಯ ಆರೋಗ್ಯ ಇಲಾಖೆಗೆ ದಾನ ಮಾಡಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಸೆಕ್ಷನ್ 499, 500 ಮತ್ತು 501 ರ ಅಡಿ ಪ್ರಕರಣ

ಸೆಕ್ಷನ್ 499, 500 ಮತ್ತು 501 ರ ಅಡಿ ಪ್ರಕರಣ

ಆದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ರೈಜೋರ್ ದಳದ ಶಾಸಕ ಅಖಿಲ್ ಗೊಗೊಯ್ ಅವರು ಸಿಸೋಡಿಯಾ ಅವರ ಆರೋಪದ ಬಗ್ಗೆ ಕೇಂದ್ರೀಯ ತನಿಖಾ ದಳದ ತನಿಖೆಗೆ ಒತ್ತಾಯಿಸಿದರು. ಪಿಪಿಇ ಕಿಟ್‌ಗಳ ಪೂರೈಕೆಗೆ ಗುತ್ತಿಗೆ ನೀಡುವಾಗ ಹಿಂದಿನವರು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ ಹೇಳಿಕೆಗಳಿಗಾಗಿ ಸಿಸೋಡಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499, 500 ಮತ್ತು 501 ರ ಅಡಿಯಲ್ಲಿ ಶರ್ಮಾ ಅವರು ಮಾನನಷ್ಟ ಮೊಕದ್ದಮೆ ಹೂಡಿದರು.

ಸಿಸೋಡಿಯಾ ವಿರುದ್ಧ ₹ 100 ಕೋಟಿ ಮೊಕದ್ದಮೆ

ಸಿಸೋಡಿಯಾ ವಿರುದ್ಧ ₹ 100 ಕೋಟಿ ಮೊಕದ್ದಮೆ

ನ್ಯಾಯಾಲಯವು ಪ್ರಕರಣದ ಪ್ರಾಥಮಿಕ ವಿಚಾರಣೆಯನ್ನು ನಡೆಸಿದ್ದು, ಆಗಸ್ಟ್ 19 ರಂದು ಇಬ್ಬರು ಸಾಕ್ಷಿಗಳನ್ನು ಪರೀಕ್ಷಿಸಿದ ನಂತರ ಸಿಸೋಡಿಯಾಗೆ ಸಮನ್ಸ್ ನೀಡಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಜೊತೆಗೆ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ಸಿವಿಲ್ ನ್ಯಾಯಾಲಯದಲ್ಲಿ ಸಿಸೋಡಿಯಾ ವಿರುದ್ಧ ಜೂನ್‌ನಲ್ಲಿ ₹ 100 ಕೋಟಿ ಮೌಲ್ಯದ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಸಾಮಾಜಿಕ ಜವಾಬ್ದಾರಿ ಭಾಗವಾಗಿ ಕಿಟ್‌ ನೀಡಿದ್ಧೇ

ಸಾಮಾಜಿಕ ಜವಾಬ್ದಾರಿ ಭಾಗವಾಗಿ ಕಿಟ್‌ ನೀಡಿದ್ಧೇ

ದಿ ವೈರ್‌ನ ತಮ್ಮ ಮೇಲೆ ವರದಿಗಳ ಸರಣಿಯಲ್ಲಿ ಮಾಡಿದ ಆರೋಪಗಳನ್ನು ನಿರಾಕರಿಸಿದ ರಿನಿಕಿ ಶರ್ಮಾ ಜೂನ್‌ನಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಮಾರ್ಚ್ 2020ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ವಾರದಲ್ಲಿ ಅಸ್ಸಾಂನಲ್ಲಿ ಒಂದೇ ಒಂದು ಪಿಪಿಇ ಕಿಟ್ ಲಭ್ಯವಿಲ್ಲ. ಇದು ನನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ (CSR) ಭಾಗವಾಗಿ ನಾನು ಈ ಪಿಇಪಿ ಕಿಟ್‌ ಪೂರೈಕೆಯಿಂದ ಒಂದು ಪೈಸೆಯನ್ನೂ ತೆಗೆದುಕೊಂಡಿಲ್ಲ. ನನ್ನ ಗಂಡನ ರಾಜಕೀಯ ಸ್ಥಾನಮಾನವನ್ನು ಲೆಕ್ಕಿಸದೆ ಸಮಾಜಕ್ಕೆ ಹಿಂತಿರುಗಿಸುವ ನನ್ನ ನಂಬಿಕೆಯಲ್ಲಿ ನಾನು ಯಾವಾಗಲೂ ಪಾರದರ್ಶಕವಾಗಿರುತ್ತೇನೆ ಎಂದು ಅವರು ಹೇಳಿದರು.

Recommended Video

ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸೋಕು ಮೊದಲು ಇದು ಗೊತ್ತಿರಲಿ | OneIndia Kannada

English summary
An Assam court has summoned Delhi Deputy Chief Minister and senior Aam Aadmi Party (AAP) leader Manish Sisodia in connection with a defamation suit filed by Assam Chief Minister Himanta Biswa Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X