ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ PPE ಕಿಟ್ ಆಮದು ಮಾಡಿಕೊಂಡ ಮೊದಲ ರಾಜ್ಯ ಅಸ್ಸಾಂ

|
Google Oneindia Kannada News

ಗುವಾಹಟಿ, ಏಪ್ರಿಲ್ 15: ಕೊರೊನಾ ವೈರಸ್ ನಿಯಂತ್ರಿಸಲು ಪಿಪಿಇ (personal protective equipment) ಕಿಟ್‌ಗಳು ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಭಾರತದಲ್ಲಿ ಅಗತ್ಯ ಸಂಖ್ಯೆಯ ಪಿಪಿಇ ಕಿಟ್‌ಗಳು ಇಲ್ಲ ಎನ್ನಲಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಕಡೆಯಿಂದ ಕೆಲವು ರಾಜ್ಯಗಳಿಗೆ ಪಿಪಿಇ ಕಿಟ್ ಸರಬರಾಜು ಮಾಡಲಾಗುತ್ತಿದೆ.

ಇದೀಗ, ಚೀನಾದಿಂದ ನೇರವಾಗಿ ಅಸ್ಸಾಂ ಸರ್ಕಾರ ಪಿಪಿಇ ಕಿಟ್ ಖರೀದಿಸಿದ್ದು, ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಬುಧವಾರ ಸಂಜೆ ಅಸ್ಸಾಂಗೆ ಪಿಪಿಇ ಕಿಟ್ ಬಂದು ತಲುಪಿದೆ. ಚೀನಾದಿಂದ ಕಾರ್ಗೋ ವಿಮಾನದಲ್ಲಿ 50,000 ಪಿಪಿಇ ಕಿಟ್‌ಗಳು ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.

ಅಮೆರಿಕ ಕಥೆ ಬೇಡ, ನಾವು WHOಗೆ ಸಪೋರ್ಟ್ ಮಾಡ್ತೀವಿ - ಯುಕೆಅಮೆರಿಕ ಕಥೆ ಬೇಡ, ನಾವು WHOಗೆ ಸಪೋರ್ಟ್ ಮಾಡ್ತೀವಿ - ಯುಕೆ

'ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಚೀನಾದಿಂದ ಪಿಪಿಇ ಕಿಟ್ ಖರೀದಿಸುತ್ತಿದೆ. ಆದರೆ, ಚೀನಾದಿಂದ ನೇರವಾಗಿ ಪಿಪಿಇ ಕಿಟ್ ಆಮದು ಮಾಡಿಕೊಂಡ ಮೊದಲ ರಾಜ್ಯ ನಮ್ಮದು'' ಎಂದು ವಿಮಾನ ನಿಲ್ದಾಣದಲ್ಲಿ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

'ನಾವು ಸಣ್ಣ ಸಂಖ್ಯೆಯಲ್ಲಿ ಪಿಪಿಇ ಕಿಟ್ ಖರೀದಿಸುತ್ತಿರುವುದರಿಂದ ಅದರ ಲಭ್ಯತೆ ಬಗ್ಗೆ ನಮಗೆ ಚಿಂತೆ ಇದೆ. ಆದಷ್ಟೂ ಬೇಗ ನಮ್ಮ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಲಿದ್ದೇವೆ' ಎಂದು ಸಚಿವರು ತಿಳಿಸಿದ್ದಾರೆ.

ಒನ್‌ಇಂಡಿಯಾ ರಿಯಾಲಿಟಿ ಚೆಕ್: ಕೇಳುವರಿಲ್ಲ ಕಾರ್ಮಿಕರ ಗೋಳುಒನ್‌ಇಂಡಿಯಾ ರಿಯಾಲಿಟಿ ಚೆಕ್: ಕೇಳುವರಿಲ್ಲ ಕಾರ್ಮಿಕರ ಗೋಳು

ಅಸ್ಸಾಂನಲ್ಲಿ ಅದಾಗಲೇ ಒಂದು ಲಕ್ಷ ಪಿಪಿಇ ಕಿಟ್‌ಗಳು ಇದ್ದವು. ಇದೀಗ, ಎರಡು ಲಕ್ಷ ಪಿಪಿಇ ಕಿಟ್‌ಗಳನ್ನು ಸಂಗ್ರಹಿಸು ಉದ್ದೇಶ ಹೊಂದಿರುವ ಸರ್ಕಾರ, ಈ ಕಿಟ್‌ಗಳ ಬಳಕೆಯ ನಂತರ ಮತ್ತಷ್ಟು ಕಿಟ್ ಆಮದು ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿದೆ.

Assam Becomes First Indian State To Import PPE Kit From China

ಅಂದ್ಹಾಗೆ, ತಮಿಳುನಾಡು ರಾಜ್ಯ ಸರ್ಕಾರವೂ ಚೀನಾದಿಂದ ಪಿಪಿಇ ಕಿಟ್‌ಗಳು ಖರೀದಿಸಲು ಮಾತುಕತೆ ನಡೆಸಿ, ಆರ್ಡರ್ ಕೊಟ್ಟಿತ್ತು. ಆದರೆ, ಇದುವರೆಗೂ ತಮಿಳುನಾಡಿಗೆ ಬರಬೇಕಿದ್ದ ಕಿಟ್ ತಲುಪಿಲ್ಲ. ಇನ್ನುಳಿದಂತೆ ಅಸ್ಸಾಂನಲ್ಲಿ ಇದುವರೆಗೂ 32 ಕೊರೊನಾ ಕೇಸ್ ದಾಖಲಾಗಿದೆ. ಒಬ್ಬ ಮೃತಪಟ್ಟಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.

English summary
Assam becomes the first Indian state to import PPE kit from china directly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X