ಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳು
Recommended Video

ಗುವಾಹಟಿ, ಫೆಬ್ರವರಿ 9: ಎರಡು ದಿನಗಳ ಈಶಾನ್ಯ ರಾಜ್ಯಗಳ ಭೇಟಿಗಾಗಿ ಶುಕ್ರವಾರ ಸಂಜೆ ಅಸ್ಸಾಂಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಲೋಕಪ್ರಿಯ ಗೋಪಿನಾಥ್ ಬರ್ದೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದಲ್ಲಿ ವಾಸ್ತವ್ಯ ಹೂಡಲು ತೆರಳಿದ ಮೋದಿ ಅವರು ಪ್ರತಿಭಟನೆಯ ಬಿಸಿ ಎದುರಿಸಬೇಕಾಯಿತು.
ಸಂಜೆ 6.30ರ ವೇಳೆ ಗುವಾಹಟಿ ವಿಶ್ವವಿದ್ಯಾಲಯದ ದ್ವಾರಗಳು ಮತ್ತು ಎಂಜಿ ರಸ್ತೆಯಲ್ಲಿರುವ ಎಎಎಸ್‌ಯು ಕೇಂದ್ರ ಕಚೇರಿ ಆವರಣದಲ್ಲಿ ನೆರೆದ ಅಪಾರ ಸಂಖ್ಯೆಯ ಎಎಎಸ್‌ಯು ಸದಸ್ಯರು ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.
'ಮೋದಿ ಗೋ ಬ್ಯಾಕ್', 'ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಿ', 'ಅಸ್ಸಾಂ ತಾಯಿಗೆ ಜಯವಾಗಲಿ' ಮುಂತಾದ ಘೋಷಣೆಗಳು ಕೇಳಿಬಂದವು.
ಪ್ರತಿಭಟನಾಕಾರರ ನಡುವೆಯೇ ಬಿಜೆಪಿಯ ಭಾರಿ ಬೆಂಬಲಿಗರು, ಸಚಿವರಾದ ಸಿದ್ಧಾರ್ಥ್ ಭಟ್ಟಾಚಾರ್ಯ ಮತ್ತು ಪಿಯೂಷ್ ಹಜಾರಿಕಾ ಫಲಕಗಳನ್ನು ಹಿಡಿದು ಪ್ರಧಾನಿಯನ್ನು ಸ್ವಾಗತಿಸುವ ಘೋಷಣೆಗಳನ್ನು ಕೂಗಿದರು. ಮೋದಿ ಅವರತ್ತ ಕೈಬೀಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೋರಾಟ ನಿಲ್ಲಿಸುವುದಿಲ್ಲ: ಎಎಎಸ್‌ಯು
ಎಎಎಸ್‌ಯು ಕಚೇರಿಗೆ ಪೊಲೀಸರು ಬೀಗ ಹಾಕಿಸಿದ್ದರಿಂದ ಪ್ರತಿಭಟನಾಕಾರರು ಗೇಟಿನ ಒಳಗೆ ಮಾತ್ರ ನಿಂತು ಘೋಷಣೆ ಕೂಗಿದರು.
ಸರ್ಕಾರ ತನ್ನ ಅಧಿಕಾರ ಬಳಸಿಕೊಂಡು ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರ ಪ್ರಯತ್ನಿಸಿದಷ್ಟೂ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟ ಮುಂದುವರಿಯಲಿದೆ. ಸರ್ಕಾರವು ತಾನು ಬಾಂಗ್ಲಾದೇಶಿ ನುಸುಳುಕೋರರ ಪರ ಮತ್ತು ಅಸ್ಸಾಂನ ಮೂಲನಿವಾಸಿಗಳ ಪರ ಅಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಎಎಎಸ್‌ಯು ಮುಖ್ಯ ಸಲಹೆಗಾರ ಸಮ್ಮುಜಲ್ ಭಟ್ಟಾಚಾರ್ಯ ಹೇಳಿದ್ದಾರೆ.

ಅಸ್ಸಾಂನಲ್ಲಿ ವಿಮಾನ ನಿಲ್ದಾಣ
ಶನಿವಾರದ ಕಾರ್ಯಕ್ರಮಗಳಲ್ಲಿ ಮೋದಿ ಅವರು, ಹೊಲ್ಲೊಂಗಿಯಲ್ಲಿ ಗ್ರೀನ್‌ಫೀಲ್ಡ್ ವಿಮಾನನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಈ ವಿಮಾನ ನಿಲ್ದಾಣವು ಪ್ರದೇಶದ ಆರ್ಥಿಕಾಭಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸಲಿದೆ.

ಸೆಲಾ ಸುರಂಗ ನಿರ್ಮಾಣಕ್ಕೆ ಚಾಲನೆ
ಬಳಿಕ ಅರುಣಾಚಲ ಪ್ರದೇಶದಲ್ಲಿ, ತವಾಂಗ್ ಕಣಿವೆಗೆ ಎಲ್ಲ ಋತುಮಾನಗಳಲ್ಲಿಯೂ ವರ್ಷವಿಡೀ ಜನರು ಮತ್ತು ಭದ್ರತಾ ಪಡೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತಹ ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಈ ಸುರಂಗಮಾರ್ಗವು ತವಾಂಗ್‌ಗೆ ಪ್ರಯಾಣಿಸುವ ಮಾರ್ಗವನ್ನು ಒಂದು ಗಂಟೆಯಷ್ಟು ಕಡಿಮೆಗೊಳಿಸಲಿದೆ. ಇದು ಪ್ರವಾಸೋದ್ಯಮ ಮತ್ತು ಪ್ರದೇಶದಲ್ಲಿ ಇತರೆ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸಲಿದೆ.

ಅರುಣಾಚಲ ಪ್ರದೇಶಕ್ಕೆ ಎಫ್‌ಟಿಐಐ
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ರಾಜ್ಯಕ್ಕೆ ಪ್ರತ್ಯೇಕವಾದ ಹೊಸ ವಾಹಿನಿ ಡಿಡಿ ಅರುಣ್ ಪ್ರಭಾಕ್ಕೆ ಚಾಲನೆ ನೀಡಲಿದ್ದಾರೆ. ಇದು ದೂರದರ್ಶನದ 24ನೇ ವಾಹಿನಿಯಾಗಲಿದೆ.
ಅರುಣಾಚಲಪ್ರದೇಶದಲ್ಲಿ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ (ಎಫ್‌ಟಿಐಐ) ಶಾಶ್ವತ ಕ್ಯಾಂಪಸ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಇದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಮೂರನೇ ಎಫ್‌ಟಿಐಐ ಕ್ಯಾಂಪಸ್ ಆಗಲಿದೆ. ಪುಣೆ ಎಫ್‌ಟಿಐಐ ಮತ್ತು ಕೋಲ್ಕತಾ ಎಸ್‌ಆರ್‌ಎಫ್‌ಟಿಐ ಸಂಸ್ಥೆಗಳು ಸದ್ಯ ಅಸ್ತಿತ್ವದಲ್ಲಿವೆ. ಈಶಾನ್ಯ ಭಾಗದ ಸಿನಿಮಾ ಮತ್ತು ಟೆಲಿವಿಷನ್ ವಿಭಾಗದಲ್ಲಿ ಕಲಿಕೆಯ ಆಸಕ್ತಿಯುಳ್ಳವರಿಗೆ ಇದರಿಂದ ನೆರವಾಗಲಿದೆ.

ತ್ರಿಪುರಾಕ್ಕೆ ರೈಲ್ವೆ ಮಾರ್ಗ
ತ್ರಿಪುರಾದ ಅಗರ್ತಲದಲ್ಲಿರುವ ಸ್ವಾಮಿ ವಿವೇಕಾನಂದ ಸ್ಟೇಡಿಯಂನಲ್ಲಿ ಗಾರ್ಜಿ-ಬೆಲೋನಿಯಾ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ರೈಲು ಮಾರ್ಗವು ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳನ್ನು ಬೆಸೆಯುವ ಮೂಲಕ ತ್ರಿಪುರಾ ಅಭಿವೃದ್ಧಿಗೆ ನೆರವಾಗಲಿದೆ. ನರಸಿಂಗಢದಲ್ಲಿ ತ್ರಿಪುರಾ ತಾಂತ್ರಿಕ ಸಂಸ್ಥೆಯ ನೂತನ ಸಂಕೀರ್ಣವನ್ನು ಮೋದಿ ಉದ್ಘಾಟಿಸಲಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications