ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದೊಳಗೆ ಸಿಗರೇಟು ಸೇದಿದ ವ್ಯಕ್ತಿ: ಕ್ರಮಕ್ಕೆ ಸಚಿವರ ಸೂಚನೆ

|
Google Oneindia Kannada News

ಗುರ್‌ಗಾಂವ್‌, ಆಸಗ್ಟ್‌ 11: ಮೊಬೈಲನ್ನೇ ಬಳಸಲು ಬಿಡದ ವಿಮಾನದೊಳಗೆ ವ್ಯಕ್ತಿಯೊಬ್ಬ ಸಿಗರೇಟ್ ಸೇದಿದ್ದಾನೆ. ಸ್ಪೈಸ್‌ಜೆಟ್‌ ವಿಮಾನದಲ್ಲಿ ಸೀಟಿನ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಮಲಗಿ ಸಿಗರೇಟ್ ಹೊತ್ತಿಸಿದ ವಿಡಿಯೋ ಈಗ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ಈ ವಿಡಿಯೋದಲ್ಲಿ 6.30 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಪ್ರಭಾವಿ ಮತ್ತು ಗುರ್‌ಗಾಂವ್ ನಿವಾಸಿ ಬಾಬಿ ಕಟಾರಿಯಾ ಎಂಬಾತ ವಿಮಾನದ ಸೀಟಿನ ಮೇಲೆ ಮಲಗಿ ಸಿಗರೇಟ್ ಹಚ್ಚುತ್ತಿದ್ದು, ಮೊದಲು ಅವನು ಒಂದೆರಡು ಬಾರಿ ಸಿಗರೇಟು ಸೇದುತ್ತಿರುವುದು ಕಂಡು ಬಂದಿದೆ.

ವಿಮಾನದಲ್ಲಿ ಧೂಮಪಾನ ಮಾಡಿದ ವ್ಯಕ್ತಿ ವಿಡಿಯೋ ವೈರಲ್!ವಿಮಾನದಲ್ಲಿ ಧೂಮಪಾನ ಮಾಡಿದ ವ್ಯಕ್ತಿ ವಿಡಿಯೋ ವೈರಲ್!

ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್‌ನೊಳಗೆ ಧೂಮಪಾನವು ಬೆಂಕಿಯ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಭಾರತದಲ್ಲಿ ಪ್ರಯಾಣಿಕ ವಿಮಾನದೊಳಗೆ ಧೂಮಪಾನವನ್ನು ನಿಷೇಧಿಸಲಾಗಿದೆ.

Person who smoked a cigarette inside the plane: Minister Jotiradhya Scindia instructed to take action

ಟ್ವಿಟ್ಟರ್‌ನಲ್ಲಿ ಜನರು ಈ ವಿಡಿಯೋವನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅದಕ್ಕೆ ಅದನ್ನು ತನಿಖೆ ಮಾಡಲಾಗುತ್ತಿದೆ. ಅಂತಹ ಅಪಾಯಕಾರಿ ನಡವಳಿಕೆಯ ಬಗ್ಗೆ ಯಾವುದೇ ದಯದಾಕ್ಷಿಣ್ಯ ತೋರುವುದಿಲ್ಲ ಎಂದು ಸಚಿವ ಸಿಂಧ್ಯಾ ಟ್ವೀಟ್ ಮಾಡಿದ್ದಾರೆ.

ಸ್ಪೈಸ್‌ಜೆಟ್ ವಿಮಾನ ಹಾರಾಟ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾಸ್ಪೈಸ್‌ಜೆಟ್ ವಿಮಾನ ಹಾರಾಟ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ ಮೂಲಗಳು ಇದು ಹಳೆಯ ವಿಡಿಯೋ ಆಗಿದ್ದು, ಪ್ರಥಮ ಮಾಹಿತಿ ವರದಿ ಅಥವಾ ಎಫ್ಐಆರ್ ಅನ್ನು ದಾಖಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ಟಿಆರ್‌ಪಿ ಮಾತ್ರ ಬೇಕು. ಏನು ಬೇಕಾದರೂ ಮಾತನಾಡಿ ಮತ್ತು ರಾಜಕಾರಣಿಗಳನ್ನು ಇಲ್ಲಿ ಬಳಸಿಕೊಳ್ಳಿ ಎಂದು ಇನ್‌ಸ್ಟಾಗ್ರಾಮ್ ಬಳಕೆದಾರ ಹಿಂದಿಯಲ್ಲಿ ಬರೆದಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಬಾಬಿ ಕಟಾರಿಯಾ ಉತ್ತರಾಖಂಡದ ರಸ್ತೆಯೊಂದರ ಮಧ್ಯದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ. ವಿಮಾನದಲ್ಲಿನ ವಿಡಿಯೋ ಬಗ್ಗೆ ಗುರುವಾರ ಸ್ಪೈಸ್‌ಜೆಟ್ ವಕ್ತಾರರು 2022ರ ಜನವರಿಯಲ್ಲಿ ವಿಡಿಯೋವನ್ನು ತಮ್ಮ ಗಮನಕ್ಕೆ ತಂದಾಗ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗಿದೆ. ಈ ಬಗ್ಗೆ ವಿಮಾನಯಾನ ಸಂಸ್ಥೆಯು ಗುರ್‌ಗಾಂವ್‌ ಪೊಲೀಸರಿಗೆ ದೂರು ಸಲ್ಲಿಸಿದೆ ಎಂದು ಹೇಳಿದ್ದಾರೆ.

Person who smoked a cigarette inside the plane: Minister Jotiradhya Scindia instructed to take action

2022ರ ಜನವರಿ 20ದು ದುಬೈನಿಂದ ದೆಹಲಿಗೆ ಪ್ರಯಾಣಿಸಲು ಉದ್ದೇಶಿಸಲಾದ SG 706 ಸ್ಟೈಸ್‌ ಜೆಟ್‌ ವಿಮಾನವನ್ನು ಪ್ರಯಾಣಿಕರು ಹತ್ತುತ್ತಿರುವಾಗ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. 21ನೇ ಸಾಲಿನಲ್ಲಿ ಕ್ಯಾಬಿನ್ ಸಿಬ್ಬಂದಿ ಆನ್-ಬೋರ್ಡಿಂಗ್ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ನಿರತರಾಗಿದ್ದಾಗ ಈ ಕಟಾರಿಯಾ ಎಂಬುವವ ಮತ್ತು ಅವರ ಸಹ ಪ್ರಯಾಣಿಕರು ವಿಡಿಯೋವನ್ನು ಚಿತ್ರೀಕರಿಸಿದರು. ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ವಿಷಯವು ಏರ್‌ಲೈನ್‌ನ ಗಮನಕ್ಕೆ ಬಂದಿತು ಎಂದು ವಕ್ತಾರರು ತಿಳಿಸಿದ್ದಾರೆ.

ಈ ಬಗೆಯ ಸದರಿ ಪ್ರಯಾಣಿಕನ ಬಗ್ಗೆ ನಾಗರಿಕ ವಿಮಾನಯಾನ ಅಗತ್ಯತೆಗಳ ನಿಬಂಧನೆಗಳ ಪ್ರಕಾರ ರಚಿಸಲಾದ ಆಂತರಿಕ ಸಮಿತಿಗೆ ವಿಷಯವನ್ನು ಉಲ್ಲೇಖಿಸಲಾಗಿದೆ. ಈ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು 15 ದಿನಗಳವರೆಗೆ ಹಾರಾಟ ನಿಷೇಧದ ಪಟ್ಟಿಗೆ ಸೇರಿಸಿದೆ ಎಂದು ವಕ್ತಾರರು ಹೇಳಿದ್ದಾರೆ.

English summary
A video of a person lying on the seat of SpiceJet with his legs crossed and lighting a cigarette and smoking has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X