• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮಕ್ಕಳಿಗಾಗಿಯಾದರೂ ನನ್ನ ಕೊಲ್ಲಬೇಡಿ ಎಂದು ಬೇಡಿಕೊಂಡರೂ ಕರುಣೆಯೇ ಬರಲಿಲ್ಲ

|

ಗುರ್ ಗಾಂವ್, ನವೆಂಬರ್ 14: "ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಮ್ಮ ಮಕ್ಕಳನ್ನು ತುಂಬ ಪ್ರೀತಿಸ್ತೀನಿ"- ಇದು 32 ವರ್ಷದ ದೀಪಿಕಾ ಚೌಹಾಣ್ ಹೇಳಿದ ಕೊನೆ ಮಾತುಗಳಾಗಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಕಳೆದ ತಿಂಗಳು ಗುರ್ ಗಾಂವ್ ನಲ್ಲಿರುವ ವ್ಯಾಲಿ ವ್ಯೂ ಅಪಾರ್ಟ್ ಮೆಂಟ್ ನ ಎಂಟನೇ ಮಹಡಿಯಿಂದ ಆಕೆಯನ್ನು ನೂಕಿ, ಕೊಲ್ಲಲಾಗಿದೆ ಎಂಬ ಆರೋಪ ಇದೆ.

ಈ ಪ್ರಕರಣದ ಆರೋಪ ಹೊತ್ತಿರುವುದು ಆಕೆಯ ಗಂಡ 35 ವರ್ಷದ ವಿಕ್ರಮ್ ಚೌಹಾಣ್. ಈ ದಂಪತಿಯ ನಾಲ್ಕು ವರ್ಷದ ಮಗಳು ಹಾಗೂ ಐದು ತಿಂಗಳ ಮಗ ಮನೆಯೊಳಗೆ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. "ಆಕೆಯ ನೆರೆಮನೆಯವರು ನೀಡಿದ ಹೇಳಿಕೆಯಿದು. ಆದರೆ ಅವರು ಈ ತನಿಖೆಯಲ್ಲಿ ಅದನ್ನು ಹೇಳಲು ಸಾಧ್ಯವಿಲ್ಲ ಹಾಗೂ ತಮ್ಮ ಬಗ್ಗೆ ವಿವರ ಬಹಿರಂಗ ಆಗಬಾರದು" ಎಂದು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅದೇ ತಮ್ಮ ಕೊನೆಯ ಪ್ರವಾಸ ಎಂಬ ಸೂಚನೆ ಆ ದಂಪತಿಗೆ ಸಿಕ್ಕೇ ಇರಲಿಲ್ಲ!

ಈ ಕೊಲೆಯಲ್ಲಿ ವಿಕ್ರಮ್ ಗೆ ಸಹಾಯ ಮಾಡಿದ ಮತ್ತೊಬ್ಬ ವ್ಯಕ್ತಿ ಇದ್ದಾನೆ. ದೀಪಿಕಾರನ್ನು ಕೆಳಗೆ ನೂಕುವುದಕ್ಕೆ ಆತ ಸಹಾಯ ಮಾಡಿದ್ದಾನೆ ಎಂದು ಆ ನೆರೆ ಮನೆಯವರು ತಿಳಿಸಿದ್ದು, ಸಹಾಯ ಮಾಡಿದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅನುಮಾನ ಪಡಲು ಏನು ಕಾರಣ ಅಂದರೆ, ದೀಪಿಕಾ ಹಾಗೂ ವಿಕ್ರಮ್ ಮಧ್ಯೆ ಮನಸ್ತಾಪ ಇತ್ತು. ವಿಕ್ರಮ ಮಣಿಕಟ್ಟಿನಲ್ಲಿ ಪರಚಿದ ಗಾಯಗಳಿದ್ದವು.

ವಿಕ್ರಮ್ ಗೆ ವಿವಾಹೇತರ ಸಂಬಂಧ ಇತ್ತು

ವಿಕ್ರಮ್ ಗೆ ವಿವಾಹೇತರ ಸಂಬಂಧ ಇತ್ತು

ಆ ಗುರುತುಗಳನ್ನು ಘಟನೆ ನಡೆದ ಕೆಲ ದಿನಗಳ ನಂತರ ವೈದ್ಯಕೀಯ ಪರೀಕ್ಷೆ ವೇಳೆ ಕಂಡುಹಿಡಿಯಲಾಯಿತು. ವಿಕ್ರಮ್ ಗೆ ಶೆಫಾಲಿ ಭಾಸಿನ್ ಎಂಬಾಕೆ ಜತೆಗೆ ವಿವಾಹೇತರ ಸಂಬಂಧ ಇತ್ತು. ಕೆಲ ತಿಂಗಳ ಹಿಂದೆ ಆ ಬಗ್ಗೆ ದೀಪಿಕಾಗೆ ಗೊತ್ತಾಗಿತ್ತು. ವಾರದ ಹಿಂದೆ ಇದೇ ಪ್ರಕರಣದಲ್ಲಿ ಶೆಫಾಲಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಕುಂಟುತ್ತಲೇ 6 ಕಿಮೀ ಓಡಿ ರೈಲು ಅಪಘಾತ ತಪ್ಪಿಸಿದ ಉಡುಪಿಯ ಕೃಷ್ಣ ಪೂಜಾರಿ

ಇಡೀ ದಿನ ಪತಿಗಾಗಿಯೇ ಆಕೆ ಕಾದಿದ್ದರು

ಇಡೀ ದಿನ ಪತಿಗಾಗಿಯೇ ಆಕೆ ಕಾದಿದ್ದರು

ಅಕ್ಟೋಬರ್ ಇಪ್ಪತ್ತೇಳನೇ ತಾರೀಕಿನಂದು ಕರ್ವಾಚೌತ್ ಇತ್ತು. ಇಡೀ ದಿನ ವಿಕ್ರಮ್ ಗೆ ಕರೆ ಮಾಡಿದ ದೀಪಿಕಾ, ಆತನಿಗಾಗಿ ಉಪವಾಸ ಮಾಡುತ್ತಿರುವುದಾಗಿ ಹಾಗೂ ಮನೆಗೆ ಬರುವಂತೆ ಕೇಳಿಕೊಂಡಿದ್ದರು. ಸಂಜೆ ಹೊತ್ತಿಗೆ ಆತ ವಾಪಸ್ ಬಂದಿದ್ದಾರೆ. ಈತನ ವರ್ತನೆಯಿಂದ ಬೇಸತ್ತಿದ್ದ ಆಕೆ, ಈಗಲೇ ಶೆಫಾಲಿ ಮನೆಗೆ ಹೋಗಿ ಜಗಳ ಮಾಡುತ್ತೇನೆ ಎಂದಿದ್ದಾರೆ.

ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್

ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣದಂತೆ ಎಚ್ಚರಿಕೆ

ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣದಂತೆ ಎಚ್ಚರಿಕೆ

ಸಿಸಿಟಿವಿ ಕ್ಯಾಮೆರಾಗಳು ಇದ್ದುದರಿಂದ ಎಲಿವೇಟರ್ ನಲ್ಲಿ ಹೋಗದ ವಿಕ್ರಮ್, ತನ್ನ ಪತ್ನಿ ಹೇಳಿದ ವಿಚಾರವನ್ನು ಶೆಫಾಲಿಗೆ ಸಂದೇಶ ಕಳುಹಿಸಿದ್ದಾನೆ. ತನ್ನ ಹೆಂಡತಿ ಅಲ್ಲೇ ಸುತ್ತಾಡಿ, ವಾಪಸ್ ಮನೆಗೆ ಬಂದಿರುವ ಸಂಗತಿ ಆ ನಂತರ ಅವನಿಗೆ ಗೊತ್ತಾಗಿದೆ. ತನ್ನ ಪೋಷಕರು ಮನೆಯಿಂದ ತೆರಳುವ ತನಕ ಕಾದಿದ್ದ ವಿಕ್ರಮ್, ಆ ನಂತರ ಉಪಾಯವಾಗಿ ದೀಪಿಕಾರನ್ನು ಬಾಲ್ಕನಿವರೆಗೆ ಕರೆತಂದು ಅಲ್ಲಿಂದ ದೂಡಿದ್ದಾನೆ. ಆ ನಂತರ ತಾನೇ ಸಹಾಯಕ್ಕೆ ಕೂಗಿಕೊಂಡು ಕೆಳಗೆ ಓಡಿಬಂದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದರು ದೀಪಿಕಾ

ರಕ್ತದ ಮಡುವಿನಲ್ಲಿ ಬಿದ್ದಿದ್ದರು ದೀಪಿಕಾ

ಸ್ವತಃ ತಾನೇ ಪತ್ನಿಯನ್ನು ದೂಡಿದ ವಿಕ್ರಮ್, ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಸಹಾಯಕ್ಕೆ ಕಿರುಚುತ್ತಾ ಅಪಾರ್ಟ್ ಮೆಂಟ್ ನ ಕೆಳಗೆ ಬಂದಿದ್ದಾನೆ. ಇತರರ ಸಹಾಯ ಪಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾರನ್ನು ವಾಹನವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.

English summary
“Please don’t kill me, I love our children.” These, said police, are believed to be the last words of Deepika Chauhan, 32, before she was allegedly pushed off from the eighth floor of her Valley View Estate apartment in Gurugaon on October 27. The accused in the case is her husband Vikram Chauhan, 35.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X