ದೆಹಲಿಯ ಈ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು ಹಾಕಿದ್ದು ರು. 23,000 ದಂಡ

ಗುರುಗ್ರಾಮ, ಸೆಪ್ಟೆಂಬರ್ 3: ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ದೆಹಲಿಯ ವ್ಯಕ್ತಿಯೊಬ್ಬರಿಗೆ 23,000 ರುಪಾಯಿ ದಂಡ ಹಾಕಲಾಗಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದು ಹಾಗೂ ಮುಖ್ಯ ದಾಖಲೆಗಳು ಇಲ್ಲದಿದ್ದ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.

ಸೆಪ್ಟೆಂಬರ್ ಒಂದನೇ ತಾರೀಕಿನಿಂದ ಸಂಚಾರ ನಿಯಮಗಳು ಕಠಿಣಗೊಳಿಸಿ, ದೊಡ್ಡ ಮೊತ್ತದ ದಂಡ ಮೊತ್ತವನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಇದ್ದ ದಂಡದ ಮೊತ್ತವನ್ನು ಕೆಲವಕ್ಕೆ ನಾಲ್ಕು ಪಟ್ಟಿನ ತನಕ ಏರಿಸಲಾಗಿದೆ. ಈ ನಿಯಮ ಜಾರಿಗೆ ಬಂದ ಮೊದಲ ದಿನ ಮೂವತ್ತೊಂಬತ್ತು ಸಾವಿರ ರುಪಾಯಿ ವಸೂಲಿ ಮಾಡಲಾಗಿತ್ತು.

ಟ್ರಿಪಲ್ ರೈಡಿಂಗ್, ಮಾಲಿನ್ಯ, ನಂಬರ್ ಪ್ಲೇಟ್ ನಲ್ಲಿನ ದೋಷ, ಕರ್ಕಶವಾದ ಹಾರ್ನ್ ಬಳಕೆ, ಚಾಲನೆ ವೇಳೆ ಮೊಬೈಲ್ ಫೋನ್ ನಲ್ಲಿ ಮಾತನಾಡಿದ್ದು ಸೇರಿ ವಿವಿಧ ನಿಯಮ ಉಲ್ಲಂಘನೆಗೆ ಈ ರೀತಿ ದಂಡ ವಿಧಿಸಲಾಗಿತ್ತು.

 23 Thousand Fine To A Person For Traffic Rules Violation After MV Act Amendment

ಇನ್ನು ಸೋಮವಾರ ಪೊಲೀಸರಿಗೆ ಸಿಕ್ಕಿಬಿದ್ದು, 23 ಸಾವಿರ ರುಪಾಯಿ ದಂಡ ಹಾಕಿಸಿಕೊಂಡಿರುವ ವ್ಯಕ್ತಿ ಹೆಸರು ದಿನೇಶ್ ಮದನ್. ಗುರುಗ್ರಾಮ್ ನ ಜಿಲ್ಲಾ ಕೋರ್ಟ್ ನಲ್ಲಿ ಪೊಲೀಸರು ಚಲನ್ ನೀಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ವಾಯು ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಇವ್ಯಾವುದೂ ದಿನೇಶ್ ಮದನ್ ಬಳಿ ಇರಲಿಲ್ಲ. ಜತೆಗೆ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಕರ್ತವ್ಯದಲ್ಲಿ ಇದ್ದ ಟ್ರಾಫಿಕ್ ಪೊಲೀಸ್ ದಿನೇಶ್ ಮದನ್ ರನ್ನು ತಡೆದು ನಿಲ್ಲಿಸಿದ್ದು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ. ಆದರೆ ಉಳಿದ ದಾಖಲೆಗಳು ಕೇಳಿದಾಗ ಅವು ಕೂಡ ಇಲ್ಲ ಎಂದು ಗೊತ್ತಾದಾಗ ಇಪ್ಪತ್ಮೂರು ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

"ನನ್ನ ಸ್ಕೂಟಿಯ ಬೆಲೆಯ ಹದಿನೈದು ಸಾವಿರ ಇರಬಹುದು. ನನ್ನ ವಾಟ್ಸ್ ಆಪ್ ನಲ್ಲಿ ಆರ್ ಸಿಯ ಪ್ರತಿ ಇತ್ತು. ಒಂದಿಷ್ಟು ಸಮಯ ಕಾಯ್ದಿದ್ದರೆ ದಂಡದ ಮೊತ್ತ ಇನ್ನಷ್ಟು ಕಡಿಮೆ ಆಗುತ್ತಿತ್ತು. ಇನ್ನು ಮುಂದೆ ಯಾವಾಗಲೂ ವಾಹನದ ದಾಖಲೆಗಳನ್ನು ತೆಗೆದುಕೊಂಡು ಹೋಗ್ತೀನಿ" ಎಂದಿದ್ದಾರೆ ದಿನೇಶ್ ಮದನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+