Gandhi Nagara Karnataka Elections 2023: ಚಿತ್ರನಗರಿ ಗಾಂಧಿನಗರ ಕ್ಷೇತ್ರ ಪರಿಚಯ
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗಾಂಧಿನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗುಂಡೂರಾವ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಸಪ್ತಗಿರಿ ಗೌಡ 10070 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಗಾಂಧಿನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಹೃದಯಭಾಗ ಅಂತಾನೇ ಕರೆಯಲ್ಪಡುವ ಗಾಂಧಿನಗರ ಚಂದನವನದ ಹೆಡ್ ಆಫೀಸ್ ಅಂತಾನೇ ಫೇಮಸ್. ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣ ಇರುವುದು ಇದೇ ವಿಧಾನಸಭಾ ವ್ಯಾಪ್ತಿಯಲ್ಲಿ. ಈ ಹಿಂದೆ ಹಲವು ನಿರ್ಮಾಪಕರು, ಹಲವು ನಿರ್ದೇಶಕರ ಕಚೇರಿಗಳು ಇಲ್ಲಿದ್ದವು. ಸಿನಿರಂಗದ ಹಲವು ನಿರ್ಮಾಪಕರ, ನಿರ್ದೇಶಕರ ಕಚೇರಿಗಳು ಇರುವುದು ಇದೇ ಗಾಂಧಿನಗರದಲ್ಲಿ.
ಇಲ್ಲಿನ ಹೋಟೆಲ್ ಕನಿಷ್ಕ ಸಿನಿಮಾ ಸುದ್ದಿಗೋಷ್ಠಿಗಳ ಖಾಯಂ ತಾಣವಾಗಿತ್ತು. ಜೊತೆಗೆ ಇಲ್ಲಿನ ಹಲವು ಹೋಟೆಲ್‌ಗಳಲ್ಲಿ ಸಿನಿ ರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಖಾಯಂ ಆಗಿ ಟೆಂಟ್ ಹಾಕುತ್ತಿದ್ದರರು. ಇದರ ಜೊತೆಗೆ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಆಗುವ ಮೇನ್ ಥಿಯೇಟರ್‌ಗಳೂ ಕೂಡ ಇಲ್ಲಿಯೇ ಇರುವುದು. ಹೀಗಾಗಿ ಇದನ್ನು ಚಿತ್ರನಗರಿ ಅಂತಾನೂ ಕರೆಯುತ್ತಾರೆ.

ಗಂಧಿನಗರದಲ್ಲಿ ಹಲವು ಭಾಷಿಕರು, ಹಲವು ಧರ್ಮ, ಜನಾಂಗದ ಜನರು ಇಲ್ಲಿನ ಕ್ಷೇತ್ರದ ಮತದಾರರು. ಹಲವು ಸಮಸ್ಯೆಗಳ ಜೊತೆಗೆ ಅಪರಾಧ ಪ್ರಕರಣಗಳೂ ಈ ಕ್ಷೇತ್ರದಲ್ಲಿ ಜಾಸ್ತಿಯಾಗಿವೆ. ಸದ್ಯ ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಇಲ್ಲಿನ ಶಾಸಕರಾಗಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ, ತೆಲುಗು, ಮಲಯಾಳಂ, ತಮಿಳು, ಉರ್ದು ಸೇರಿದಂತೆ ಹಲವು ಭಾಷೆ ಮಾತನಾಡುವ ಜನಗಳಿದ್ದಾರೆ. ದತ್ತಾತ್ರೇಯ ದೇವಸ್ಥಾನ, ಸುಭಾಷ್ ನಗರ, ಓಕಳೀಪುರಂ, ಕಾಟನ್ ಪೇಟೆ, ಗಾಂಧಿನಗರ, ಚಿಕ್ಕಪೇಟೆ, ಬಿನ್ನಿಪೇಟೆ ಎಂಬ ಬಿಬಿಎಂಪಿ ವಾರ್ಡ್‌ಗಳು ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಹಾಲಿ ಶಾಸಕ ದಿನೇಶ್ ಗುಂಡೂರಾವ್
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರರೇ ದಿನೇಶ್ ಗುಂಡೂರಾವ್. ಮಾಜಿ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ಜೊತೆಗೆ ಹಾಲಿ ಗಾಂಧಿನಗರ ಕ್ಷೇತ್ರದ ಶಾಸಕರು ಆಗಿದ್ದಾರೆ. 4 ಬಾರಿ ಇದೇ ಕ್ಷೇತ್ರದಿಂದ ಗೆದ್ದು ಬಂದಿರುವ ದಿನೇಶ್ ಗುಂಡೂರಾವ್ ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಪುತ್ರ
ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಮೂವರು ಪುತ್ರರಲ್ಲಿ ದಿನೇಶ್ ಗುಂಡೂರಾವ್ ಒಬ್ಬರು. ಮಾಜಿ ಸಿಎಂ ಮಗ ಎನ್ನುವ ಹಿರಿಮೆ ಜೊತೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎನ್ನುವುದು ಪ್ಲಸ್ ಪಾಯಿಂಟ್. ಅಂಬೇಡ್ಕರ್ ಭವನ, ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು ಇವರ ಸಾಧನೆ. ರಸ್ತೆಗಳ ಡಾಂಬರೀಕರಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮಣೆ ಹಾಕಿದ್ದು ಮತದಾರರ ಗಮನ ಸೆಳೆದಿದೆ.

ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು
ಗಾಂಧಿನಗರ ಕ್ಷೇತ್ರ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. 5 ವರ್ಷಗಳ ಹಿಂದೆ ಕ್ಷೇತ್ರ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ ಎನ್ನುವುದು ಬಿಜೆಪಿ ಆರೋಪ. ಹೊಸ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರಾಜಧಾನಿಯ ಹೃದಯ ಭಾಗವಾದರೂ ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರತಿಪಕ್ಷದ ಶಾಸಕ ಆಗಿರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ನೆರವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
2018ರ ವಿಧಾನಸಭಾ ಚುನಾವಣಾ ಫಲಿತಾಂಶ
ದಿನೇಶ್ ಗುಂಡೂರಾವ್ ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ 47,354 ಮತ ಗಳಿಸಿ ಜಯ ಸಾಧಿಸಿದ್ದರು. ಇನ್ನೂ ಬಿಜೆಪಿ ಸಪ್ತಗಿರಿ ಗೌಡ 37,284 ಮತ ಪಡೆಯುವ ಮೂಲಕ ಸೋಲು ಕಂಡಿದ್ದರು. ಜೊತೆಗೆ ಜೆಡಿಎಸ್ ನಾರಾಯಣ ಸ್ವಾಮಿ 36,635 ಮತ ಪಡೆಯುವ ಮೂಲಕ ಮೂರನೇ ಸ್ಥಾನಕ್ಕಿಳಿದಿದ್ದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ 54,968 ಮತ ಗಳಿಸುವ ಮೂಲಕ ಜಯ ಸಾಧಿಸಿದ್ದರು. ಬೊಜೆಪಿಯಿಂದ ಪಿ.ಸಿ. ಮೋಹನ್ 32,361 ಮತಗಳಿಸಿದ್ದರು.
Gandhi Nagara Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2008 | ದಿನೇಶ್ ಗುಂಡೂರಾವ್(ಕಾಂಗ್ರೆಸ್) | 41,188 | ಪಿ.ಸಿ ಮೋಹನ್(ಬಿಜೆಪಿ) | 34,242 |
| 2013 | ದಿನೇಶ್ ಗುಂಡೂರಾವ್(ಕಾಂಗ್ರೆಸ್) | 54,968 | ಪಿ.ಸಿ ಮೋಹನ್(ಬಿಜೆಪಿ) | 32,361 |
| 2018 | ದಿನೇಶ್ ಗುಂಡೂರಾವ್(ಕಾಂಗ್ರೆಸ್) | 47,354 | ಪಿ.ಸಿ ಮೋಹನ್(ಬಿಜೆಪಿ) | 37,284 |
ಈ ಬಾರಿ ಚುನಾವಣೆಗೆ ಟಿಕೆಟ್ ಯಾರಿಗೆ?
ಸದ್ಯ ಕಾಂಗ್ರೆಸ್‌ನಿಂದ ದಿನೇಶ್ ಗುಂಡೂರಾವ್ ಅವರೇ ಟಿಕೆಟ್ ಬಯಸಿದ್ದಾರೆ. ಹೀಗಾಗಿ ಅವರಿಗೆ ಪೈಪೋಟಿ ನೀಡುವವರು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ಇನ್ನು ಬಿಜೆಪಿಯಿಂದ ಯುವ ನಾಯಕ ಸಪ್ತಗಿರಿ ಗೌಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಬಾರಿ ಸೋತಿದ್ದ ಸಪ್ತಗಿರಿ ಗೌಡ ಈ ಬಾರಿ ಮತ್ತೊಮ್ಮೆ ಸ್ಪರ್ಧೆಗೆ ಬಯಸಿದ್ದಾರೆ. ಅತ್ತ ಜೆಡಿಎಸ್‌ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ವಿ. ನಾರಾಯಣ ಸ್ವಾಮಿ ಈ ಬಾರಿಯೂ ಸ್ಪರ್ಧಿಸುವುದು ಬಹುತೇಕ ಪಕ್ಕಾ ಆಗಿದೆ.
ಗಾಂಧಿನಗರ ಕ್ಷೇತ್ರದ ಮತದಾರರು
ಗಾಂಧಿನಗರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,75,600 ಇದ್ದು ಈ ಪೈಕಿ ಎಸ್‌ಸಿ-ಎಸ್‌ಟಿ - 60,000, ತಮಿಳು ಮತ್ತು ತೆಲುಗು ಭಾಷಿಕರು 60,000, ಒಕ್ಕಲಿಗರು - 33,000 ಮತದಾರರು ಇದ್ದಾರೆ. ಇನ್ನು ಬ್ರಾಹ್ಮಣ 18,000, ದೇವಾಂಗ - 15,000, ಮುಸ್ಲಿಂ - 12,000, ಲಿಂಗಾಯತ - 6,000- ಇದ್ದಾರೆ. ಇನ್ನುಳಿದಂತೆ ಕ್ಷೇತ್ರದಲ್ಲಿ ಕುರುಬ - 4000ದಷ್ಟು ಮತದಾರರಿದ್ದಾರೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications