ಶೆಟ್ಟೆಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ, ಹರಿದು ಬಂದ ಜನರ ದಂಡು

ಗದಗ, ಜನವರಿ, 23: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಶೆಟ್ಟಿ ಎಂಬ ಕೆರೆಯೊಂದರಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ಗೊತ್ತಾಗಿದ್ದೇ ತಡ ನೀರು ಕೆರೆಯಲ್ಲಿರುವ ನಾಯಿಗಳನ್ನು ನೋಡಲು ಸುತ್ತಮುತ್ತಲಿನ ಜನ ಕಿಕ್ಕಿರಿದು ಬರುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮಳೆ ಹೆಚ್ಚಾಗಿ ಸುರಿದಿದ್ದು, ಇಲ್ಲಿನ ಕೆರೆ ಕಟ್ಟೆಗಳು, ಹಳ್ಳ -ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದೆ. ಹಚ್ಚ ಹಸಿರಾದ ವಾತಾವರಣವೂ ಇದೆ. ಹಾಗಾಗಿ ಸುಂದರ ತಾಣ ಹುಡಿಕಿಕೊಂಡು ನಾಯಿಗಳು ಇಲ್ಲಿಗೆ ಬಂದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕೆರೆಯಲ್ಲಿ ಕಾಣಿಸಿಕೊಂಡ ನೀರು ನಾಯಿ

ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಈ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸದ್ಯ ಕೆರೆಯ ಅಚ್ಚುಕಟ್ಟು ಪ್ರದೇಶ (ಸುಮಾರು 234 ಹೆಕ್ಟೇರ್‌) ವಿಶಾಲವಾಗಿದ್ದರಿಂದ ನೀರು ನಾಯಿಗಳು ಇಲ್ಲಿಯೇ ಬೀಡು ಬಿಟ್ಟಿವೆ. ಅಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ವಾತಾವರಣವೂ ಇದ್ದು, ಈ ನೀರು ನಾಯಿಗಳು ಸದ್ಯ ಕೆರೆಯಲ್ಲಿ ತಿರುಗಾಡುತ್ತಿವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ಎದುರು ಚಲಿಸುವ ಪ್ರಾಣಿ ಇದಾಗಿದೆ.

Rare beaver found in Shettekere village

ಹರಿದು ಬಂದ ಜನರ ದಂಡು

ಈಗಾಗಲೇ ಮಳೆ ಹೆಚ್ಚಾಗಿ ಆಗಿರುವುದರಿಂದ ಇಲ್ಲಿನ ಹಳ್ಳ -ಕೊಳ್ಳ ತುಂಬಿ ಹರಿದಿದ್ದು, ಈ ನಾಯಿಗಳು ನದಿಯ ಮೂಲಕ ಬಂದು ಹಳ್ಳಕ್ಕೆ ಸೇರಿಕೊಂಡಿವೆ. ಬಳಿಕ ಅಲ್ಲಿಂದ ಈ ಕೆರೆಗೆ ಬಂದಿವೆ ಎನ್ನಲಾಗುತ್ತಿದೆ. ಇಂತಹ ಅಪರೂಪದ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಈ ಪ್ರಾಣಿಗಳು ನೋಡಲು ಸಿಗುವುದು ಅಪರೂಪವಾಗಿದೆ. ಏಕೆಂದರೆ ನೀರಿನಲ್ಲಿ ಕೆಲವೊಮ್ಮೆ ತಲೆಯೆತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ನೀರಿನಲ್ಲಿ ಚಲಿಸುತ್ತದೆ. ಕೆಲವೊಮ್ಮೆ ಮಾತ್ರ ಕೆರೆಯ ದಡದಲ್ಲಿ ಕಾಣುತ್ತಿವೆ. ಈ ಪ್ರಾಣಿ ಶೆಟ್ಟಿಕೆರೆ ಗ್ರಾಮದ ಕೆರೆಗೆ ಹೊಸ ಅತಿಥಿಯಾಗಿದೆ.

Rare beaver found in Shettekere village

ಅಳಿವಿನಂಚಿನಲ್ಲಿರುವ ನೀರು ನಾಯಿ

ಅಳಿವಿನಂಚಿನಲ್ಲಿರುವ ನೀರು ನಾಯಿಯ ಚಿತ್ರವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಲೇ ಇದ್ದಾರೆ. ಅಲ್ಲದೇ ಈ ಪ್ರದೇಶ ಹೆಚ್ಚಾಗಿ ಬಯಲು ಸೀಮೆಯಿಂದ ಕೂಡಿದೆ. ಇಂತಹ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಸಿಗುವುದು ತುಂಬಾ ಕಡಿಮೆ. ಹಾಗಾಗಿ ಸದ್ಯ ಶೆಟ್ಟಿ ಕೆರೆ ಚಿಕ್ಕದಾದ ಪ್ರಾಣಿ-ಪಕ್ಷಿಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಸದ್ಯ ಈ ಪ್ರದೇಶದಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+