Get Updates
Get notified of breaking news, exclusive insights, and must-see stories!

ಗದಗ ಪ್ರಗತಿ ಪರಿಶೀಲನೆ ಸಭೆ: ಫ್ರೂಟ್ ತಂತ್ರಾಂಶದಲ್ಲಿ ರೈತರು ಜಮೀನುಗಳ ಮಾಹಿತಿ ನೊಂದಾಯಿಸಿ- ಕೃಷ್ಣ ಬೈರೇಗೌಡ

ಗದಗ ನವೆಂಬರ್ 07: ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫ್ರೂಟ್ಸ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ ಹಾಗೂ ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ರೈತರ ಪ್ರತಿಯೊಂದು ಜಮೀನನ್ನು ಫ್ರೂಟ್ ತಂತ್ರಾಂಶದ ವ್ಯಾಪ್ತಿಗೆ ತರಬೇಕು ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರದಂದು ಜರುಗಿದ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಪರಿಹಾರ ಮೊತ್ತಗಳನ್ನು ರೈತರಿಗೆ ನೇರವಾಗಿ ಖಾತೆ ಜಮೆ ಮಾಡಲು ಫ್ರೂಟ್ ತಂತ್ರಾಂಶ ಬಳಸಲಾಗುತ್ತಿದೆ. ರೈತರೆಲ್ಲರೂ ತಮ್ಮ ಜಮೀನಿನ ನಿಖರವಾದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬೆಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಫ್ರೂಟ್ ತಂತ್ರಾಂಶದಲ್ಲಿ ಈಗಾಗಲೇ ನೋಂದಣಿ ಮಾಡಲಾಗಿದ್ದು. ಬಾಕಿ ಉಳಿದ ಶೇ.20 ರಿಂದ 25 ರಷ್ಟು ರೈತರು ನೋಂದಣಿ ಕಾರ್ಯವನ್ನು ನವೆಂಬರ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದರು.

revenue-minister-krishna-byre-gowda

ಜಿಲ್ಲೆಯಲ್ಲಿ ಬರ ಆವರಿಸಿದ ಹಿನ್ನಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಮೇವಿನ ಕೊರತೆ ಇದ್ದಲ್ಲಿ ಅಗತ್ಯಕ್ಕನುಸಾರ ಮೇವನ್ನು ಖರೀದಿ ಮಾಡಿಕೊಳ್ಳುವಂತೆ ಸೂಚಿಸಿದರು. ನೀರಿನ ವ್ಯವಸ್ಥೆ ಇರುವೆಡೆ ರೈತರಿಗೆ ಮೇವಿನ ಬೀಜದ ಕಿಟಗಳನ್ನು ನೀಡಲಾಗುವುದು ಅವರು ಮೇವನ್ನು ಬೆಳೆದು ತಮ್ಮ ಜಾನುವಾರುಗಳಿಗೆ ಬಳಸಿಕೊಳ್ಳಬಹುದಾಗಿದೆ. ಅಧಿಕವಾದಲ್ಲಿ ಸರ್ಕಾರಕ್ಕೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಮೇವಿನ ಕೊರತೆ ಆಗದಂತೆ ನಿಗಾವಹಿಸಲು ತಿಳಿಸಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16.5 ಕೋಟಿ ರೂ. ಅನುದಾನ ಇದ್ದು ಇದನ್ನು ಅಗತ್ಯಕ್ಕನುಸಾರವಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಖರೀದಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಗತ್ಯಬಿದ್ದಲ್ಲಿ ಗೋಶಾಲೆ, ಮೇವು ಬ್ಯಾಂಕ ತೆರೆಯಲು ತಿಳಿಸಿದರು.

ಬಗರಹುಕುಂ ಅಡಿ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಈ ಹಿಂದೆ ನೀಡಿದ ಸಾಗುವಳಿ ಚೀಟಿ ನೀಡಿದ ನೈಜತೆಯ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕಟಣಗಳು ನ್ಯಾಯಾಲಯದಲ್ಲಿವೇ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಡಿಜಿಟಲಿಕರಣ ಮಾಡಲಾಗುತ್ತಿದೆ.

ಸರ್ಕಾರಿ ಭೂಮಿ ರಕ್ಷಣೆಗೆ ಬೀಟ್ ಪದ್ಧತಿ: ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಆಪ್ ಸಿದ್ಧಪಡಿಸಲಾಗುತ್ತಿದ್ದು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರಿ ಜಮೀನುಗಳನ್ನು ಆಪ್ ಮೂಲಕ ಡಾಟಾಬೇಸನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗೆಗಳ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬದುನ್ನು ಪರಿಶೀಲನೆ ನಡೆಸಿ ಆಪ್ ಮೂಲಕ ಆ ಸ್ಥಳದಿಂದಲೇ ಧೃಡೀಕರಿಸಿ ವರದಿಯನ್ನು ಆಪ್‍ಲೊಡ ಮಾಡಬೆಕು. ಒಂದು ವೇಳೆ ಸರಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆಪ್ ಬಳಸಿ ಆನಲೈನ್ ಮೂಲಕವೇ ತಹಶೀಲ್ದಾರರಿಗೆ ವರದಿ ನೀಡಬೇಕು. ಈ ಪ್ರಕ್ರಿಯೆಯಿಂದ ಸರಕಾರಿ ಭೂ-ಕಬಳಿಕೆ ನಿಯಂತ್ರಣಗೊಳ್ಳಲಿದೆ ಎಂದರು.

ಕೋರ್ಟ ಕೇಸ್: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಮೀನುಗಳ ವಿಷಯವಾಗಿ ಅನೇಕ ಪ್ರಕರಣಗಳು ಕೋರ್ಟ ಮೆಟ್ಟಿಲೇರಿದ್ದರೂ ಸಹ ಯಾವುದೇ ವಕಾಲತ್ತು ಹಾಕದೇ ಇದ್ದ ರಾಜ್ಯದ ಸುಮಾರು 10,500 ಪ್ರಕರಣಗಳಿದ್ದವು. ಈ ಕುರಿತ ಪರಿಶೀಲನೆ ನಡೆಸಿ ವಕಾಲತ್ತು ಹಾಕಿಸಿದ್ದರಿಂದ ಸುಮಾರು 2500 ಕೇಸುಗಳು ಮಾತ್ರ ಉಳಿದುಕೊಂಡಿವೆ.

ಇ-ಆಫೀಸ: ಕಂದಾಯ ಇಲಾಖೆ ಕೆಲಸ ಕಾರ್ಯಗಳೆಲ್ಲವೂ ಚುರುಕುಗೊಳಿಸುವ ನಿಟ್ಟಿನಲ್ಲಿ ನಿಧಾನಗತಿ ತಪ್ಪಿಸಲು ಇ-ಆಫೀಸ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಇ-ಆಫೀಸ ಮೂಲಕವೇ ಕಡತಗಳ ಚಲನೆಯಾಗಬೇಕು. ಇದರಿಂದ ವಿಳಂಭಕ್ಕೆ ವಿದಾಯ ದೊರೆಯುತ್ತದೆ. ನಮ್ಮ ಸರ್ಕಾರದ ಜನಪರ ಹಾಗೂ ಪಾರದರ್ಶಕ ಆಡಳಿತದ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.

ದಾಖಲೆಗಳ ಡಿಜಿಟಲಿಕರಣ: ರೆಕಾಡ್ರ್ಸ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಶ್ವತವಾಗಿ ದಾಖಲೆಗಳನ್ನು ಉಳಿಸಲು ಡಿಜಿಟಲಿಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ದಾಖಲೆಗಳ ಸೂಕ್ತ ರಕ್ಷಣೆಗೆ ಉತ್ತಮ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ರಕ್ಷಣೆ ಮಾಡುತ್ತೇವೆ. ಜನಸಾಮಾನ್ಯರಿಗೆ ಸಲೀಸಾಗಿ ಅವರಿಗೆ ಸಂಬಂಧಿಸಿದ ದಾಖಲೆಗಳು ಸಿಗುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.

ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕೊನೆಯಲ್ಲಿರುವ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಗಜೇಂದ್ರಗಡ ತಾಲೂಕಿನ ಕೆಲವು ಗ್ರಾಮಗಳು ರೋಣ ತಾಲೂಕಿಗೆ ಸೇರ್ಪಡೆ ಹಾಗೂ ದಾಖಲೆಗಳ ಮಾರ್ಪಾಡ ಆಗದೇ ಇರುವುದರಿಂದ ಕೆಲವು ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರ ಪಡೆಯಲು ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ ಆದಷ್ಟು ಬೇಗನೆ ಈ ಸಮಸ್ಸÉಗೆ ಪರಿಹಾರ ನೀಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ ಸದಸ್ಯರಾದ ಎಸ್.ವಿ.ಸಂಕನೂರ ಮಾತನಾಡಿ ಲಕ್ಷ್ಮೇಶ್ವರ ಹಾಗೂ ಗದಗ ನಗರದಲ್ಲಿ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವದಾಗಿ ಸಭೆ ಗಮನಕ್ಕೆ ತಂದರು ಇದಕ್ಕೆ ಪ್ರತಿಯಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸಚಿವರು, ನೀರು ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆ ತಡೆದು ನಿಯಮಿತವಾಗಿ ಜನಸಾಮಾನ್ಯರಿಗೆ ನೀರು ಪೂರೈಕೆ ಮಾಡಲು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ ಜಿಲ್ಲೆಯಲ್ಲಿ ಸಧ್ಯ 11 ಹೋಬಳಿಗಳಿದ್ದು ಜನಸಂಖ್ಯೆ ಅನುಸಾರ 3 ಹೊಸ ಹೊಬಳಿ ಆಗಬೇಕಿದೆ. ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜೊತೆಗೆ ತಹಶೀಲ್ದಾರರಿಗೆ ಮೂರು ವಾಹನಗಳ ಅಗತ್ಯವಿದ್ದು ಪೂರೈಸುವಂತೆ ಕೋರಿದರು. ಹೊಸ ತಾಲೂಕು ಹಾಗೂ ಶೀಥಿಲಾವಸ್ಥೆಯಲ್ಲಿರುವ ತಾಲೂಕು ಕಚೇರಿಗಳ ದುರಸ್ತಿಗೆ ಅನುದಾನ ಒದಗಿಸುವಂತೆ ಕೋರಿದರು.

ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನೀಲಕುಮಾರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಸೇರಿದಂತೆ ತಹಶೀಲ್ದಾರರು, ಕಂದಾಯ ನೀರಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+