ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಗದಗಕ್ಕೆ ಬಂದಿರೋದ್ಯಾಕೆ?
ಗದಗ, ಜು.28: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಗದಗಕ್ಕೆ ಆಗಮಿಸಿದ್ದಾರೆ, ಪ್ರಹ್ಲಾದ್‌ಗೂ ಗದಗಕ್ಕೂ ಏನು ಸಂಬಂಧ ಅಂತೀರಾ ಇಲ್ಲಿದೆ ಕಾರಣ ಮುಂದೆ ಓದಿ..
ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಅಖಿಲ ಭಾರತ ಪಡಿತ ವಿತರಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ, ಬಳ್ಳಾರಿಯಲ್ಲಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ನಿಧನ ಹಿನ್ನೆಲೆ ಸಾಂತ್ವಾನ ಹೇಳಲು ಆಗಮಿಸಿದ್ದಾರೆ.
ಹಾಗೆಯೇ ಪಡಿತರ ವಿತರಕರ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದಾರೆ, ಅವುಗಳ ತೊಂದರೆಗಳನ್ನು ಆಲಿಸಿದ್ದಾರೆ, ಜತೆಗೆ ತಮ್ಮಿಂದಾಗುವ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಗದಗಕ್ಕೆ ಆಗಮಿಸಿದ್ದು ಗದಗ ಜಿಲ್ಲೆಯಲ್ಲಿರುವ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ, ನಗರದ ಡಾ. ಶೇಖರ್ ಸಜ್ಜನರ್ ಮನೆಗೆ ಭೇಟಿ ನೀಡಿದ್ದು ಅವರ ಮನೆಯಲ್ಲಿಯೇ ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದ್ದಾರೆ, ಭಾನುವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಖಿಲ ಭಾರತ ಗಾಣಿಗ ಸಮಾಜ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications