ಇನ್ನು ಶೇ 5ರಷ್ಟು ಅಸಮಾಧಾನ ಉಳಿದಿದೆ; ಲಕ್ಷ್ಮಣ ಸವದಿ!
ಗದಗ, ಜನವರಿ 25: "ಜನರ ಸೇವೆ ಮಾಡಬೇಕು ಎನ್ನುವ ಬಯಕೆ ಇರುವುದು ತಪ್ಪಲ್ಲ. ಸಣ್ಣಪುಟ್ಟ ವ್ಯತ್ಯಾಸ ಇರುತ್ತವೆ. ಶೇ 100ಕ್ಕೆ 95 ರಷ್ಟು ಭಾಗ ಸರಿಹೋಗಿದೆ. ಇನ್ನು ಶೇ 5ರಷ್ಟು ಅಸಮಾಧಾನ ಉಳಿದಿದೆ. ಅದನ್ನು ಸರಿ ಪಡಿಸುತ್ತೇವೆ" ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಭಾನುವಾರ ಗದಗದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, "ರಮೇಶ್ ಜಾರಕಿಹೊಳಿ ಅವರು ಚಿಕ್ಕಮಗಳೂರಿನಲ್ಲಿ ಪರಿಶೀಲನೆ ಸಭೆಗೆ ಹೋದ ವೇಳೆ ಅನೇಕ ಸಚಿವರು, ಶಾಸಕರು ಭೇಟಿಯಾಗಿದ್ದಾರೆ, ಇದು ಸ್ವಾಭಾವಿಕ" ಎಂದರು.
"ನಾನು ಈಗ ಗದಗಕ್ಕೆ ಬಂದಿದ್ದೇನೆ. ನನ್ನನ್ನು ಸಚಿವರು, ಶಾಸಕರು ಭೇಟಿಯಾಗುತ್ತಿದ್ದಾರೆ. ಅದನ್ನು ಪ್ರತ್ಯೇಕ ಸಭೆ ಅಂತಾ ಪರಿಗಣಿಸಬಾರದು" ಎಂದು ಡಿಸಿಎಂ ಲಕ್ಷ್ಮಣ ಸವದಿ ಸಲಹೆ ನೀಡಿದರು.

"ಸಚಿವರು ಭೇಟಿ ನೀಡಿದಾಗ ಭಾಗದಲ್ಲಿನ ಅಭಿವೃದ್ಧಿ ಬಗ್ಗೆ ಮನವಿ ಕೊಡುವುದು, ಕೆಲಸ ಮಾಡುವಂತಹದು ಆಗಿದೆ. ಆದರೆ, ಯಾವುದೇ ಭಿನ್ನಮತವು ಅಲ್ಲ, ಯಾವುದೇ ಸಭೆಯೂ ಅಲ್ಲ" ಎಂದು ಸ್ಪಷ್ಟಪಡಿಸಿದರು.
ನಮ್ಮದೊಂದು ಕುಟುಂಬ; "ನಮ್ಮದೊಂದು ಕುಟುಂಬ. ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದು ಸಹಜ. ಎಲ್ಲರಿಗೂ ಸಚಿವರು ಆಗಬೇಕು. ಜನರ ಸೇವೆ ಮಾಡಬೇಕು ಎನ್ನುವ ಬಯಕೆ ಇರುವುದು ತಪ್ಪಲ್ಲ. ಸಣ್ಣಪುಟ್ಟ ವ್ಯತ್ಯಾಸ ಇರುತ್ತವೆ. 100ಕ್ಕೆ ಶೇ 95 ರಷ್ಟು ಭಾಗ ಸರಿಹೋಗಿದೆ. ಇನ್ನು ಶೇ 5 ರಷ್ಟು ಭಾಗ ಉಳಿದಿದೆ ಅದನ್ನು ಸರಿ ಪಡಿಸುತ್ತೇವೆ" ಎಂದು ಲಕ್ಷ್ಮಣ ಸವದಿ ತಿಳಿಸಿದರು.
"ಎಲ್ಲರಿಗೂ ದೊಡ್ಡ ಇಲಾಖೆ ಬೇಕು. ಕೆಲಸ ಮಾಡಲಿಕ್ಕೆ ದೊಡ್ಡ ಅಥವಾ ಸಣ್ಣ ಇಲಾಖೆ ಎಂದು ನೋಡುವುದಲ್ಲ. ಕೆಲಸ ಮಾಡುವವರಿಗೆ ಯಾವ ಇಲಾಖೆಯಾದರೂ ಮಾಡುತ್ತಾರೆ. ಭಾರ ಹೊರುವವರಿಗೆ ಹಿಂದೆ ಹೊತ್ತರು ಅಷ್ಟೇ ಮುಂದೇ ಹೊತ್ತರು ಅಷ್ಟೇ" ಎಂದರು.












Click it and Unblock the Notifications