Get Updates
Get notified of breaking news, exclusive insights, and must-see stories!

Lakkundi Gold Found Case: ಲಕ್ಕುಂಡಿಯಲ್ಲಿ 'ಚಿನ್ನ' ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದಲ್ಲಿ ಬಿರುಕು

ಲಕ್ಕುಂಡಿ, ಜನವರಿ 26: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಅಡಿಪಾಯ ತೆಗೆಯುವಾಗ ನಿಧಿ ಪತ್ತೆಯಾಗಿತ್ತು. ಇದು ಇಡೀ ದೇಶಾದ್ಯಂತ ಗಮನ ಸೆಳೆದಿತ್ತು. ಪ್ರಜ್ವಲ್ ರಿತ್ತಿ ಅವರು ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ಅವರಿಗೆ ಇಂದು (ಜನವರಿ 26) ಗಣರಾಜ್ಯೋತ್ಸವಂದು ಸನ್ಮಾನ ಮಾಡಲಾಗಿದೆ. ಇದರ ಬೆನ್ನಲ್ಲೇ ಈ ಕುಟುಂಬದವರಲ್ಲಿ ಬಿರುಕು ಮೂಡಿದೆ. ಹಾಗಾದ್ರೆ, ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನಿಧಿ ಸರ್ಕಾರಕ್ಕೆ ನೀಡಿದ್ದ ಕಸ್ತೂರೆವ್ವ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಸ್ತೂರೆವ್ವ ಪುತ್ರ ರಿತ್ತಿಗೆ ನಿಧಿ ಸಿಕ್ಕಿತ್ತು. ಇದನ್ನ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆ ಸನ್ಮಾನ ಮಾಡಿಸಿಕೊಂಡ ಕುಟುಂಬದೊಳಗೆ ಅಪಸ್ವರ ಕೇಳಿಬಂದಿದೆ.

Lakkundi Gold Found Case

ಕುಟುಂಬದಲ್ಲಿ ಬಿರುಕು: ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿಗೆ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗಿದೆ. ಆದರೆ, ಕಾರ್ಯಕ್ರಮಕ್ಕೆ ಕುಟುಂಬದ ಹಿರಿಯರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಜ್ವಲ್ ರಿತ್ತಿಯ ಅಜ್ಜಿ ಬಸಮ್ಮ ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸಮ್ಮ ಅಸಮಾಧಾನ: ನಮ್ಮ ಕುಟುಂಬವನ್ನೇ ಮರೆತಿದ್ದಾರೆ ಎಂದು ವ್ಯಕ್ತಪಡಿಸಿದ ಬಸಮ್ಮ ಅವರು, ಜಿಲ್ಲಾಡಳಿತವೂ ಸೌಜನ್ಯಕ್ಕೂ ಕುಟುಂಬದ ಹಿರಿಯರಿಗೆ ಗೌರವ ನೀಡಿಲ್ಲ ಎಂದು ಆರೋಪಿಸಿದ್ದಾರೆ. "ನಿಧಿ ಸಿಕ್ಕ ನಂತರ ಸೊಸೆ ಕಸ್ತೂರೆವ್ವ ನನಗೆ ಯಾರೂ ಇಲ್ಲ ಅಂತಾ ಹೇಳಿದ್ದಾರೆ. ನಾವೂ ಇಲ್ವಾ? ನಮಗೆ ಗೌರವ ಇಲ್ಲವಾ? ನಮಗೆ ಪರಿಹಾರ ಬೇಡ, ಗೌರವ ಕೊಡಿ ಸಾಕು," ಎಂದು ಬಸಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಜ್ವಲ್ ರಿತ್ತಿ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಸಂತಸದ ವಿಷಯ ಆಗಿದೆ. ಆತನ ಕಾರ್ಯದ ಬಗ್ಗೆ ಹೆಮ್ಮೆ ಇದೆ. ಆದರೆ, ಪ್ರಜ್ವಲ್ ಹಾಗೂ ಅವರ ತಾಯಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಅನಾರೋಗ್ಯದಿಂದ ನರಳುತ್ತಿದ್ದ ತಮ್ಮ ಪುತ್ರ ಬಸವರಾಜ್ ಅವರಿಗೆ ಸೂಕ್ತ ಆರೈಕೆ ಮಾಡಲಿಲ್ಲ. ಬಂಗಾರದ ನಿಧಿ ಸಿಕ್ಕ ಜಾಗ ಬಸವರಾಜ್ ಅವರ ಹೆಸರಿನಲ್ಲಿದ್ದು, ಅದು ರಿತ್ತಿ ಕುಟುಂಬದ ಜಾಗವೇ ಎಂದು ಸ್ಪಷ್ಟಪಡಿಸಿದ್ದಾರೆ.

ಕಸ್ತೂರೆವ್ವ ವಿರುದ್ಧ ಆಕ್ರೋಶ: ಪ್ರಜ್ವಲ್ ತಾಯಿ ಕಸ್ತೂರೆವ್ವ ತಮ್ಮ ತವರು ಮನೆಯವರ ಹೆಸರನ್ನೇ ಮುಂದಿಟ್ಟು ಮಾತನಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ಎಲ್ಲಾ ಅಸಮಾಧಾನಗಳ ನಡುವೆಯೂ "ಏನೇ ಇರಲಿ, ರಿತ್ತಿ ಕುಟುಂಬದ ಕುಡಿ ಪ್ರಜ್ವಲ್ ಭವಿಷ್ಯದಲ್ಲಿ ಒಳ್ಳೆಯದಾಗಲಿ," ಎಂದು ಅಜ್ಜಿ ಬಸವ್ವ ರಿತ್ತಿ ಹಾರೈಸಿದ್ದಾರೆ.

ಲಕ್ಕುಂಡಿ ಚಿನ್ನ ಪತ್ತೆ ಹಿನ್ನೆಲೆ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಒಂದು ಮನೆಯ ಅಡಿಪಾಯ ತೋಡುವಾಗ ಚಿನ್ನ ನಿಧಿ ಸಿಕ್ಕಿದೆ. ರಿತ್ತಿ ಕುಟುಂಬ ತಮ್ಮ ಮನೆ ಅಡಿಪಾಯಕ್ಕಾಗಿ ಭೂಮಿ ಅಗೆಯುವಾಗ ಒಂದು ತಾಮ್ರದ ಪಾತ್ರದಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. ಆ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 466 ಗ್ರಾಂ (ಅಂದಾಜು ಸುಮಾರು ಅರ್ಧ ಕಿಲೋ ಗ್ರಾಮ್) ಇದೆ ಎಂದು ವರದಿಗಳು ಆಗಿದ್ದವು.

ಪತ್ತೆಯಾಗಿದ್ದ ನಿಧಿಯನ್ನು 14 ವಯಸ್ಸಿನ ಪ್ರಜ್ವಾಲ್ ರಿತ್ತಿ ಎಂಬ ಬಾಲಕ ಮತ್ತು ಅವರ ತಾಯಿ ತಕ್ಷಣ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದು ದೊಟ್ಟ ಮಟ್ಟದಲ್ಲಿ ಸುದ್ದಿಯಾಗಿತ್ತು. ಪತ್ತೆಯಾದ ಆಭರಣಗಳಲ್ಲಿ ಹಾರ, ಉಂಗುರಗಳು ಸೇರಿದಂತೆ ಮತ್ತು ಇನ್ನೂ ಹಲವು ಚಿನ್ನದ ವಸ್ತುಗಳು ಸೇರಿವೆ ಎಂದು ತಿಳಿದುಬಂದಿತ್ತು. ಮೂಲಗಳ ಪ್ರಕಾರ, ಇದು ಸುಮಾರು 300-400 ವರ್ಷ ಹಳೆಯ ಆಭರಣ ಆಗಿರಬಹುದು ಎಂದು ಇತಿಹಾಸಕಾರರು ಹೇಳಿದ್ದಾರೆ.

ಲಕ್ಕುಂಡಿ ಐತಿಹಾಸಿಕ ಹಿನ್ನೆಲೆ: ಲಕ್ಕುಂಡಿ ಒಂದು ಕಾಲದಲ್ಲಿ ಚಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಸಮಯದಲ್ಲಿ ಅತ್ಯಂತ ಸಮೃದ್ಧ ಪಟ್ಟಣವಾಗಿತ್ತು. ಇಲ್ಲಿ ಐತಿಹಾಸಿಕವಾಗಿ ಚಿನ್ನದ ನಾಣ್ಯಗಳು ಮುಚ್ಚಿ ಹಡಗಿಹೋಗಿದ್ದವು.

ಅಧಿಕಾರಿಗಳು ಹೇಳಿದ್ದೇನು?: ಪತ್ತೆಯಾದ ಆಭರಣಗಳನ್ನು ASI ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕೆಲವು ಹೇಳಿಕೆಗಳ ಪ್ರಕಾರ, ಇದು "ರಾಜಮನೆತನದ ಕುಟುಂಬದ ಆಭರಣಗಳು" ಆಗಿರಬಹುದು ಎಂದು ಪುರಾತತ್ವ ತಜ್ಞರು ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಚಿನ್ನ ಪತ್ತೆಯ ನಂತರ ಸರ್ಕಾರ ಉತ್ಖನನ ಕಾರ್ಯವನ್ನು ಪ್ರಾರಂಭಿಸಿದ್ದು, ಸ್ಥಳಕ್ಕೆ ASI, ರಾಜ್ಯ ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ಮತ್ತಷ್ಟು ಹುಡುಕಾಟ ಕಾರ್ಯ ಮುಂದುವರೆಸಿದ್ದಾರೆ. ಇನ್ನೂ ಪತ್ತೆಯಾಗಿರುವ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಕಾನೂನಾತ್ಮಕವಾಗಿ ಸರಿಯಾಗಿದೆ. ಕುಟುಂಬದ ಪ್ರಾಮಾಣಿಕತೆಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪ್ರಶಂಸಾರ್ಹ ಗೌರವ ಸಲ್ಲಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+