ಗದಗ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್- ಬಿಜೆಪಿ ಪೈಪೋಟಿ: ಯಾರು ಅಭ್ಯರ್ಥಿಗಳು? ಮಾಹಿತಿ, ವಿವರ ತಿಳಿಯಿರಿ
ಗದಗ, ಏಪ್ರಿಲ್ 12: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections ) ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿವೆ. ಕಾಂಗ್ರೆಸ್ ( Congress ) ಎರಡು ಪಟ್ಟಿಯನ್ನು ಪ್ರಕಟಿಸುವ ಮೂಲಕ 166 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿಯ ( BJP ) ಮೊದಲ ಪಟ್ಟಿ ಹೊರಬಂದಿದೆ. ಇದರಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಜೆಡಿಎಸ್ ( JDS ) 92 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ.
ಗದಗ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಪೈಕಿ ಮೂರರಲ್ಲಿ ಕಾಂಗ್ರೆಟ್ ಟಿಕೆಟ್ ಘೋಷಿಸಿದೆ. ಬಿಜೆಪಿ ಮೂರರಲ್ಲಿ ಟಿಕೆಟ್ ಘೋಷಿಸಿದ್ದು, ಜೆಡಿಎಸ್ ಯಾವುದೇ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿಲ್ಲ. ಕಿತ್ತೂರು ಕರ್ನಾಟಕದಲ್ಲಿ ಬರುವ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಗದಗದಲ್ಲಿ ಕಾಂಗ್ರೆಸ್‌ನಿಂದ ಎಚ್‌ಕೆ ಪಾಟೀಲ್ ಅವರು ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಅನಿಲ್ ಮೆಣಸಿನಕಾಯಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕಳೆದ ಬಾರಿ ಅನಿಲ್ ಮೆಣಸಿನಕಾಯಿ ಅವರು ಎಚ್‌ಕೆ ಪಾಟೀಲ್ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಬ್ಬರ ನಡುವೆ ಪೈಪೋಟಿ ಏರ್ಪಡುವುದು ನಿಶ್ಚಿತವಾಗಿದೆ.
| ಕ್ಷೇತ್ರ | ಬಿಜೆಪಿ ಅಭ್ಯರ್ಥಿ | ಕಾಂಗ್ರೆಸ್ ಅಭ್ಯರ್ಥಿ | ಜೆಡಿಎಸ್ ಅಭ್ಯರ್ಥಿ | ಎಎಎಪಿ ಅಭ್ಯರ್ಥಿ |
| ಗದಗ | ಅನಿಲ್ ಮೆಣಸಿನಕಾಯಿ | ಎಚ್‌ಕೆ ಪಾಟೀಲ್ | ಫೀರ್‌ಸಾಬ್ ಶೇಖ್ ದೊಡ್ಡಮನಿ | |
| ನರಗುಂದ | ಸಿಸಿ ಪಾಟೀಲ್ | ಬಿಆರ್ ಯಾವಗಲ್ | ರಾಮಪ್ಪ ದ್ಯಾಮಪ್ಪ ಹೊನ್ನವರ | |
| ರೋಣ | ಜಿಎಸ್ ಪಾಟೀಲ್ | ಆನೇಕಲ್ ದೊಡ್ಡಯ್ಯ | ||
| ಶಿರಹಟ್ಟಿ ( ಮೀಸಲು ) | ಡಾ.ಚಂದ್ರ ಲಮಣಿ | ಮಲ್ಲಿಕಾರ್ಜುನ್ ದೊಡ್ಡಮನಿ |
ಗದಗ ಜಿಲ್ಲೆಯ ನರಗುಂದದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಅವರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಕಾಂಗ್ರೆಸ್‌ನಿಂದ ಬಿಆರ್ ಯಾವಗಲ್ಲ್ ಅವರಿಗೆ ಟಿಕೆಟ್ ದೊರೆತಿದೆ. ಕಳೆದ ಬಾರಿಯೂ ಇಬ್ಬರು ನಾಯಕರ ನಡುವೆ ಪೈಪೋಟಿ ಇತ್ತು. ಈ ಬಾರಿಯೂ ನರಗುಂದ ಕ್ಷೇತ್ರದಲ್ಲಿ ಇಬ್ಬರ ನಡುವೆ ಪೈಪೋಟಿ ಏರ್ಪಡುವುದು ಶತಸಿದ್ದ.
ಗದಗ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ರೋಣದಲ್ಲಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಣಾಹಣಿ ಇದೆ. ಮಾಜಿ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಆದರೆ, ಬಿಜೆಪಿ ಇಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಕಳಕಪ್ಪ ಬಂಡಿ, ಅವರ ಪತ್ನಿ ಹಾಗೂ ಸಹೋದರ ಬಿಜೆಪಿ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ. ಈ ಮೂವರಲ್ಲಿ ಯಾರಿಗೆ ಸಿಕ್ಕರೂ, ಜಿಎಸ್ ಪಾಟೀಲರಿಗೆ ಪೈಪೋಟಿ ಒಡ್ಡು ಸಾಧ್ಯತೆ ಇದೆ.
ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿಲ್ಲ. ಬಿಜೆಪಿಯು ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಈಗಿರುವ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ. ಈ ಕ್ಷೇತ್ರದಲ್ಲಿ ಸುಜಾತಾ ದೊಡ್ಡಮನಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರೂ ರೇಸ್‌ನಲ್ಲಿದ್ದಾರೆ.












Click it and Unblock the Notifications