ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಗದಗ ಜಿಲ್ಲೆಯ ಜನತೆಗೆ ಹೇಳಿದ ಕಿವಿ ಮಾತಿದು
ಗದಗ, ಏಪ್ರಿಲ್, 28: ವಿಧಾನಸಭೆ ಚುನವಾಣೆ ಹಿನ್ನೆಲೆ ಇಂದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಚಾರ ಮಾಡಿದರು. ಈ ವೇಳೆ ಅವರು ಶಿರಹಟ್ಟಿ ಜನರಿಗೆ ಕಿವಿಮಾತನ್ನು ಹೇಳಿದರು.
ನಾನು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಹೀಗಾಗಿ ನಿಮ್ಮಲ್ಲಿ ಕ್ಷಮೆ ಕೇಳ್ಳುತ್ತೇನೆ. ಚಂದ್ರು ಲಮಾಣಿ ಅವರನ್ನು ಗೆಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನಿಮ್ಮ ಮತ ಹಾಕಿ ಎಂದು ಜನರಿಗೆ ಮನವಿ ಮಡಿದರು.

ನೀವು ಯಾರನ್ನೋ ಶಾಸಕನನ್ನಾಗಿ ಆಯ್ಕೆ ಮಾಡಬೇಡಿ. ಸ್ಥಿರ ಸರ್ಕಾರ ರಚನೆ ಮಾಡಲು ಅವಕಾಶ ಕೊಡಿ ಅಂತಾ ಕೇಳಲು ಶಿರಹಟ್ಟಿಗೆ ಬಂದಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ರೀವರ್ಸ್ ಗೇರ್ ಹಾಕಿ ಹಿಂದಕ್ಕೆ ಕಳುಹಿಸುತ್ತಾರೆ. ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕೂಡ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮಹದಾಯಿ ಸಮಸ್ಯೆ ಬಗೆಹರಿದಿದೆ ಎಂದರು.
ಕೃಷ್ಣ, ಭದ್ರಾ ಮೇಲ್ದಂಡೆ ಯೋಜನೆಯನ್ನೂ ಸಹ ನಾವೇ ಬಗೆ ಹರಿಸಿದ್ದೇವೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್, ಜೆಡಿಎಸ್‌ವರು ಪಿಎಫ್ಐ ಬ್ಯಾನ್ ಮಾಡದೇ ಸುಮ್ಮನಿದ್ದರು. ನಂತರ ಪಿಎಫ್ಐ ಬ್ಯಾನ್ ಮಾಡಲು ದೈರ್ಯ ತೋರಿದ್ದು ಬಿಜೆಪಿ ಸರ್ಕಾರ ಎಂದರು.
ಇನ್ನು ಮೀಸಲಾತಿಯನ್ನೂ ಸಹ ಎಲ್ಲಾ ಸಮಾಜಕ್ಕೂ ನೀಡಿದ್ದೇವೆ. ಮುಸ್ಲಿ ಸಮುದಾಯಕ್ಕೆ 4% ಮೀಸಲಾತಿಯನ್ನು ಕಾಂಗ್ರೆಸ್ ನೀಡಿತ್ತು.
ಆದರೆ ಬಿಜೆಪಿ ಸರ್ಕಾರ ಮಾತ್ರ ಅದನ್ನು ಕಿತ್ತುಹಾಕಿತ್ತು. ಇದೀಗ ಕಾಂಗ್ರೆಸ್‌ನವರು ಮುಸ್ಲಿಮರಿಗೆ ಮತ್ತೆ ಮೀಸಲಾತಿಯನ್ನು ನೀಡುತ್ತೇವೆ ಅಂತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ತುಷ್ಠೀಕರಣ ರಾಜನೀತಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ದಲಿತರಿಗಾಗಿ , ಬಡವರಿಗಾಗಿ ಏನು ಮಾಡಿದ್ದಾರೆ ಅನ್ನುವುದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತ ನಿಧಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ. ಖರ್ಗೆ ಅವರು ನರೇಂದ್ರ ಮೋದಿ ಅವರಿಗೆ ಆಡಿದ ಮಾತುಗಳು ನಿಮ್ಮ ಮನ ನೋಯಿಸಿದೆ. ಅವರಿಗೆ ನೀವು ಬುದ್ದಿ ಕಲಿಸಬೇಕು ಎಂದರು.












Click it and Unblock the Notifications