ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಡರಗಿ ಪುರಸಭೆಯಲ್ಲಿ ಕುರ್ಚಿ, ಟೇಬಲ್ ಎಸೆದಾಡಿ ಸದಸ್ಯನ ಪುಂಡಾಟ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆ.29: ಇತ್ತೀಚೆಗೆ ಜನಪ್ರತಿನಿಧಿಗಳಲ್ಲಿ ಮೌಲ್ಯಗಳೇ ಇಲ್ಲದಂತಾಗಿವೆ. ಜನರ ಕಷ್ಟಗಳಿಗೆ ಎಷ್ಟರಮಟ್ಟಿಗೆ ಸ್ಪಂದಿಸ್ತಾರೆ ಅನ್ನೋದೆ ಒಂದು ಯಕ್ಷಪ್ರಶ್ನೆ. ಆದ್ರೆ ಗೆಲುವಿನ ಬಳಿಕ ಅವರ ಕಾರ್ಯವೈಖರಿ ನಡವಳಿಕೆಗಳು ಹಾದಿಬಿಟ್ಟು ಗುಡ್ಡ ಸೇರಿಬಿಡ್ತವೆ. ಅಂದ ಹಾಗೆ ಪುರಸಭೆಯ ಸದಸ್ಯರು ಇಂತಹದ್ದೇ ಒಂದು ಪುಂಡಾಟಿಕೆ ನಡೆಸಿ ಸುದ್ದಿಗೆ ಗ್ರಾಸವಾಗಿದ್ದಾರೆ.

Breaking: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದ ಮುಖ್ಯ ಶಿಕ್ಷಕ ಅಮಾನತುBreaking: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದ ಮುಖ್ಯ ಶಿಕ್ಷಕ ಅಮಾನತು

ಅಂದ ಹಾಗೆ ಗದಗ ಜಿಲ್ಲೆಯ ಮುಂಡರಗಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗಲಾಟೆ ನಡೆದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ರಾದ್ಧಾಂತ ಮಾಡಿಕೊಂಡಿದ್ದಾರೆ. ಪುರಸಭೆಯ ಸ್ಟ್ಯಾಂಡಿಂಗ್ ಕಮಿಟಿ ಚೇರ್ಮನ್ ಆಯ್ಕೆ ವಿಚಾರವಾಗಿ ಸದಸ್ಯರು ಪರಸ್ಪರ ಕಚ್ಚಾಡಿಕೊಂಡಿದ್ದಾರೆ. ವಾದ ವಾಗ್ವಾದ ನಡೆದು ಕೊನೆಗೆ ಕುರ್ಚಿ, ಟೇಬಲ್ ಮೇಲೆ ದರ್ಪ ತೋರಿದ್ದಾರೆ. ಕಾಂಗ್ರೆಸ್ ಸದಸ್ಯ ರಾಜಾಭಕ್ಷಿ ಬೆಟಗೇರಿ ಎಂಬ ಸದಸ್ಯ ಪುಂಡಾಟಿಕೆ ಮೆರೆದಿದ್ದಾರೆ. ಸದನದ ಗೌರವ ಕಾಪಾಡಿಕೊಳ್ಳಬೇಕಿದ್ದ ಸದಸ್ಯರು ಚಿಕ್ಕಮಕ್ಕಳಂತೆ ಒಬ್ಬೊರಿಗೊಬ್ಬರ ಮೇಲೆ ಕಿರುಚಾಡಿ ಜಗಳವಾಡಿದ್ದಾರೆ.

Clash among members in Mundaragi Municipality of Gadag

ಪುರಸಭೆಯ ಒಟ್ಟು ಸದಸ್ಯರ ಪೈಕಿ‌ 6 ಜನ ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದಲ್ಲಿ ಇದ್ದಾರೆ‌. ಉಳಿದ 14 ಜನ ಬಿಜೆಪಿ ಸದಸ್ಯರು ಇದ್ದಾರೆ. ಪುರಸಭೆಯ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವರು ಏಕಪಕ್ಷೀಯ, ಸರ್ವಾಧಿಕಾರಿ ಧೋರಣೆ ಮಾಡ್ತಿದ್ದಾರೆ, ಉಳಿದ ಸದಸ್ಯರ ಗಮನಕ್ಕೆ ತರದೇ ತೀರ್ಮಾನ ಕೈಗೊಳ್ತಾರೆ ಎಂಬ ಆರೋಪವನ್ನ ವಿರೋಧ ಪಕ್ಷದ ಸದಸ್ಯರು ಮಾಡ್ತಿದ್ದರು.

Clash among members in Mundaragi Municipality of Gadag

ಸ್ಟ್ಯಾಂಡಿಂಗ್ ಕಮಿಟಿಯ ಚೇರ್ಮನ್ ಅವರನ್ನ ಅಧ್ಯಕ್ಷರು ದಿಢೀರ್ ಅಂತ ಆಯ್ಕೆ ಮಾಡಿದ್ದಾರೆ ಇದು ನಿಯಮ ಬಾಹಿರ ಎಂದು ವಿರೋಧ ಪಕ್ಷದ ಸದಸ್ಯರು ತಗಾದೆ ತೆಗೆದಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯನೇ ಆಗಿರೋ ರಾಜಾಭಕ್ಷಿ ಉಳಿದ ಕಾಂಗ್ರೆಸ್ ಸದಸ್ಯರ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಪುರಸಭೆಯ ಅಧ್ಯಕ್ಷೆಯ ನಿರ್ಧಾರ ಸರಿಯಿದೆ ಅದನ್ನ ಪ್ರಶ್ನೆ ಮಾಡುವಂತಿಲ್ಲ ಎಂದು ತಮ್ಮ ಪಕ್ಷದ ಸದಸ್ಯರ ಜೊತೆಗೆ ವಾಗ್ವಾದಕ್ಕಿಳಿದು ಕೊನೆಗೆ ಈ ರೀತಿಯ ಪುಂಡಾಟಿಕೆ ಮೆರೆದಿದ್ದಾರೆ.

English summary
Congress and BJP members clash; a ruckus in the general meeting of Mundargi Municipality. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X