ಗದಗ: ಹನಿಕೇಕ್ ತಿಂದು ಒಂದೇ ಕುಟುಂಬದ 10 ಮಂದಿ ಅಸ್ವಸ್ಥ
ಗದಗ, ಜನವರಿ, 19: ಹನಿಕೇಕ್ ತಿಂದು ಮಕ್ಕಳೂ ಸೇರಿದಂತೆ ಹತ್ತು ಮಂದಿ ಅಸ್ವಸ್ಥರಾಗಿರುವ ಘಟನೆ ಗದಗ ಜಿಲ್ಲಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮ ಉಮೇಶ್ ವಡ್ಡರ್ ಎನ್ನುವ ಕುಟುಂಬದವರು ಸ್ವಸ್ಥರಾಗಿದ್ದಾರೆ. ಗ್ರಾಮದ ಬಳಿ ಇರುವ ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ್ ಬೇಕರಿಯಿಂದ ಹನಿ ಕೇಕ್ ತಂದಿದ್ದರು.

ಗುರುವಾರ ರಾತ್ರಿ ಹನಿಕೇಕ್ ತಿಂದು ಮಲಗಿದ್ದಾರೆ. ಮಧ್ಯ ರಾತ್ರಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಬೆಳಗಿನ ಜಾವ ಗದಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 19 ವರ್ಷದ ಯುವತಿ ಸೇರಿ ಉಳಿದವರು 2 ರಿಂದ 14 ವರ್ಷದೊಳಗಿನ ಮಕ್ಕಳಿದ್ದಾರೆ. ತನು(2), ಅಶ್ವಿನಿ(2), ಸಪ್ನ(4), ನೀಲವ್ವ(6) ಸುವರ್ಣ(7) ನೇತ್ರಾ(9) ಷಣ್ಮುಖ(14), ಉಡಚವ್ವ (19) ಪ್ರವೀಣ ಅಸ್ವಸ್ಥಗೊಂಡವರು ವಾಂತಿ,ಭೇಟಿ ಅತಿಯಾಗಿರುವ ಕಾರಣ ಆಸ್ಪತ್ರೆಯಲ್ಲಿ ಮಕ್ಕಳು ಕಣ್ಣೀರಿಡುತ್ತಿದ್ದಾರೆ.












Click it and Unblock the Notifications