ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ!
Recommended Video

ದುಬೈ, ಅಕ್ಟೋಬರ್ 03: ಗಾಂಧಿ ಜಯಂತಿ(ಅ.2) ಅಂಗವಾಗಿ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಮಹಾತ್ಮಾ ಗಾಂಧೀಜಿಯವರ ತತ್ವ ಮತ್ತು ಅವರ ಚಿತ್ರಗಳು ಮೂಡಿಬಂದು ಕೋಟ್ಯಂತರ ಭಾರತೀಯರಲ್ಲಿ ರೋಮಾಂಚನ ಉಂಟುಮಾಡಿದೆ.
ಈ ಕುರಿತು ಮಾತನಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ನ ಭಾರತೀಯ ರಾಯಭಾರಿ ನವ್ದೀಪ್ ಸೂರಿ, 'ವಿಶ್ವದ ಅತ್ಯಂತ ಎತ್ತರದ ವ್ಯಕ್ತಿತ್ವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಮೇಲೆ ಚಿತ್ರಿಸಿದ್ದು ಅತೀವ ಸಂತಸ ತಂದಿದೆ. ನನಗೆ ಹೆಮ್ಮೆಯಾಗುತ್ತಿದೆ. ಇದನ್ನು ಇನ್ನೂ ಕೆಲವು ತಿಂಗಳ ಕಾಲ ಮುಂದುವರಿಸಿ, ಮಹಾತ್ಮಾ ಗಾಂಧೀಜೀಯವರ ಸಂದೇಶ ಮತ್ತು ಅವರು ಬದುಕು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಮಾಡುತ್ತಿದ್ದೇವೆ. ಅಬರು ನಮ್ಮೆಲ್ಲರಿಗೂ ಸ್ಫೂರ್ತಿ' ಎಂದಿದ್ದಾರೆ.
Such a joy to see the Burj Khalifa lit up with Gandhiji - visuals, text and music in perfect harmony. A big thanks to our friends at Emaar and the great team at @cgidubai for making it happen. pic.twitter.com/CWTp06YpOC
— IndAmbUAE (@navdeepsuri) October 2, 2018
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬುರ್ಜ್ ಖಲೀಫಾ ಮೇಲೆ ಗಾಂಧೀಜಿಯವರ ಚಿತ್ರ, ಅವರ ಸಂದೇಶ, ಹಾಡುಗಳನ್ನು ಕೇಳಲು ಎಷ್ಟು ಸಂತಸವಾಗುತ್ತಿದೆ! ಇದನ್ನು ಸಾಕಾರಗೊಳಿಸಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ.
ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರಿ ಕಚೇರಿ , ಅಬು ದಾಬಿ ಮತ್ತು ಭಾರತೀಯ ಕನ್ಸುಲೇಟ್, ದುಬೈ ಎಮರ್ ಪ್ರಾಪರ್ಟೀಸ್ ಸಹಯೋಗದಲ್ಲಿ ಸಾಕಾರಗೊಳಿಸಲಾಗಿದೆ.

ಗಾಂಧೀಜಿಯವರ ಚಿತ್ರವನ್ನು ವಿಶ್ವದ ಅತೀ ಎತ್ತರದ ಕಟ್ಟಡದ ಮೇಲೆ ತೋರಿಸುವ ಮೂಲಕ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಲಾಗಿದೆ. ಸೌಹಾರ್ದ ಬದುಕಿನ ಆಶಯ ಇದರಲ್ಲಿದೆ ಎನ್ನಲಾಗಿದೆ.
ಒಟ್ಟು 2,722 ಅಡಿ ಎತ್ತರದ ದುಬೈನ ಬುರ್ಜ್ ಖಲೀಫಾ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.












Click it and Unblock the Notifications