ಮಾಜಿ ಪ್ರಿಯಕರನ ತುಂಡಾಗಿ ಕತ್ತರಿಸಿ ಮೊರಕ್ಕೊ ಖಾದ್ಯ ಮಾಡಿದ್ದ ಮಹಿಳೆ
ಇದೊಂದು ವಿಲಕ್ಷಣ ಘಟನೆ. ವರದಿ ಆಗಿರುವುದು ಅಬುಧಾಬಿಯಿಂದ. ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ಕೊಂದು, ಆತನ ದೇಹದ ಕೆಲ ಭಾಗದಲ್ಲಿ ಮೊರಕ್ಕೊದ ಖಾದ್ಯವೊಂದನ್ನು ಮಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಣಬಡಿಸಿದ್ದಾಳೆ.
ಮೂವತ್ತು ವರ್ಷದ ಈ ಮಹಿಳೆ ತನ್ನ ಮಾಜಿ ಪ್ರಿಯಕರನನ್ನು ಕೊಂದಿದ್ದಾಗಿ, ಆತನ ದೇಹದ ಭಾಗಗಳನ್ನು ತುಂಡಾಗಿ ಕತ್ತರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲಿನ ಮಾಧ್ಯಮವೊಂದರ ಮಾಹಿತಿ ಪ್ರಕಾರ, ಆ ಮಹಿಳೆಯ ಪ್ರಿಯಕರನಿಗೆ ಇಪ್ಪತ್ತರ ಹರೆಯ. ಆಕೆ ಜತೆಗೆ ಸಂಬಂಧ ಕಡಿದುಕೊಂಡಿದ್ದರಿಂದ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ.
ಈ ಕೊಲೆ ತಿಂಗಳುಗಳ ಹಿಂದೆಯೇ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬಂದಿರುವುದು ಈಚೆಗೆ. ಮೃತನ ಸಹೋದರ ಇವರಿಬ್ಬರು ಇದ್ದ ಮನೆಗೆ ತೆರಳಿ, ಹುಡುಕಾಟ ನಡೆಸಿದ್ದಾನೆ. ಆಗ ಆ ಮಹಿಳೆ, ನನಗೆ ಅವನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತನಿಗೆ ಬೇರೆ ಹೆಂಗಸಿನ ಜತೆಗೆ ಸಂಪರ್ಕ ಇತ್ತು ಎಂದಿದ್ದಾಳೆ.

ಆದರೆ, ಅಲ್ಲೇ ಇದ್ದ ಮಿಕ್ಸರ್ ನಂಥ ಯಂತ್ರದಲ್ಲಿ ಮನುಷ್ಯರ ಹಲ್ಲುಗಳು ಆತನಿಗೆ ಕಾಣಿಸಿವೆ. ಇದರಿಂದ ಮಹಿಳೆಯ ಬಂಧನ ಸಾಧ್ಯವಾಗಿದ್ದು, ಕೊಲೆ ಪ್ರಕರಣವು ಬಯಲಾಗಿದೆ.












Click it and Unblock the Notifications