ಬುದ್ಧಿ ಇಲ್ವಾ,ಇಷ್ಟು ಸಣ್ಣ ವಿಚಾರಕ್ಕೆ ಮದುವೆಯಾಗಿ ತಿಂಗಳಲ್ಲೇ ವಿಚ್ಛೇದನವೇ?
ಧಾರವಾಡ, ಜೂನ್ 7 : ಇಬ್ಬರು ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದ ದಂಪತಿ ಒಂದು ವರ್ಷದಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಲಕ್ಷಣ ಘಟನೆ ಧಾರವಾಡದಲ್ಲಿ ನಡೆದಿದೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪತ್ನಿ ನೀಡಿರುವ ಕಾರಣ ಕೇಳಿದರೆ ಅಚ್ಚರಿಪಡುತ್ತೀರಿ. ಪತಿ ಹೆಂಡತಿಯ ಒಪ್ಪಿಗೆ ಇಲ್ಲದೆ ಆಕೆಯ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕೆ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಹೀಗೂ ಉಂಠೇ!
ಪತಿ ಆಕೆಯನ್ನು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಕೂಡ ಆಕೆ ಒಪ್ಪಿಕೊಳ್ಳಲು ಸಿದ್ಧಳಿಲ್ಲ. ನನ್ನ ಸಮ್ಮತಿಯಿಲ್ಲದೆ ಫೇಸ್‌ಬುಕ್‌ನಲ್ಲಿ ಫೋಟೋ ಹಾಕುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಹಾಕಿದ್ದಾರೆ ನನಗೆ ವಿಚ್ಛೇದನ ಬೇಕೇ ಬೇಕು ಎಂದು ಆಕೆ ಹಠ ಹಿಡಿದಿದ್ದಾಳೆ.
ಪತಿ ಶಿವಮೊಗ್ಗ ಮೂಲದವನಾಗಿದ್ದಾರೆ. ಅಂತೂ ತಮ್ಮ ಮದುವೆಯಾಯಿತಲ್ಲ ಎಂಬ ಖುಷಿಯಲ್ಲಿ ಅವರಿಬ್ಬರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದೀಗ ದಂಪತಿ ಯಾವ ನಿರ್ಧಾರಕ್ಕೆ ಬರುತ್ತಾರೆ ಎಂದು ಕಾದುನೋಡಬೇಕಿದೆ.

ಈ ಫೋಟೋವನ್ನು ನೋಡಿದ ಮೇಲೆ ನಮಗೆ ತೊಂದರೆ ಕೊಡುವುದನ್ನು ಕುಟುಂಬದವರು ನಿಲ್ಲಿಸಿದ್ದಾರೆ. ಇದೀಗ ಇವರಿಬ್ಬರ ಮಧ್ಯೆ ರಾಜಿಗೆ ಬರಲು ಕೂಡ ಕುಟುಂಬದವರು ಒಪ್ಪುತ್ತಿಲ್ಲ. ಆಕೆಗೆ ಏನು ಇಷ್ಟವೋ ಅದನ್ನೇ ಮಾಡಲಿ ಎನ್ನುತ್ತಿದ್ದಾರೆ.












Click it and Unblock the Notifications