Hubballi-Dharwad Metro: ಹುಬ್ಬಳ್ಳಿ-ಧಾರವಾಡದ ಮಧ್ಯೆ ಮೆಟ್ರೋ ಬೇಕೇ? ಜನ ಹೇಳೋದೇನು?
Hubballi-Dharwad Metro: ಕರ್ನಾಟಕದಲ್ಲಿ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾದ ನಗರ ಅಂತಾ ಇದ್ದರೆ ಅದು ಬೆಂಗಳೂರು. ಇನ್ನು ನಗರದಲ್ಲಿ ಈ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಬಹುತೇಕ ಮಂದಿ ಕಾರು, ಬೈಕ್‌ಗಳನ್ನು ಬಿಟ್ಟು ಮೆಟ್ರೋವನ್ನೇ ಅವಲಂಬಿಸಿದ್ದಾರೆ.
ಹಾಗೆಯೇ ಈ ಸೇವೆಯನ್ನು ಹುಬ್ಬಳ್ಳಿ-ಧಾರವಾಡದ ನಡುವೆ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿತ್ತು. ಹಾಗಾದರೆ ಇದು ಅಗತ್ಯವೆ ಹಾಗೂ ಈ ಬಗ್ಗೆ ಜನರು ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಇದರಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಜನರು ಮೆಟ್ರೋದ ಕಡೆ ಮುಖ ಮಾಡುತ್ತಿದ್ದಾರೆ. ಈ ಮೂಲಕ ನಗರದಲ್ಲಿ ದೈನದಂದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ.
ಈ ಹಿನ್ನೆಲೆ ನಮ್ಮ ಮೆಟ್ರೋ ನಗರದ ಜೀವನಾಡಿ ಸಾರಿಗೆಯಾಗಿದೆ. ಇದೀಗ ಬೆಂಗಳೂರಿನಂತೆಯೇ ವಾಣಿಜ್ಯ ಜನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಟ್ರಾಫಿಕ್ ಹೆಚ್ಚಾಗುತ್ತಲೇ ಇದ್ದು, ಇದರಿಂದ ಇಲ್ಲಿನ ಜನರು ಹೈರಾಣಾಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಬಜೆಟ್ ಮಂಡನೆ ವೇಳೆ ಹುಬ್ಬಳ್ಳಿ-ಧಾರವಾಡ ನಡುವೆ ಮೆಟ್ರೋ ಸೇವೆ ವಿಸ್ತರಣೆ ಮಾಡುವುದಾಗಿ ಪ್ರಸ್ತಾಪಿಸಿದ್ದು, ಒಂದು ವೇಳೆ ಇದು ನಿಜವಾದರೆ, ಇಲ್ಲಿನ ಜನರಿಗೆ ತುಂಬಾ ಅನುಕೂಲ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಇಲ್ಲಿನ ಜನರು ಈ ಬಗ್ಗೆ ಏನು ಹೇಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಗ ಬೆಂಗಳೂರಿನಂತೆ ಹುಬ್ಬಳ್ಳಿಯಲ್ಲಿಯೂ ಕೂಡ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಟ್ರಾಫಿಕ್ ಜಾಮ್‌ನಿಂದ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಮೆಟ್ರೋ ಅತ್ಯಗತ್ಯವಾಗಿದೆ. ಮೆಟ್ರೋ ಸೇವೆ ಲಭ್ಯವಾದರೆ ನಮಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.
ಮೈಸೂರಿಗೆ ಮೆಟ್ರೋ: ಬೆಂಗಳೂರಿನಿಂದ ಮೈಸೂರಿನವರೆಗೂ ಮೆಟ್ರೋ ತರುವುದಾಗಿ ಸಂಸದ ಪ್ರತಾಪ್ ಸಿಂಹ ಕೂಡ ಹೇಳಿದ್ದರು. ಸರ್ಕಾರ ಕೂಡ ಮೈಸೂರುವರೆಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ಮುಂದಾಲೋಚನೆ ಇಲ್ಲದೆ ಕೈಗೊಂಡಿದ್ದಾರೆ ಎನ್ನುವ ಕೂಗುಗಳು ಕೂಡ ಎದ್ದಿವೆ.
ಮೈಸೂರನ್ನು ಬೆಂಗಳೂರಿನ ಜೊತೆಗೆ ಹೋಲಿಕೆ ಮಾಡೋದು ಬೇಡ. ಏಕೆಂದರೆ ಸಾಂಸ್ಕೃತಿಕ ನಗರಿಯಲ್ಲಿ ಟ್ರಾಫಿಕ್ ಜಾಮ್ ಅಂತೂ ಇಲ್ವೆ ಇಲ್ಲ. ಈಗಿರುವ ವಾತಾವರಣವೇ ತುಂಬಾ ಚೆನ್ನಾಗಿದೆ. ಅಭಿವೃದ್ಧಿ ಮಾಡುತ್ತೇವೆ ಎಂದು ಮೆಟ್ರೋ ತಂದು ನಗರವನ್ನು ಹಾಳು ಮಾಡಬೇಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.
ಸುತ್ತಮುತ್ತಲಿನ ನಗರ, ಜಿಲ್ಲೆಗಳಿಂದ ಇಲ್ಲಿಗೆ ಬರಬೇಕೆಂದರೆ ರೈಲುಗಳ ವ್ಯವಸ್ಥೆಯಲ್ಲಿ ಏನು ಕೊರತೆಯಿಲ್ಲ. ಪ್ರತಿ ಗಂಟೆಗೊಂದರಂತೆ ರೈಲುಗಳಿವೆ. ಇಲ್ಲಿ ರಾಜಮಹರಾಜರ ಕಾಲದ ಪ್ರಸಿದ್ಧ ಸುಂದರ ಪ್ರವಾಸಿ ತಾಣಗಳಿದ್ದು, ಪ್ರತಿನಿತ್ಯವೂ ಸಾವಿರಾರು ಜನರು ರೈಲಿನ ಮೂಲಕವೇ ಬರುತ್ತಿರುತ್ತಾರೆ. ಆದ್ದರಿಂದ ಮೆಟ್ರೋ ಅವಶ್ಯಕತೆ ಇಲ್ಲ. ಒಂದು ವೇಳೆ ಮೆಟ್ರೋ ತರುವ ಯೋಚನೆ ಇದ್ದರೆ ಅದನ್ನು ಇಲ್ಲಿಗೆ ಕೈಬಿಟ್ಟುಬಿಡಿ ಅಂತಿದ್ದಾರೆ ಇಲ್ಲಿನ ಜನರು.












Click it and Unblock the Notifications