ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಿಬ್ಯುನಲ್ ಎದುರು ನಮ್ಮ ಹಕ್ಕಿಗಾಗಿ ಹೋರಾಟ: ಎಂ.ಬಿ.ಪಾಟೀಲ್

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ 22: ಮಹಾದಾಯಿ ಕಳಸಾ-ಬಂಡೂರಿ ಕುರಿತಂತೆ ಕಾನೂನು ಹೋರಾಟ ಮುಂದುವರೆಯಲಿದೆ. ಈಗಾಗಲೇ ಎರಡು ದಿನ ದೆಹಲಿಯಲ್ಲಿ ಉಳಿದು ಕಾನೂನು ತಜ್ಞರ ಜತೆಗೆ ಮುಂದಿನ ಹೋರಾಟ ಕುರಿತ ನಡೆಸಿದ್ದೇವೆ. ನ್ಯಾಯಾಧೀಕರಣದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಧಾರವಾಡದ ಮುರುಘಾ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಕೂಡ ಯಾವುದೇ ಆಶಾಭಾವನೆ ಉಳಿದಿಲ್ಲ.

ಆರಂಭದಿಂದಲೂ ಇಚ್ಛಾಶಕ್ತಿ ತೋರಸಿಲ್ಲ ಹೀಗಾಗಿ ಅವರ ಮೇಲೆ ನಮಗೆ ಯಾವುದೇ ವಿಶ್ವಾಸ ಉಳಿದಿಲ್ಲ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಈಗಾಗಲೇ ಎರಡು ದಿನ ದೆಹಲಿಯಲ್ಲಿ ಉಳಿದು ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಕುರಿತು ಚರ್ಚೆ ನಡೆಸಿದ್ದೇವೆ. ನ್ಯಾಯಾಧೀಕರಣದಲ್ಲಿ ಗೆಲ್ಲುವ ವಿಶ್ವಾಸವಿದೆ

We will fight before tribunal for Mahadayi: MB Patil

ಜನವರಿ 27 ರ ಸರ್ವ ಪಕ್ಷಗಳ ಸಭೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಹೆಜ್ಜೆಗಳ ಕುರಿತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕುರಿತು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಆಯೋಗಕ್ಕೆ ಜವಾಬ್ದಾರಿ ನೀಡಿದೆ ಅಲ್ಪಸಂಖ್ಯಾತ ರ ಆಯೋಗ ತಜ್ಞರ ಸಮಿತಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಲು ಕೋರಿದೆ ಆದರೆ ಸಮಿತಿ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದಿದೆ.

ಈ ಬಗ್ಗೆ ಜನವರಿ ೨೭ರಂದು ಆಯೋಗದ ಸಭೆ ಇದೆ ಇದರಲ್ಲಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಮುಂದಿನ ದಿನಗಳಲ್ಲಿ ಕಾದು ನೋಡಬೇಕು ಎಂದು ಹೇಳಿದರು.

English summary
Irrigation minister MB Patil asserted that the state Government will fight for its right on Mahadayi river before the tribunal and never lost its hope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X