ಹುಬ್ಬಳ್ಳಿಯ ಈ ಸಂತೀ ಒಳಗ ಕಾಯಿಪಲ್ಯಾ ಸಿಗಂಗಿಲ್ಲ!

ಹುಬ್ಬಳ್ಳಿ, ಸೆಪ್ಟೆಂಬರ್ 8 : ಕೆಎಚ್ ಪಾಟೀಲ ವಾಣಿಜ್ಯ ಮತ್ತು ಬಿಬಿಎ ಮಹಾವಿದ್ಯಾಲಯದಲ್ಲಿ ಸೆ.12ರಿಂದ 14ರವರೆಗೆ 'ವಿದ್ಯಾ ಸಂತೆ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೆ.12ರಂದು ಬೆಳಗ್ಗೆ 10.30ಕ್ಕೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ (ಆಡಳಿತ) ಡಾ. ಮಹಾಂತೇಶ ಎನ್. ಕರೂರ ವಿದ್ಯಾಸಂತೆಯನ್ನು ಉದ್ಘಾಟಿಸಲಿದ್ದಾರೆ. ಗುಜರಾತ್‌ನ (ರಾಜಕೋಟ್) ಯುನೆಸ್ಕೋದಿಂದ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಿಜಲ್ ದಮಾನಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. [2015-16ರ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು]

ಡಿಐಸಿ ಜಂಟಿ ನಿರ್ದೇಶಕ ಬಿ.ಎನ್.ಗದಗ, ಸಿಡಾಕ್‌ನ ನಿರ್ದೇಶಕ ಎಂ. ಜೆ. ಜೀವಣ್ಣನವರ, ಉಪನಿರ್ದೇಶಕ ಚಂದ್ರಶೇಖರ ಅಂಗಡಿ, ಸಹ ನಿರ್ದೇಶಕ ಶಿವಾನಂದ ಯಲಿಗಾರ ಉಪಸ್ಥಿತರಿರಲಿದ್ದಾರೆ. [ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ]

Vidya Sante in Hubballi for students by students

ಕವಿವಿ ವ್ಯಾಪ್ತಿಯ ಐದು ವಾಣಿಜ್ಯ ಪದವಿ ಕಾಲೇಜ್ ನ ಸುಮಾರು 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿದ್ಯಾಸಂತೆಯಲ್ಲಿ ಪಾಲ್ಗೊಂಡು ತಮ್ಮ ವ್ಯಾಪಾರಾಭಿವೃದ್ಧಿ ಕೌಶಲ್ಯತೆಯನ್ನು ಒರೆಗೆ ಹಚ್ಚಲಿದ್ದಾರೆ. ಒಟ್ಟು 35 ಮಳಿಗೆಗಳಿದ್ದು, ಪ್ರತಿನಿತ್ಯ ಸಂಜೆ ವಾಣಿಜ್ಯ ವಿದ್ಯಾರ್ಥಿಗಳಿಂದಲೇ ಮನರಂಜನೆ ಕಾರ್ಯಕ್ರಮ ಜರುಗಲಿದೆ.

ಸೆ.14ರಂದು ಸಂಜೆ 4ಕ್ಕೆ ವಿದ್ಯಾ ಸಂತೆಯು ಸಮಾರೋಪಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಕಾರ್ಯಕಾರಿ ಮಂಡಳಿಯ ಎಸ್.ಬಿ.ಲಕ್ಕನಗೌಡರ, ಶಿವಶಂಕರ ಡಿ.ಐಹೊಳೆ, ಶಕುಂತಲಾ ಕುಂಬಾರ, ಪ್ರಭಾ ನಿಡವಣಿ, ಎನ್.ಎಸ್.ಹತ್ಯಾಳ ಹಾಜರಿರುವರು. [ಭಾಳ ಒಳ್ಳೇಯವ್ರು ನಮ್ ಮಿಸ್ಸು, ಊರಿಗೆಲ್ಲಾ ಫೇಮಸ್ಸು]

ಕರ್ನಾಟಕ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಹುಬ್ಬಳ್ಳಿಯ ಕೆ.ಎಲ್.ಇ ಸೊಸೈಟಿಯ ಕಾಲೇಜ್ ಆಫ್ ಕಾಮರ್ಸ್, ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಕಾಮರ್ಸ್ ಕಾಲೇಜ್, ನಲಂದ ಕಾಲೇಜ್ ಆಫ್ ಕಾಮರ್ಸ್, ಕೆ.ಎಚ್.ಪಾಟೀಲ ಕಾಮರ್ಸ್ ಕಾಲೇಜ್ ಮತ್ತು ಧಾರವಾಡ ನಿಡವಣಿ ಕಾಮರ್ಸ್ ಕಾಲೇಜ್ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ರಾಜ್ಯದಲ್ಲಿ ಮೊಟ್ಟ ಮೊದಲನೇ ಬಾರಿಗೆ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ ನಡೆಯುತ್ತಿರುವ ಈ ವಿದ್ಯಾಸಂತೆಯಲ್ಲಿ ಪಾಲ್ಗೊಳ್ಳಲು ಕಾರ್ಯಕಾರಿ ಮಂಡಳಿ ಕಾರ್ಯದರ್ಶಿ ಶಿವಶಂಕರ ಐಹೊಳೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+