ಧಾರವಾಡ: ಭಾರೀ ಮಳೆಗೆ ಕೊಚ್ಚಿ ಹೋದ ಇಬ್ಬರು ಗ್ರಾಮಸ್ಥರು

Subscribe to Oneindia Kannada

ಧಾರವಾಡ, ಸೆಪ್ಟೆಂಬರ್ 13: ನಗರದಾದ್ಯಂತ ಮಂಗಳವಾರ ಭಾರೀ ಮಳೆ ಸುರಿದಿದ್ದು ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಅಣೆಕಟ್ಟುಗಳ ನೀರಿನಲ್ಲಿ ಅಲ್ಪ ಏರಿಕೆ, ಕಾಣೆಯಾದ ಮಳೆ

ಮಳೆಯಿಂದಾಗಿ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ದೊಡ್ಡಹಳ್ಳ ಉಕ್ಕಿ ಹರಿಯುತ್ತಿದ್ದಾಗ ಟಂಟಂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಾಹನ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಇವರು ತಾಲೂಕಿನ ಇನಾಂಹೊಂಗಲ ಗ್ರಾಮದವರು ಎಂದು ತಿಳಿದು ಬಂದಿದೆ.

Two villagers washed away in flood at Navalgund, Dharwad

ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶಿರೂರು ಗ್ರಾಮದ ಇನ್ನಿಬ್ಬರಾದ ಹನುಮಂತ ಲಕ್ಕಣ್ಣವರ ಹಾಗೂ ಮಕ್ತುಂ ರಸೂಲ್ ರನ್ನು ಗ್ರಾಮಸ್ಥರೇ ರಕ್ಷಿಸಿದ್ದಾರೆ.

ಟಂಟಂ ವಾಹನ ನದಿಯಲ್ಲಿ ಕೊಚ್ಚಿ ಹೋಗಿದ್ದರೆ, ಇನ್ನೊಂದು ಕಾರು ಕೂಡ ಹಳ್ಳದಲ್ಲಿ ಸಿಲುಕಿಕೊಂಡಿದೆ. ನಿನ್ನೆ ರಾತ್ರಿಯಾಗಿದ್ದರಿಂದ ಕತ್ತಲೆಯಲ್ಲಿ ಕೊಚ್ಚಿಹೋದ ಗ್ರಾಮಸ್ಥರ ಹುಡುಕಾಟ ಸಾಧ್ಯವಾಗಿಲ್ಲ.

ಮಳೆಯಿಂದ ಶಿರೂರು ಗ್ರಾಮ ದ್ವೀಪದಂತಾಗಿದ್ದು, ಸಾರಿಗೆ ಬಸ್ ಗಳ ಸಂಚಾರವೂ ಸಾಧ್ಯವಾಗುತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharwad city was hit by heavy rains on Tuesday and two villagers were washed away in flood water.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ