ಧಾರವಾಡ; ಅಪರಿಚಿತ‌ ವಾಹನ ಡಿಕ್ಕಿ, ಬೈಕ್ ಸವಾರರ ಸಾವು

ಧಾರವಾಡ: ಅಪರಿಚಿತ ವಾಹನ ಡಿಕ್ಕಿ ಹೊಡೆದ‌ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಸವದತ್ತಿ ಧಾರವಾಡ ರಸ್ತೆಯ ಹಾರೊಬೆಳವಡಿ ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.‌

ಮೃತರಿಬ್ಬರು ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದವರು ಎಂದು ತಿಳಿದು ಬಂದಿದ್ದು, ಇಬ್ಬರೂ ಬೈಕ್ ಮೇಲೆ ಧಾರವಾಡದಿಂದ ಆಯಟ್ಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.‌ ಮೃತ ದುರ್ದೈವಿಗಳನ್ನು ಲಕ್ಷ್ಮಣ (28) ಹಾಗೂ ಮೈಲಾರಿ (48) ಮೃತ ಗುರುತಿಸಲಾಗಿದ್ದು, ಡಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದೆ.‌

Two Persons Dead In Bike Accident Near Dharwad

ಘಟನೆ ನಡೆದ ಸ್ಥಳದಲ್ಲಿ ಬೇರೆ ವಾಹನ ಸವಾರರು ಅಪಘಾತಕ್ಕೊಳಗಾದವರನ್ನು ಉಳಿಸಲು ನೀರು ಕುಡಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಇಬ್ಬರೂ ಬೈಕ್ ಸವಾರರು ಅಸುನನೀಗಿದ್ದರು ಎಂದು ತಿಳಿದು ಬಂದಿದೆ.‌ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+