ಮಾ. 3ಕ್ಕೆ ವಿಧಾನಸೌಧ ಬಳಿ ಕಬ್ಬು ಬೆಳೆಗಾರರ 'ಉಗುಳುವ ಚಳವಳಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಫೆಬ್ರವರಿ,29: ನಮಗೆಲ್ಲಾ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ರೈತರುನಡೆಸಿದ 'ರೊಟ್ಟಿ ಚಳವಳಿ', ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕೈಗೊಂಡ 'ಶೂ ಪಾಲಿಶ್' ಎಂಬ ವಿಶೇಷ ಚಳವಳಿ ಬಗ್ಗೆ ಗೊತ್ತು. ಇದೀಗ ವೈವಿಧ್ಯಮಯ ಚಳವಳಿ ಪಟ್ಟಿಗೆ ಹೊಸ ಸೇರ್ಪಡೆ 'ಉಗುಳುವ ಚಳವಳಿ'

ಹಲವಾರು ದಿನಗಳಿಂದ ಎದುರಿಸುತ್ತಿರುವ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ಧ ಕಬ್ಬು ಬೆಳೆಗಾರರು ಮಾರ್ಚ್.3 ರ ಗುರುವಾರದಂದು ಬೆಂಗಳೂರಿನ ವಿಧಾನಸೌಧ ಎದುರು ಉಗುಳು ಚಳವಳಿ ಹಮ್ಮಿಕೊಂಡಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ ಹೇಳಿದರು.[ಕಾರ್ಖಾನೆ'ಸಕ್ಕರೆ' ಕಾಯಿಲೆಗೆ ಸರ್ಕಾರದ ಮದ್ದು]

Sugar cane farmers

ಕಲಘಟಗಿಯಲ್ಲಿ ಕಬ್ಬು ಬೆಳೆಗಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ, 'ಕಬ್ಬು ನೀಡಿದ ರೈತರಿಗೆ 14 ದಿನಗಳೊಳಗಾಗಿ ಮೌಲ್ಯಾಧಾರಿತ ಬೆಲೆ ನೀಡಬೇಕು ಎಂದು ಕಾನೂನಿದೆ. ಆದರೆ ರಾಜ್ಯದಲ್ಲಿರುವ 646 ಸಕ್ಕರೆ ಫ್ಯಾಕ್ಟರಿಗಳು 4 ಸಾವಿರ ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿವೆ ಎಂದು ಆರೋಪಿಸಿದರು.[ಜಮೀನಲ್ಲಿ ಹನಿ ಹನಿಯಾಗಿ ಬೀಳಲಿದೆ ನೀರು]

ಕಾರವಾರ ಜಿಲ್ಲಾ ವ್ಯಾಪ್ತಿಯ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಫ್ಯಾಕ್ಟರಿಯಲ್ಲಿ ಟನ್ ಕಬ್ಬಿಗೆ 2980 ರೂ. ನೀಡಬೇಕು. ಆದರೆ ಅಲ್ಲಿ ರೈತರಿಗೆ ಕೇವಲ 2 ಸಾವಿರ ರೂ.ಗಳನ್ನು ಮಾತ್ರ ನೀಡಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.[ದೇಶದ ಕಬ್ಬು ಉತ್ಪಾದನೆ ಎಷ್ಟಿದೆ ಗೊತ್ತಾ?]

ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಈ ಫ್ಯಾಕ್ಟರಿ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೇಳಿದರೆ ಉಡಾಫೆಯ ಉತ್ತರ ಬರುತ್ತಿದೆ ಎಂದು ದೂರಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sugar cane farmers have take protest (Uguluva Chalavali) against EID parry sugar factory Karwar, Uttara Karnataka at Vidhan Souda, on Thursday, March 3rd.
Please Wait while comments are loading...