ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಹಶೀಲ್ದಾರ್ ಕಚೇರಿಗೆ ಇ-ಮೇಲ್, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಿ

|
Google Oneindia Kannada News

ಧಾರವಾಡ, ಜುಲೈ 10 : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಲೇ ಇದೆ. ಜನರು ಮತ್ತು ಕಚೇರಿ ಸಿಬ್ಬಂದಿಗಳ ಆರೋಗ್ಯ ಕಾಪಾಡಲು ಕಂದಾಯ ಇಲಾಖೆ ಹಲವು ಸೇವೆಗಳನ್ನು ಇ-ಮೇಲ್ ಮತ್ತು ವಾಟ್ಸಪ್ ಮೂಲಕ ನೀಡಲಿದೆ.

ವಿವಿಧ ಸೇವೆಗಳನ್ನು ಪಡೆಯಲು ಜನರು ಪದೇ-ಪದೇ ಕಛೇರಿಗೆ ಅರ್ಜಿ ಸಲ್ಲಿಸಲು ಆಗಮಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರು ಮತ್ತು ಸಿಬ್ಬಂದಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆದ್ದರಿಂದ, ವಾಟ್ಸಪ್, ಇ-ಮೇಲ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಧಾರವಾಡ: ಖಾಸಗಿ ಶಾಲೆಯ 8 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ಧಾರವಾಡ: ಖಾಸಗಿ ಶಾಲೆಯ 8 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು

ಧಾರವಾಡದ ತಹಶೀಲ್ದಾರ್ ಕಛೇರಿಗೆ ವಿವಿಧ ಕೆಲಸಗಳಿಗಾಗಿ ಅರ್ಜಿ ಸಲ್ಲಿಸುವವರು [email protected] ವಿಳಾಸಕ್ಕೆ ಕಳಿಸಬಹುದು. ವಾಟ್ಸ್‌ ಅಪ್ ಮೂಲಕ ಅರ್ಜಿ ಸಲ್ಲಿಸುವವರು 7619471093 ನಂಬರ್‌ಗೆ ಅರ್ಜಿಯ ಫೋಟೋ ತೆಗೆದು ಕಳಿಸಬೇಕು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಬಗ್ಗೆ ಮಹತ್ವ ನಿರ್ಣಯಗಳು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಬಗ್ಗೆ ಮಹತ್ವ ನಿರ್ಣಯಗಳು

Connect Tahsildar Office From E Mail And Whatsapp

ಕಚೇರಿಯಿಂದ ಸಿಗುವ ಸಾಮಾಜಿಕ ಭದ್ರತೆ ಯೋಜನೆ ಹಾಗೂ ವಿವಿಧ ಪ್ರಮಾಣ ಪತ್ರಗಳಿಗಾಗಿ ಗ್ರಾಮ ಪಂಚಾಯತಿಯಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಆನ್‍ಲೈನ್ ಕೇಂದ್ರದಲ್ಲಿ ಪಹಣಿ ಪತ್ರಿಕೆಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಕಛೇರಿಯ ದೂರವಾಣಿ ಸಂಖ್ಯೆ 0836-2233822ಗೆ ಜನರು ಕರೆ ಮಾಡಿ ತಮಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಜೂನ್ ತಿಂಗಳ ಕೊರೊನಾ ಪ್ರಕರಣ: ಈ ಪಂಚರಾಜ್ಯಗಳದ್ದೇ ಸಿಂಹಪಾಲು ಜೂನ್ ತಿಂಗಳ ಕೊರೊನಾ ಪ್ರಕರಣ: ಈ ಪಂಚರಾಜ್ಯಗಳದ್ದೇ ಸಿಂಹಪಾಲು

ಧಾರವಾಡ ಜಿಲ್ಲೆಯಲ್ಲಿ ಗುರುವಾರ 75 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 832 ಆಗಿದೆ.

English summary
Submit application to tahsildar office from e mail and whatsapp. In the time of COVID - 19 people can submit application for various service without visiting office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X