ಧಾರವಾಡ: ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದ ಮಗ
ಧಾರವಾಡ, ಜುಲೈ 05: ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ಸ್ವಂತ ತಾಯಿಯನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.
ಶಂಕರವ್ವ ನಿಗದಿ (70) ಕೊಲೆಯಾದ ದುರ್ದೈವಿಯಾದರೆ, ವೀರಭಧ್ರಪ್ಪ ನಿಗದಿ (35) ಅಮ್ಮನ ಸಾರಾಯಿಗಾಗಿ ಬಲಿ ತೆಗೆದ ಪಾಪಿ. ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದ ನಿವಾಸಿ ವೀರಭದ್ರಪ್ಪ ಕುಡಿತದ ಚಟಕ್ಕೆ ಬಿದ್ದು ನಿತ್ಯ ಕುಡಿಯಲು ಹಣ ನೀಡುವಂತೆ ತಾಯಿಗೆ ಪೀಡಿಸುತ್ತಿದ್ದ. ಅಂತೆಯೇ ಜೂ. 30ರಂದು ವೀರಭದ್ರಪ್ಪ ಸಾರಾಯಿ ಕುಡಿಯಲು ಹಣ ಕೇಳಿದ್ದಾನೆ.

ಆಗ ತಾಯಿ ಶಂಕರವ್ವ ಹಣವಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಮಗ ಹೆತ್ತ ತಾಯಿಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಶಂಕರವ್ವ ಅವರನ್ನು ಕಿಮ್ಸ್ಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶಂಕರವ್ವ ಮೃತಪಟ್ಟಿದ್ದಾರೆ. ಈ ಕುರಿತು ಕಲಘಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೀರಭದ್ರಪ್ಪನನ್ನು ಪೋಲಿಸರು ಬಂಧಿಸಿದ್ದಾರೆ.












Click it and Unblock the Notifications