ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ಹೃದಯಾಘಾತದಿಂದ ಯೋಧ ಸಾವು, ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ದೇಶ ಸೇವೆಯೆ ತನ್ನ ಗುರಿಯಾಗಿಸಿಕೊಂಡಿದ್ದ ಗಂಗಾಧರಯ್ಯ ಹಿರೇಮಠ ಆಗಸ್ಟ್‌ 27 ರಂದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ ಗಡಿಯಲ್ಲಿ ಸೇವೆಯಲ್ಲಿದ್ದಾಗಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಯೋಧ ಗಂಗಾಧರಯ್ಯ ಅವರು ತಮ್ಮ ಸೇವಾವಧಿ 2011 ರಲ್ಲಿ ಮುಗಿದಿದ್ದು ದೇಶಸೇವೆಗಾಗಿ ಮತ್ತೆ ಅಲ್ಲೆ ಸೇವೆ ಮುಂದುವರೆಸಿದ್ದರಲ್ಲದೆ ಗ್ರಾಮಕ್ಕೆ ಬಂದಾಗ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದನ್ನು ಗ್ರಾಮದ ಜನತೆ ಸ್ಮರಿಸಿ ಕಣ್ಣೀರಿಡುತ್ತಿದ್ದದ್ದು ಕಂಡು ಬಂದಿತು.

ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ವೇದಿಕೆಯನ್ನು ಸಿದ್ದಪಡಿಸಲಾಗಿತ್ತು, ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಹಾಗೂ ತಾಲೂಕಿನ ವಿವಿಧ ಗ್ರಾಮದ ಸಾವಿರಾರು ಜನರು ಆಗಮಿಸಿದ್ದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಗ್ರಾಮಕ್ಕೆ ಆಗಮಿಸಿ ಯೋಧನಿಗೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಿದರು.

ದೇಶ ಒಗ್ಗೂಡಿಸಲು 'ಭಾರತ ಐಕ್ಯತಾ ಯಾತ್ರೆ' ನಡೆಯಲಿದೆ: ಸಿದ್ದರಾಮಯ್ಯದೇಶ ಒಗ್ಗೂಡಿಸಲು 'ಭಾರತ ಐಕ್ಯತಾ ಯಾತ್ರೆ' ನಡೆಯಲಿದೆ: ಸಿದ್ದರಾಮಯ್ಯ

ನಂತರ ಗ್ರಾಮದ ಪ್ರಮುಖ ಬೀದಿಗಳು ಯಾತ್ರೆ ನಡೆಯಿತು, ಯಾತ್ರೆಯಲ್ಲಿ ಭಕ್ತಿಗೀತಗಳನ್ನು ಹಾಡುವುದರ ಮೂಲಕ ವಿವಿಧ ವಾದ್ಯದೊಂದಿಗೆ ಪಥಸಂಚಲ ಜರುಗಿತು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ, ಎಮ್.ಆರ್.ಪಾಟೀಲ, ತಹಶೀಲ್ದಾರ ಅಶೋಕ ಶಿಗ್ಗಾಂವ, ಸಿಪಿಐ ಮಾರುತಿ ಗುಳ್ಳಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಯಾತ್ರೆಯಲ್ಲಿ ಪಾಲ್ಗೊಂಡರು.

Soldier from Dharwad Dies in West Bengal Border, Cremated with full military Honors

ವೀರ ಯೋಧನಿಗೆ ಶಾಲಾ ಮಕ್ಕಳು ನಮಸ್ಕರಿಸುವ ದೃಶ್ಯ ನೊಡುಗರ ಮನಸನ್ನು ಒಂದು ಕ್ಷಣ ಭಾವುಕರನ್ನಾಗಿ ಮಾಡಿತು. ರೊಟ್ಟಿಗವಾಡ ಗ್ರಾಮದ ಹುಬ್ಬಳ್ಳಿ-ನಲವಡಿ ರಸ್ತೆ ಪಕ್ಕಕ್ಕೆ ಹೊಂದಿಕೊಂಡಿರುವ ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಮೆರವಣಿಗೆ ಅಂತಿಮ ಘಟ್ಟದವರೆಗೂ ಶಾಲಾ ವಿದ್ಯಾರ್ಥಿಗಳು ಭಾರತ ದೇಶದ ಧ್ವಜ ಹಿಡಿದು ವೀರಯೋಧನಿಗೆ ಗೌರವ ಸಮರ್ಪಿಸಿದರು. ತಾಲೂಕಿನ ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ಹಾಗೂ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸೇರಿಕೊಂಡು ಯೋಧನ ಅಂತ್ಯಕ್ರಿಯನ್ನು ನೆರವೇರಿಸಲು ಸಕಲ ವ್ಯವಸ್ಥೆ ಮಾಡಿದ್ದರು.

Soldier from Dharwad Dies in West Bengal Border, Cremated with full military Honors

ಅಂತಿಮವಾಗಿ ಬಿ.ಎಸ್.ಎಫ್. 11 ಯೋಧರು ಪಾರ್ಥೀವ ಶರೀರ ಜೊತೆಗೆ ಆಗಮಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಯೋಧನಿಗೆ ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಯೋಧನ ಪಾರ್ಥಿವ ಶರೀರದ ಮೇಲೆ ಇರುವ ರಾಷ್ಟ್ರ ಧ್ವಜವನ್ನು ಯೋಧನ ಪತ್ನಿ ಚನ್ನಮ್ಮ ಹಾಗೂ ಪುತ್ರಿಯಾದ ಸ್ಫಂದನಾ ಹಿರೇಮಠರವರು ಕೈಯಲ್ಲಿ ನೀಡುವುದರೊಂದಿಗೆ ಯೋಧನ ಅಂತ್ಯ ಸಂಸ್ಕಾರವನ್ನು ವೀರಶೈವ ಲಿಂಗಾಯತ ಸಮುದಾಯದ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.

English summary
Gangadharaiah A soldier from Dharwad district died in Cooch Behar border, West Bengal due to heart attach. Monday cremated with full military honours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X