ಧಾರವಾಡ ಪ್ರಕರಣ: ತಾಲಿಬಾನಿ ರೀತಿ ಹಲ್ಲೆ ಎನ್ನಬೇಡಿ ಎಂದ ಸಚಿವ
ಧಾರವಾಡ ಬೆಂಗಳೂರು, ಏಪ್ರಿಲ್ 14: ಧಾರವಾಡ ಜಿಲ್ಲೆ ವ್ಯಾಪ್ತಿಯ ಹುಬ್ಬಳ್ಳಿಯಲ್ಲಿ ಬಾಲಕಿ ಕರೆದೊಯ್ದು ಅತ್ಯಾಚಾರ ಮಾಡಿ ಕೊಂದ ಬಿಹಾರ ವ್ಯಕ್ತಿಯನ್ನು ಹತ್ಯೆಗೈಯ್ಯಲಾಗಿದೆ. ಇಂಥದ್ದೊಂದು ಅಮಾನುಷ ಕೃತ್ಯ ನಡೆಯಬಾರದಿತ್ತು. ಅದರ ಬೆನ್ನಲ್ಲೆ ಧಾರವಾಡದ ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ನಡೆದುಕೊಂಡು ಘಟನೆ ನಡೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಆದ ಕಾಮಿರ್ಕ ಸಚಿವ ಸಂತೋಷ್ ಲಾಡ್ ಅವರು, ತಾಲಿಬಾನಿ ರೀತಿ ಹಲ್ಲೆ ಎನ್ನಬೇಡಿ ಎಂದು ತಿಳಿಸಿದ್ದಾರೆ.
ಸೋಮವಾರ ಧಾರವಾಡದಲ್ಲಿ ಮಾತನಾಡಿದ ಕಾರ್ಮಿಕ ಸಚಿವರು, ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಇದನ್ನು ತಾಲಿಬಾನಿ ರೀತಿಯಲ್ಲೇ ನಡೆಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಈ ಮಹಿಳೆ ಮೇಲಿನ ಹಲ್ಲೆಯನ್ನು ತಾಲಿಬಾನಿಗೆ ಹೋಲಿಸಬೇಡಿ ಎಂದಿದ್ದಾರೆ.

ಇಂದಿನ ತಾವರೆಕೆರೆಯಲ್ಲಿ ನಡೆದ ಈ ಹಲ್ಲೆ ತಾಲಿಬಾನಿ ರೀತಿಯಲ್ಲಿ ನಡೆದಿದೆ ಎನ್ನುವುದಾದರೆ. ದೇಶವನ್ನೆ ಬೆಚ್ಚಿ ಬೀಳಿಸಿದ್ದ ಮಣಿಪುರದಲ್ಲಿ ಆಗಿದ್ದು ಏನು? ಎಂದು ಸಚಿವರು ಪ್ರಶ್ನಿಸಿದರು. ರಾಜ್ಯದಲ್ಲಿ ಇಂತಹ ಘಟನೆಗಳು ಸಾಕಷ್ಟು ಆಗಿರುತ್ತವೆ. ಅಂತವುಗಳಿಗೆ ತಾಲಿಬಾನಿ ಪದ ಬಳಕೆ ಮಾಡುವುದು ಸರಿಯಲ್ಲ. ಮಣಿಪುರದಲ್ಲಿ ಎರಡು ವರ್ಷಗಳಿಂದ ಏನಾಗುತ್ತಿದೆ? ಇಲ್ಲಿ ಆಗಿರುವುದಕ್ಕೆ ತಾಲಿಬಾನಿ ಪದ ಬಳಸಬೇಡಿ ಎಂದು ಸಚಿವ ಲಾಡ್ ಮನವಿ ಮಾಡಿದರು.
ಜಾತಿ ಗಣತಿ ವರದಿ: ಸಚಿವರ ತಿರುಗೇಟು
ರಾಜ್ಯದಲ್ಲಿ ಜಾತಿ ಗಣತಿ ಜಾರಿಯ ಪರ ವಿರೋಧ ಚರ್ಚೆ ಶುರುವಾಗಿದೆ. ಈ ಮಧ್ಯೆ ಕಾರ್ಮಿಕ ಸಚಿವರು, ಕಳೆದ 14 ವರ್ಷದಿಂದ ಕೇಂದ್ರ ಸರ್ಕಾರ ಜನಗಣತಿ ಮಾಡಿಲ್ಲ. ಮೈಸೂರು ಮಹಾರಾಜರು ಇದರ ಬಗ್ಗೆ ಮಾತನಾಡಬೇಕು. ರಾಜ್ಯ ಸರ್ಕಾರ ಕಳೆದ 10 ವರ್ಷಗಳ ಹಿಂದಿನ ಜಾತಿ ಜನಗಣತಿಯನ್ನು ಈಗ ತರುತ್ತಿದೆ ಎಂದಿರುವ ಮೈಸೂರು ಸಂಸದ ಯದುವೀರ್ ಒಡೆಯರ್ ಅವರ ಆರೋಪಕ್ಕೆ ಸಚಿವರು ತಿರುಗೇಟು ನೀಡಿದರು.
ಜಾತಿ ಜನಗಣತಿ 10 ವರ್ಷಗಳ ಹಿಂದಿನದು ಎಂದು ಮೈಸೂರು ಮಹಾರಾಜರು ಆರೋಪಿಸಿದ್ದಾರೆ. ಕಳೆದ 14 ವರ್ಷಗಳಿಂದ ಕೇಂದ್ರ ಸರ್ಕಾರ ಜನ ಗಣತಿಯನ್ನೇ ಮಾಡಿಸಿಲ್ಲ. ಅದರ ಬಗ್ಗೆ ಮಹಾರಾಜರು ಮೊದಲು ಮಾತನಾಡಲಿ. ಹತ್ತು ವರ್ಷಕ್ಕೊಮ್ಮೆ ಜನ ಗಣತಿ ಆಗಬೇಕು. 14 ವರ್ಷದಿಂದ ಕೇಂದ್ರ ಸರ್ಕಾರ ಜನ ಗಣತಿಯನ್ನೇ ಮಾಡಿಲ್ಲ. 2020ರಲ್ಲಿ ಗಣತಿ ಆಗಬೇಕಿತ್ತು. ಬಿಜೆಪಿಯವರು ಗಣತಿ ಮಾಡಿಸಿಲ್ಲ. ಇದನ್ನು ಯಾಕೆ ಮಾಡಿಲ್ಲ ಎಂದು ಮಹಾರಾಜರು ಹೇಳಬೇಕು ಎಂದರು.
ನಮ್ಮ ಸರ್ಕಾರದ ಜಾತಿ ಜನಗಣತಿಯಲ್ಲಿ ಲೋಪ ದೋಷ ಇದ್ದರೆ ಹೇಳಲಿ. ಮೊದಲು ವರದಿ ಹೊರಗೆ ಬರಲಿ. ಈ ಬಗ್ಗೆ ಸಿಎಂ ಅವರೇ ಹೇಳಿದ್ದಾರೆ. ಸಂಬಂಧಿಸಿದ ಇಲಾಖೆ ಇದರ ಬಗ್ಗೆ ಮಾಹಿತಿ ಕೊಡಲಿದೆ. ಅಲ್ಲಿಯವರೆಗೂ ಮಹಾರಾಜರು ಸ್ವಲ್ಪ ಸಮಾಧಾನದಿಂದ ಇರಬೇಕು ಎಂದು ತಿಳಿಸಿದರು.












Click it and Unblock the Notifications