HD ದೇವೇಗೌಡರ ತುಮಕೂರು ಸ್ಪರ್ಧೆಯ ಹೇಳಿಕೆಗೆ ಸಂತೋಷ್ ಲಾಡ್ ಪ್ರತಿಕ್ರಿಯೆ
ಧಾರವಾಡ, ಏಪ್ರಿಲ್ 01: ತುಮಕೂರಿನಲ್ಲಿ ಸ್ಪರ್ಧೆ ಮಾಡಲು ಒಪ್ಪಿಸಲು ಎಚ್‌ಡಿ ದೇವೇಗೌಡರಿಗೆ ಮಾರ್ಗದರ್ಶನ ಮಾಡಿದರೆ ಅವರು ಒಪ್ಪುತ್ತಾರಾ? ಒಪ್ಪುವಷ್ಟು ಮುಗ್ಧರು ಅವರೇನೂ ಅಲ್ಲ. ಅವರಿಗೆ ಮರುತ್ತರ ಕೊಡುವಷ್ಟು ನಾನು ಬೆಳದಿಲ್ಲ. ಅವರ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಲೋಕಸಭಾ ಚುಣಾವಣೆ ಪ್ರಯುಕ್ತ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಈ ಪ್ರಯುಕ್ತ ಕಾಂಗ್ರೆಸ್ ವಿರುದ್ಧ ಎಚ್‌ಡಿ ದೇವೇಗೌಡರು ಹರಿ ಹಾಯ್ದರು. ಕಳೆದ ಬಾರಿ ತುಮಕೂರು ಕ್ಷೇತ್ರದಲ್ಲಿ ತಮಗಾದ ಅನುಭವ, ಕಾಂಗ್ರೆಸ್ ಜತೆಗಿನ ಮೈತ್ರಿ ಕುರಿತು ಅವರು ಸ್ಮರಿಸಿ ವಾಗ್ದಾಳಿ ನಡೆಸಿದ್ದರು.

ಈ ವಿಚಾರ ಕುರಿತು ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಂತೋಷ್ ಲಾಡ್ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಉತ್ತರ ಕೊಡುವಷ್ಟು ಮಟ್ಟಕ್ಕೆ ನಾವು ಬೆಳೆದಿಲ್ಲ. ದೇವೇಗೌಡರು ಈಗ ರಾಷ್ಟ್ರದ ನಾಯಕರು. ಅವರ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ.
ತುಮಕೂರಿನಲ್ಲಿ ಸ್ಪರ್ಧೆ ಮಾಡಲು ಒಪ್ಪುವಂತೆ ದೇವೇಗೌಡರಿಗೆ ಮಾರ್ಗದರ್ಶನ ಮಾಡಿದರೆ ಅವರು ಒಪ್ಪುವುದಿಲ್ಲ. ಅವರು ಮುಗ್ಧರಲ್ಲ. ಚುನಾವಣೆ ಸ್ಪರ್ಧಿಸಬೇಕು? ಬೇಡ? ಎಂಬುದು ಅದು ಅವರ ವೈಯಕ್ತಿಕ ನಿರ್ಧಾರ. ಅದರ ಹೊರತಾಗಿ ಈಗ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದು, ಈ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.
ಸಿಪಿ ಯೋಗೇಶ್ವರ ಬಂದರು ಸ್ವಾಗತ
ಬಿಜೆಪಿ ನಾಯಕ ಮಾಜಿ ಸಚಿವ ಸಿ.ಪಿ. ಯೋಗೀಶ್ವರ ಅವರ ಪುತ್ರಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರ ಪುತ್ರಿ ಯಾಕೆ, ಸ್ವತಃ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್‌ಗೆ ಬಂದರೂ ಒಳ್ಳೆಯದೇ. ಯೋಗೀಶ್ವರ ಪುತ್ರಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ, ಅವರನ್ನು ನಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇವೆ.

ಅನೇಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕ ಸಿಪಿ ಯೋಗೀಶ್ವರ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ. ಯಾರೇ ಕಾಂಗ್ರೆಸ್‌ಗೆ ಬಂದರೂ ನಮಗೆ ಬಲ ಬಂದಂತೆ ಆಗುತ್ತದೆ ಎಂದರು.
ಶ್ರೀರಹಟ್ಟಿ ಮಠದ ಫಕೀರ್ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕಗೆ ಪ್ರತಿಕ್ರಿಯಿಸಿದ ಲಾಡ್ ಅವರು, ಸ್ವಾಮೀಜಿಗಳ ಹೇಳಿಕೆ ಗಮನಿಸಿದ್ದೆನ. ಅವರು ರಾಜಕೀಯದಲ್ಲಿ ನಿಲ್ಲುತ್ತಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ದಿಂಗಾಲೇಶ್ವರ ಸ್ವಾಮೀಜಿ ಪ್ರಭಾವ ಬಹಳಷ್ಟಿದೆ. ಕೇವಲ ಧಾರವಾಡ ಜಿಲ್ಲೆಗೆ ಸೀಮಿತವಾಗಿಲ್ಲ.
ನಾನೂ ಕೂಡ ದಿಂಗಾಲೇಶ್ವರರ ಅಭಿಮಾನಿ. ಜನರು ಅವರನ್ನು ಹಿಂಬಾಲಿಸುತ್ತಾರೆ. ನಾವು ಸಹ ಅನೇಕ ಮಠಾಧಿಶರನ್ನು ಭೇಟಿಯಾಗುತ್ತಿದ್ದೇವೆ ಎಂದ ಅವರು, ಧಾರವಾಡದ ಮುರುಘಾಮಠ ಸ್ವಾಮೀಜಿ ದ್ವಂದ್ವ ನಿಲುವು ವಿಚಾರವಾಗಿ ಅದರ ಬಗ್ಗೆ ಅವರೇ ಹೇಳಬೇಕು ಎಂದು ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಸ್ವಾಮೀಜಿಗಳ ಹೇಳಿಕೆ, ಸ್ಪರ್ಧೆಯಂತಹ ವಿಚಾರಗಳಿಗೆ ಕುರಿತು ನಾನು ಮಾತನಾಡುವುದು ಸರಿಯಲ್ಲ. ಧಾರವಾಡ ಬಿಜೆಪಿ ಅಭ್ಯರ್ಥಿಗಳು ಲಿಂಗಾಯತರಲ್ಲ. ಅವರಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಎಲ್ಲ ಸಮಾಜಗಳಿಗೆ ಟಿಕೆಟ್ ಕೊಡುವ ಪಕ್ಷವಾಗಿದೆ ಎಂದು ಅವರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.












Click it and Unblock the Notifications