• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳು : ಧಾರವಾಡದಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

|

ಧಾರವಾಡ, ಜನವರಿ 04 : ಮೂರು ದಿನಗಳ ಅಕ್ಷರ ಜಾತ್ರೆ ಪೇಡಾ ನಗರಿ ಧಾರವಾಡದಲ್ಲಿ ಶುಕ್ರವಾರ ಚಾಲನೆ ಸಿಕ್ಕಿತು. ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರರ ಮೆರವಣಿಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಣ ನಡೆಯಿತು. ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನಾಡ ಮತ್ತು ರಾಷ್ಟ್ರ ಧ್ವಜದ ಧ್ವಜಾರೋಣ ಮಾಡಿದರು.

ತವರು ಮನೆಯ ಸನ್ಮಾನ ಶ್ರೇಷ್ಠವಾದದ್ದು : ಚಂದ್ರಶೇಖರ್ ಕಂಬಾರ

ಆರ್.ವಿ.ದೇಶಪಾಂಡೆ ಅವರು ರಾಷ್ಟ್ರ ಧ್ವಜವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಪರಿಷತ್ತಿನ ಧ್ವಜವನ್ನು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು ನಾಡಧ್ವಜಾರೋಹಣ ನೆರವೇರಿಸಿದರು.

84ನೇ ಕನ್ನಡ ಸಾಹಿತ್ಯ ಸಮ್ಮೇಳನ : ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ

ಧ್ವಜಾರೋಹಣದ ಬಳಿಕ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿಗಳು ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಗೌರವಪೂರ್ವಕವಾಗಿ ಕೂರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ

ಧ್ವಜಾರೋಹಣ

ಧ್ವಜಾರೋಹಣ

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ರಾಷ್ಟ್ರ ಧ್ವಜವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಪರಿಷತ್ತಿನ ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿತು.

ಭವ್ಯ ಮೆರವಣಿಗೆಗೆ ಚಾಲನೆ

ಭವ್ಯ ಮೆರವಣಿಗೆಗೆ ಚಾಲನೆ

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿಗಳು ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ರೋಮಾಂಚನಗೊಳಿಸಿದ ಕಹಳೆಗಳ ನಾದ

ರೋಮಾಂಚನಗೊಳಿಸಿದ ಕಹಳೆಗಳ ನಾದ

ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ 25 ಕ್ಕೂ ಹೆಚ್ಚು ಕಹಳೆಗಳ ನಾದ ನೆರದ ಸಹಸ್ರಾರು ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಿತು. ಬಾನೆತ್ತರದಲ್ಲಿ ಹಾರಾಡಿದ ಕನ್ನಡ ಧ್ವಜ ಸಂಕೇತಿಸುವ ಬಲೂನುಗಳು ಚಿತ್ತಾರ ಮೂಡಿಸಿದವು.

ಕಲಾತಂಡಗಳು ಭಾಗಿ

ಕಲಾತಂಡಗಳು ಭಾಗಿ

ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 15 ಸ್ತಬ್ಧಚಿತ್ರಗಳು, 30ಕ್ಕೂ ಹೆಚ್ಚು ಕಲಾತಂಡಗಳು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡರು. ಮೆರವಣಿಗೆಯು ಕಾಲೇಜು ರಸ್ತೆ, ಆಲೂರ ವೆಂಕಟರಾವ್ ವೃತ್ತ, ಆಝಾದ್ ರಸ್ತೆ ಮುಖಾಂತರ ಹಳೇ ಬಸ್‌ನಿಲ್ದಾಣ, ವಿವೇಕಾನಂದ ವೃತ್ತ, ಸಿಬಿಟಿ, ಆಕಳವಾಡಿ ಬುಕ್ ಡಿಪೋ, ಮಹಾನಗರ ಪಾಲಿಕೆ ವೃತ್ತ, ಹಳೇ ಎಸ್.ಪಿ. ಕಚೇರಿ ಕ್ರಾಸ್, ಹೊಸ ಬಸ್ ನಿಲ್ದಾಣ ಮೂಲಕ ಕೃಷಿ ವಿಶ್ವವಿದ್ಯಾಲಯ ಮುಖ್ಯ ವೇದಿಕೆಗೆ ತಲುಪಿತು.

ರಸ್ತೆಗಳಲ್ಲಿ ಕನ್ನಡದ ಘೋಷಣೆ

ರಸ್ತೆಗಳಲ್ಲಿ ಕನ್ನಡದ ಘೋಷಣೆ

ಪೂರ್ಣ ಕುಂಭಹೊತ್ತ ಮಹಿಳೆಯರು ಮೆರವಣಿಯ ಮುಂದೆ ಸಾಗಿದರು. ಡೊಳ್ಳು, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗೆ, ಕೋಲಾಟ, ಗೊಂಬೆ ಕುಣಿತ, ನಗಾರಿ ಮತ್ತಿತರ 60 ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣ ಆಯಿತು. ವಿದ್ಯಾನಗರಿಯ ರಸ್ತೆಗಳಲ್ಲಿ ಕನ್ನಡದ ಘೋಷಣೆಗಳು ಕೇಳಿಬಂದವು.

English summary
Grand procession of 84th Kannada Sahitya Sammelana president Chandra Shekhar Kambar held in Dharwad, Karnataka. Sahitya Sammelana will be held in Dharwad from January 4 and 6, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X