ಹುಬ್ಬಳ್ಳಿ : ಬೈಕ್ ಗೆ ಕಾರು ಢಿಕ್ಕಿ ದಂಪತಿ ದುರ್ಮರಣ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 02 : ನಗರದ ಬೈಪಾಸ್ ರಸ್ತೆಯಲ್ಲಿ ಬೈಕ್ ವೊಂದಕ್ಕೆ ಕಾರು ಢಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ದಂಪತಿಗಳು ಶನಿವಾರ ಬೆಳಗ್ಗೆ ದುರ್ಮರಣಕ್ಕೆ ಈಡಾಗಿದ್ದಾರೆ.

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನ ಯರಿಕೊಪ್ಪ ಗ್ರಾಮದ ಬಳಿ ಧಾರವಾಡ ನಿವಾಸಿ ಪ್ರಭುಪ್ರಸಾದ ದಾನಯ್ಯ ಹಿರೇಮಠ (40) ಇವರ ಪತ್ನಿ ಸಹನಾ ಹಿರೇಮಠ (32) ಅಪಘಾತದಲ್ಲಿ ಮೃತಪಟ್ಟವರು.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]

Hubballi

ಪ್ರಭುಪ್ರಸಾದ ದಾನಯ್ಯ ಹಿರೇಮಠ ಹಾಗೂ ಸಹನಾ ಕಾರ್ಯನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದರು. ದಂಪತಿ ಮರಳಿ ಧಾರವಾಡಕ್ಕೆ ಬೈಪಾಸ್ ರಸ್ತೆ ಮೂಲಕ ಬರುತ್ತಿದ್ದರು. ಆಗ ಯರಿಕೊಪ್ಪ ಗ್ರಾಮದ ಕ್ರಾಸ್ ನಲ್ಲಿ ವೇಗವಾಗಿ ಬಂದ ಕಾರು ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಅಪಘಾತ ಸಂಭವಿಸಿದೆ.[ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ]

ಮೃತರು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಿ.ಎಂ.ಹಿರೇಮಠ ಅವರ ಪುತ್ರ ಮತ್ತು ಸೊಸೆಯಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.[8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

ಕೈಗಾರಿಕಾ ಸ್ಥಾಪನೆಗಾಗಿ ಧಾರವಾಡ ಜಿಲ್ಲೆಗೆ 1 ಎಕರೆ ಭೂಮಿ

ಹುಬ್ಬಳ್ಳಿ, ಜನವರಿ.01: ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕಾಗಿ ಧಾರವಾಡ ಜಿಲ್ಲೆಗೆ 1 ಸಾವಿರ ಎಕರೆ ಜಮೀನು ನೀಡುವಂತೆ ಪ್ರಸ್ತಾವಿಸಿ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವ ವಿನಯ್ ಕುಲಕರ್ಣಿ, 'ಹುಬ್ಬಳ್ಳಿ ನಗರದ ಹೊಸೂರ್ ದಿಂದ ಧಾರವಾಡ ಜ್ಯುಬಿಲಿ ಸರ್ಕಲ್ ವರೆಗೆ ಷಟ್ಫಥ ರಸ್ತೆಯನ್ನು, ಧಾರವಾಡ ಬೈಪಾಸ್ ವರೆಗೆ ವಿಸ್ತರಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ' ಎಂದು ತಿಳಿಸಿದರು.[ಬೆಳಗಾವಿಯಲ್ಲಿ 334 ಕೋಟಿ ಹೂಡಿಕೆ ಮಾಡಲಿದೆ ಏಕಸ್ ಏರೋಸ್ಪೇಸ್]

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ, ಜಿ.ಪಂ.ಅಧ್ಯಕ್ಷ ಟಿ.ಜ.ಬಾಲಣ್ಣವರ, ಕೈಗಾರಿಕಾ ಇಲಾಖೆಯ ಅಧಿಕಾರಿ ಕಿರಣ ಅಡವಿ ಮತ್ತು ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prabhu prasad Danayya Hiremat (40) and his wife Sahana Hiremat died in road accident near Pune-Bengaluru National highway bypass in Hubballi on Saturday, January 2nd.
Please Wait while comments are loading...