ಅಗ್ರಮ ಗಣಿಗಾರಿಕೆ : ಭಾಗಿಯಾಗಿದ್ದವರ ತನಿಖೆ ಕೈಬಿಟ್ಟಿರುವ ಹಿಂದೆ ಕೇಂದ್ರದ ಕೈವಾಡ

By: ಧಾರವಾಡ ಪ್ರತಿನಿಧಿ
Subscribe to Oneindia Kannada

ಧಾರವಾಡ, ಡಿಸೆಂಬರ್ 07 : ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ವಿಳಂಬ ಮಾಡಿದೆ. ಆರೋಪಿಗಳಾದ ಜನಾರ್ಧನರೆಡ್ಡಿ ಹಾಗೂ ಇತರರ ವಿರುದ್ಧ ತನಿಖೆ ಕೈಬಿಟ್ಟಿದೆ. ಇದೆಲ್ಲದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸಮಾಜಪರಿವರ್ತನಾ ಸಮುದಾಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಆರೋಪಿಸಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಎಸ್ ಆರ್ ಹಿರೇಮಠ

ಅಕ್ರಮ ಗಣಿಗಾರಿಕೆ ವಿಚಾರ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರೂ. ನಷ್ಟವಾಗಿದೆ. ಈ ಕುರಿತು ಸದನ ಸಮಿತಿಗೆ ಸಮಾಜ ಪರಿವರ್ತನಾ ಸಮುದಾಯ ಬರೆದ ಪತ್ರಕ್ಕೆ ಸದನ ಸಮಿತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.

Probe on illegal Iron ore export: Hiremath welcome

ಉಪಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಸ್ಪಂದಿಸಿದ್ದಾರೆ. ಉಪ ಸಮಿತಿ ಸಭೆ ನಡೆಸಿ ಸುದೀರ್ಘ ಚರ್ಚೆ, ಡಿ.4ರಂದು ನಡೆಸಲಾಗಿದೆ. ಇದನ್ನು ಸಮಾಜ ಪರಿವರ್ತನಾ ಸಮುದಾಯ ಸ್ವಾಗತಿಸುತ್ತದೆ. ಅಕ್ರಮ ಹಣಿಗಾರಿಕೆ ಸಿಬಿಐ ತನಿಖೆ ವಿಚಾರ ಈ ಪ್ರಕರಣದಲ್ಲಿ ತನಿಖೆಯನ್ನು ಸಿಬಿಐ ವಿಳಂಬ ಮಾಡುತ್ತಿದೆ. ಆರೋಪಿಗಳಾದ ಜನಾರ್ಧನರೆಡ್ಡಿ ಹಾಗೂ ಇತರರ ವಿರುದ್ಧ ತನಿಖೆ ಕೈಬಿಟ್ಟಿದೆ.

ಸಮರ್ಪಕ ದಾಖಲೆ ಕೊಡಲು ನಾವು ಸಿದ್ಧರಿದ್ದೇವೆ.. ಪ್ರಕರಣ ಕೈಬಿಡವುದರ ಹಿಂದೆ ಕೇಂದ್ರದ ಕೈವಾಡವಿದೆ. ಅಸೋಸಿಯೇಟ್ ಮೈನಿಂಗ್ ಕಂಪನಿ ಅಕ್ರಮ ವಿಚಾರ ಗಾಲಿ ಲಕ್ಷ್ಮೀ ಅರುಣಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಅವರನ್ನು ಖುಲಾಸೆ ಮಾಡಿದೆ. ಇದು ಕಳವಳಕಾರಿ ಸಂಗತಿ ಎಂದರು.

ಇದರ ವಿರುದ್ಧ ಸಿಬಿಐ ವಿರುದ್ಧವೆ ಅರ್ಜಿ ದಾಖಲಿಸಿದ್ದೇವೆ. ಮೊದಲನೆ ಆರೋಪಿ ಸಿಬಿಐ ಎರಡನೇ ಅರೋಪಿ ಗಾಲಿ ಲಕ್ಷ್ಮೀ ಅರುಣ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುತ್ತೇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Samaj Parivarthan Samiti(sps) convenor SR Hiremath welcomed Government decision on conducting probe regarding illegal iron ore export from the port in the state.He also expressed disappointment that the CBI has denied for enquiry on the same.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ