ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 06: ನಗರದಲ್ಲಿ ಸೋಮವಾರ ಸಂಜೆ 5.30 ರ ಸುಮಾರಿಗೆ ಭಾರಿ ಮಳೆ ಸುರಿದಿದೆ. ಬೀರು ಬಿಸಿಲಿಗೆ ಬಳಲಿದ್ದ ಜನರಿಗೆ ಮಳೆ ತಂಪು ತಂದಿತಾದರೂ ಜನಜೀವನವನ್ನು ಅಸ್ತವ್ಯಸ್ಥ ಮಾಡಿತು.

ಸಂಜೆ ಕಚೇರಿಯಿಂದ ಬರುವ ಜನ ಮಳೆಯಿಂದ ತೊಯ್ದು ತೊಪ್ಪೆಗಾಗಿ ಯಾವಾಗ ಮನೆ ಮುಟ್ಟುತ್ತೆವೆ ಎಂದು ಆತಂಕದಿಂದ ದಾರಿಯಲ್ಲಿ ಸಾಗಬೇಕಾಯಿತು. ಎಲ್ಲೆಡೆ ಬೈಕ್ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಮಳೆ ನಿಲ್ಲವುದನ್ನೇ ಕಾಯುವಂತಾಯಿತು.[ಹುಬ್ಬಳ್ಳಿಯಲ್ಲಿ ಬಿಎಸ್ಸೆನ್ನೆಲ್ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಬಂದ್]

hubballi

ಮುಂಗಾರು ಮಳೆ ಆರಂಭವಾಗಬೇಕಾಗಿದ್ದು ಜೂ.7 ರಂದು ಆದರೆ ಒಂದು ದಿನ ಮೊದಲೇ ಬಂದ ಮಳೆ ಕೆಲವರಿಗೆ ಸಂತಸ ನೀಡಿದರೆ ಮತ್ತೊಂದಿಷ್ಟು ಜನಕ್ಕೆ ಕಿರಿಕಿರಿಯಾಯಿತು. ಮಳೆ ಬರುತ್ತಿದ್ದಂತೆಯೇ ಕರೆಂಟ್ ಇಲ್ಲದಾಗಿ ಮನೆಯಲ್ಲಿದ್ದ ಜನರು ಪರದಾಡುವಂತಾಯಿತು. ಇನ್ನು ಮೊಬೈಲ್ ನೆಟವರ್ಕ್ ಇಲ್ಲದೇ ಸಾಕಷ್ಟು ಪರದಾಡುವಂತಾಯಿತು. [ಜೂನ್ 8 ಅಥವಾ 9 ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ ಸಿಂಚನ]

ಟ್ರಾಫಿಕ್ ಜಾಮ್ :
ಮಳೆಯಿಂದ ನಗರದ ಹೊಸೂರು ಪ್ರದೇಶ,ಟ್ರಾಫಿಕ್ ಐಲ್ಯಾಂಡ್, ಕೊಪ್ಪಿಕರ ರಸ್ತೆ, ಸಿಬಿಟಿ ಮುಂತಾದೆಡೆ ನೀರು ನಿಂತುಕೊಂಡು ಟ್ರಾಫಿಕ್ ಜಾಮ್ ಆಗಿದೆ. ಟ್ರಾಫಿಕ್ ಸಿಗ್ನಲ್ ಗಳು ಕೂಡ ಕೆಲಸ ಮಾಡದ್ದು ಸಮಸ್ಯೆಯಾಗಿ ಪರಿಣಮಿಸಿತು.

-
-
-
-
-
-

ಒಂದೆಡೆ ಹರುಷ ಮತ್ತೊಂದೆಡೆ ಸಂಕಟ:
ಬಿಸಿಲಿನ ಬೇಗೆ ಮತ್ತು ಕುಡಿಯುವ ನೀರಿನ ತೊಂದರೆಯಿಂದ ಕಂಗೆಟ್ಟಿದ್ದ ಅವಳಿ ನಗರದ ಜನತೆ ಬಂದ ಮುಂಗಾರು ಮಳೆ ತಂಪು ತಂದಿತು. ಕನಿಷ್ಠ ಕೆರೆ ಕೋಡಿಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಅಷ್ಟೇ ಸಾಕು ಎಂಬ ಭಾವನೆ ಮೂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pre-monsoon rain lashed Hubballi on 6th June 2016, Monday. Many parts of Hubballi received heavy rain. People suffered from unexpected rain.
Please Wait while comments are loading...