ಪಾದರಾಯನಪುರ ಜಮೀರ್ ಅಜ್ಜನ ಮನೆ ಆಸ್ತಿನಾ?: ಮುತಾಲಿಕ್

ಧಾರವಾಡ, ಏಪ್ರಿಲ್ 20: ಪಾದರಾಯನಪುರವೇನು ಶಾಸಕ ಜಮೀರ್ ಅಜ್ಜನ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೆ ಮಾಡಬೇಕಾ? ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆಯ ಶಾಸಕ ಅಷ್ಟೇ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಪಾದರಾಯನಪುರದಂತ ಗಲಭೆಗಳು ಪದೇ ಪದೇ ನಡೆದಿರುವುದನ್ನು ಖಂಡಿಸಿದ ಅವರು, ಅದೂ ಒಂದೇ ಸಮುದಾಯ ಮಾಡುತ್ತಿರುವುದರ ಹಿಂದೆ ಒಂದು ದೊಡ್ಡ ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ಭಾರತದಲ್ಲೇ ಇದೆ. ಇಲ್ಲಿ ಹೋಗುವಾಗ ನಮ್ಮನ್ನು ಕೇಳಿ ಹೋಗಬೇಕು ಅಂತಿರಲ್ಲಾ ಎಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಅವರನ್ನು ಅಮಾಯಕರು ಎಂದು ಹೇಳುವುದು ತಪ್ಪು. ಇದಕ್ಕೆ ಸಮರ್ಥನೆ ಬೇರೆ ಮಾಡಿಕೊಳ್ಳಬೇಡಿ. ನೀವೇ ಈ ಘಟನೆಗೆ ಕಾರಣ. ಮೇಲಿಂದ ಮೇಲೆ ಈ ಘಟನೆಯಾಗುತ್ತಿರುವುದು ಕೊರೊನಾ ಹಬ್ಬಿಸಲಿಕ್ಕೆ ಎಂದು ಆರೋಪಿಸಿದರು.

Pramod Muthalik Criticizes To MLA Jameer Ahmed Khan

ರಾತ್ರಿ ಅಲ್ಲಿ ಗಲಭೆ ಮಾಡಿದ್ದು ಖಂಡನೀಯ. ವೈದ್ಯರನ್ನು ಹಾಗೂ ಪೊಲೀಸರನ್ನ ಓಡಿಸಿದವರು ಮನುಷ್ಯರಲ್ಲ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು. ಈ ರೋಗ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇದರ ಹಿಂದೆ ಧರ್ಮ ಇಲ್ಲಾ ಎನ್ನುತ್ತಾರೆ. ಹಾಗಾದರೆ ತಬ್ಲಿಘಿ ಯಾವ ಧರ್ಮ ಎಂದು ಪ್ರಶ್ನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+