Fasal Bima Scheme: ಪಿಎಂ ಫಸಲ್ ಬಿಮಾ ಯೋಜನೆ ನೋಂದಣಿ ಶುರು
ಧಾರವಾಡ, ಜೂನ್ 02: ಕರ್ನಾಟಕ ಸರ್ಕಾರದಿಂದ 2024ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲ್ಲೂಕಿನ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ಎಂ. ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಹೋಬಳಿ ಮಟ್ಟದ 14 ಬೆಳೆಗಳಾದ ಭತ್ತ, ಮುಸುಕಿನ ಜೋಳ, ನೆಲಗಡಲೆ, ಹತ್ತಿ, ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೊ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ, ಸಾವೆ, ಉದ್ದು, ತೊಗರಿ, ಹೆಸರು ಹಾಗೂ ಸೋಯಾಅವರೆ ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿವೆ ಎಂದರು.

ಮಳೆಯಾಶ್ರಿತ ಬೆಳೆಗಳ ವಿವರ
ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿನಲ್ಲಿ ಭತ್ತ, ಕಲಘಟಗಿ ತಾಲ್ಲೂಕಿನಲ್ಲಿ ಭತ್ತ ಮತ್ತು ಮುಸುಕಿನಜೋಳ, ಹುಬ್ಬಳ್ಳಿ ಮತ್ತು ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ ನೆಲಗಡಲೆ(ಶೇಂಗಾ), ಕುಂದಗೋಳ ತಾಲ್ಲೂಕಿನಲ್ಲಿ ನೆಲಗಡಲೆ(ಶೇಂಗಾ) ಮತ್ತು ಹತ್ತಿ, ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನಲ್ಲಿ ಮುಸುಕಿನಜೋಳ, ಹೆಸರು ಮಳೆ ಆಶ್ರಿತ ಬೆಳೆಗಳಾಗಿವೆ.
ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ, ಇತರೆ ಬೆಳೆಗಳಿಗೆ 2024 ಜುಲೈ 31ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತು ನೀರಾವರಿ ಹಾಗೂ ಮಳೆ ಆಶ್ರಿತ ಬೆಳೆಗೆ ಕೆಂಪು ಮೆಣಸಿನಕಾಯಿ ಬೆಳೆಗೆ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಲು, 2024 ಅಗಸ್ಟ್ 16, ಕೊನೆಯ ದಿನವಾಗಿದೆ. ರೈತರು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ವಿಮೆ ಮಾಹಿತಿಗಾಗಿ ಅನುಷ್ಠಾನ ವಿಮಾ ಕಂಪನಿ, ತಾಲೂಕು ಪ್ರತಿನಿಧಿಗಳ ವಿವರ
2024-25 ನೇ ಸಾಲಿನ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ ಧಾರವಾಡ ತಾಲ್ಲೂಕಿಗೆ ಸ್ಮಿತಾ ಸಿ. ಡಿ. (7019969942), ಚಂದನಾ ಬಿ. ಆರ್ (9481538869) ಹಾಗೂ ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿಗೆ ಜಯಂತ ಎಚ್. ಎನ್. (8088608975), ಅಣ್ಣಿಗೇರಿ ತಾಲ್ಲೂಕಿಗೆ ರಾಜಾಭಕ್ಷಿ ದೊಡ್ಡಮನಿ (6362123480).

ಹುಬ್ಬಳ್ಳಿ ನಗರ ಮತ್ತು ಹುಬ್ಬಳ್ಳಿ ತಾಲ್ಲೂಕಿಗೆ ಬಿರೇಶ ವಡ್ಡರ (7975191577), ಕಲಘಟಗಿ ತಾಲ್ಲೂಕಿಗೆ ರಾಹುಲ ಪಾಟೀಲ್ (7619317156), ಕುಂದಗೋಳ ತಾಲ್ಲೂಕಿಗೆ ರಮೇಶ್ ಹಾವೇರಿ (7259182711) ಹಾಗೂ ನವಲಗುಂದ ತಾಲ್ಲೂಕಿಗೆ ಅಭಿಷೇಕ್ ಕ್ಯಾಡದ (6361364459) ಅವರನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ, ಸ್ಥಳಿಯ ಕೃಷಿ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಸ್ಥಳಿಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ, ಸೇವಾ ಬ್ಯಾಂಕುಗಳ ಸಿಬ್ಬಂದಿಯವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣಕುಮಾರ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.












Click it and Unblock the Notifications