Get Updates
Get notified of breaking news, exclusive insights, and must-see stories!

ಕವಿ ಡಾ. ಚೆನ್ನವೀರ ಕಣವಿ ವಿಧಿವಶ: ಗಣ್ಯರ ಸಂತಾಪ

ಧಾರವಾಡ, ಫೆಬ್ರವರಿ 16: ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ ಚನ್ನವೀರ ಕಣವಿ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಇಂದು 93 ವರ್ಷದ ಡಾ. ಚೆನ್ನವೀರ ಕಣವಿ ಚಿಕಿತ್ಸೆ ಫಲಕಾರಿಯಾಗದೇ ಧಾರವವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚೆಂಬೆಳಕಿನ‌ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಚೆನ್ನವೀರ ಕಣವಿ ಅಗಲಿಕೆಗೆ ಸಂತಾಪಿಸಿ ಟ್ವೀಟ್ ಮಾಡಿದ್ದಾರೆ.

'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದು ಏಳು ದಶಕಗಳ ಕಾಲ ಕನ್ನಡದ ಸಾಹಿತ್ಯ ಕೃಷಿ ಮಾಡಿದ ಸಮನ್ವಯ ಕವಿ ನಾಡೋಜ ಶ್ರೀ ಚನ್ನವೀರ ಕಣವಿಯವರ ನಿಧನಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬರೆದಿದ್ದಾರೆ.

ಅಬಕಾರಿ ಸಚಿವ ಕೆ.ಗೋಪಾಲಯ್ಯ ಕಂಬನಿ

ತಮ್ಮ ಅಪಾರ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದ ನಾಡೋಜ ಕವಿ ಚನ್ನವೀರ ಕಣವಿ ಅವರ ನಿಧನಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ. ಕಥೆ, ಕವಿತೆ,ಸಾಹಿತ್ಯ ಲೇಖನ,ಹೀಗೆ ಕನ್ನಡದ ಎಲ್ಲ ಬಗೆಯ ಸಾಹಿತ್ಯದ ಮೂಲಕ ನಾಡಿನ ಮನೆ ಮನೆಗೆ ತಲುಪಿದ್ದ‌ ಚೆಂಬಳಕಿನ ಕವಿ ಚನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಪ್ರಪಂಚ ದೊಡ್ಡ ನಷ್ಟ ಅನುಭವಿಸಿದೆ.

Political Leaders Express Condolence to Kannada Poet Chennaveera Kanavai Death

ಮೊದಲ ಕವನ ಸಂಕಲನ ಕಾವ್ಯಾಕ್ಷಿ , ನಂತರ ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾರ್ತೀಕದ ಮೋಡ, ಜೀವಧ್ವನಿ, ಜೀನಿಯಾ, ಎರಡು ದಡ, ಶಿಶಿರದಲ್ಲಿ ಬಂದ ಸ್ನೇಹಿತ ಕವನ ಸಂಕಲನಗಳು. ಹಕ್ಕಿ ಪುಚ್ಚ-ಶಿಶುಗೀತೆಗಳ ಸಂಕಲನ. ಚಿರಂತನದಾಹ, ಹೂವು ಹೊರಳುವವು ಸೂರ್ಯನೆಡೆಗೆ, ಆಯ್ದ ಕವನ ಸಂಕಲನಗಳು. ಚೆಂಬೆಳಕು ಇವರ ಸಮಗ್ರ ಕಾವ್ಯ. ಕಾವ್ಯಾನುಸಂಧಾನ, ಸಾಹಿತ್ಯಚಿಂತನ, ಸಮಾಹಿತ, ಸಮತೋಲನ ಮುಂತಾದವು ಇವರ ವಿಮರ್ಶೆಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಮುಂತಾದವು ಅವರ ಕನ್ನಡ ತಾಯಿಯ ಸೇವೆಗೆ ಸಾಕ್ಷಿಯಾಗಿವೆ. ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಾಡಿನ ಸಮಸ್ತರಿಗೆ ಕರುಣಿಸಲಿ ಎಂದು ಸಚಿವರು‌ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ

ಕಳಚಿದ ಕನ್ನಡ ಕಾವ್ಯಲೋಕದ ಕೊಂಡಿಯಾಗಿದ್ದ ನಾಡೋಜ ಕವಿ ಚನ್ನವೀರ ಕಣವಿ ಅವರ ಅಗಲಿಕೆ ರಾಷ್ಟ್ರದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಗೋವಿಂದ ಕಾರಜೋಳ

ವಿಶ್ವ ಭಾರತಿಗೆ ಕನ್ನಡಧಾರತಿ ಬೆಳಗಿದ ಕನ್ನಡಿಗರ ಮನದಲ್ಲಿ ಕನ್ನಡ ಜಾಗೃತಿ ಮೂಡಿಸಿದ ಕನ್ನಡದ ಮಹಾಕವಿ ನಾಡೋಜ ಚೆನ್ನವೀರ ಕಣವಿಯವರ ನಿಧನದ ಸುದ್ಧಿ ಕೇಳಿ ತೀವ್ರ ಬೇಸರವಾಯಿತು. ಚೆನ್ನವೀರ ಕಣವಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಖ್ಯಾತ ಕವಿ ಚನ್ನವೀರ ಕಣವಿ ಅವರ ವಿಧಿವಶಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

ಕನ್ನಡದ ಸಮನ್ವಯ, ಸುನೀತ ಕವಿ, ಖ್ಯಾತ ವಿದ್ವಾಂಸರು, ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಾದ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.'ಕನ್ನಡದ ಸಾಹಿತ್ಯ ಲೋಕದ ನಕ್ಷತ್ರದಂತಿದ್ದ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟ ಎಂದು ಅವರು ಹೇಳಿದ್ದಾರೆ. ವಿಮರ್ಶೆಗಳ ಜತೆಗೆ ಕಾವ್ಯಗಳು, ಸುನೀತಗಳನ್ನು ಬರೆಯುತ್ತಿದ್ದ ಕಣವಿ ಅವರು ಕಾವ್ಯಾಕ್ಷಿ, ಆಕಾಶಬುಟ್ಟಿ, ಹೊಂಬೆಳಕು, ನೆಲ ಮುಗಿಲು ಸೇರಿದಂತೆ ಹತ್ತು ಹಲವು ಕಾವ್ಯ ಸಂಕಲನ ರಚಿಸಿದ್ದಾರೆ. 1996ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಣವಿ ಅವರು ಸಾಹಿತ್ಯ ಲೋಕದಲ್ಲಿ ಸಲ್ಲಿಸಿದ್ದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ,ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರ ಮುಕುಟ ಅಲಂಕರಿಸಿದ್ದವು ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.

ಕಣವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸಾಹಿತ್ಯ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಡಾ. ಅಶ್ವಥ್‌ನಾರಾಯಣ್ ಸಿಎನ್

'ಸಮನ್ವಯ ಕವಿ', ಖ್ಯಾತ ಸಾಹಿತಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನದ ಸುದ್ದಿ ದುಃಖ ತಂದಿದೆ. NEP2020 ಅನುಷ್ಠಾನದ ಸಂಬಂಧ ಭೇಟಿಯಾದಾಗ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಸಾಹಿತ್ಯಾಭಿಮಾನಿಗಳು, ಹಿತೈಷಿಗಳು, ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ದೊರಕಲೆಂದು ಪ್ರಾರ್ಥಿಸುವೆ. ಓಂ ಶಾಂತಿ.

ಮಾಜಿ ಸಿಎಂ ಯಡಿಯೂರಪ್ಪ ಚನ್ನವೀರ ಕಣವಿ ಅವರ ವಿಧಿವಶಕ್ಕೆ ಸಂತಾಪ

ಹಿರಿಯ ಸಾಹಿತಿ, ನಾಡೋಜ ಡಾ.ಚೆನ್ನವೀರ ಕಣವಿ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ತಂದಿದೆ. ಸಮನ್ವಯ ಕವಿ ಎಂದೇ ಹೆಸರಾಗಿದ್ದ ಕಣವಿಯವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಸಂಖ್ಯ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ

ಸಚಿವ ಡಾ ಮುರುಗೇಶ್ ನಿರಾಣಿ

ಕನ್ನಡದ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ.

ಮಾಜಿ ಸಿಎಂ ಕುಮಾರಸ್ವಾಮಿ ಚನ್ನವೀರ ಕಣವಿ ಅವರ ನಿಧನಕ್ಕೆ ಸಂತಾಪ

ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು.

Recommended Video

      5 ವರ್ಷಗಳಿಂದ ಇಲ್ಲದ ಹಿಜಾಬ್ ಈಗ್ಯಾಕೆ‌ ಬಂತು? ಹಿಜಾಬ್ ವಿವಾದದ ರಹಸ್ಯ ಇಲ್ಲಿದೆ ನೋಡಿ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+