"ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ"
ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪ ಮಾಡಿದರು. ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮುಸ್ಲಿಮರಿಗೆ ಬಿಟ್ಟು ಬೇರೆ ಯಾರಿಗೂ ಸರ್ಕಾರವೇ ಇಲ್ಲ ಎಂಬಂತೆ ಮಾಡುತ್ತಿದ್ದು. ಈ ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲಾ ಎಂದು
ಕಿಡಿಕಾರಿದರು.
ಇವತ್ತು ಜನಿವಾರ ಕೇವಲ ಒಂದೇ ಸಮಾಜಕ್ಕೆ ಅಲ್ಲ, ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿದ್ದು. ಮಹಾಭಾರತದ ಕಾಲದಿಂದ ನಾವು ನೋಡಿದ್ದೆವೆ ಬ್ರಾಹ್ಮಣ ಸಮಾಜ, ಜೈನ ಸಮಾಜದಲ್ಲಿ ಜನಿವಾರ ಹಾಕುವಂತ ಪದ್ಧತಿ ಇದೆ ಲಿಂಗಾಯತರು ಶಿವ ದಾರ ಹಾಕ್ತಾರೆ. ಬೇರೆ ಬೇರೆ ಪದ್ಧತಿ ಸನಾತನ ಧರ್ಮದಲ್ಲಿ ಇವೆ ಇವತ್ತು ಮುಸ್ಲಿಮರಿಗೆ ಬುರ್ಕಾ ಹಾಕಲು ವಿರೋಧ ಇಲ್ಲ. ಹಿಜಾಬ್ ಹಾಕಲು ವಿರೋಧ ಇಲ್ಲ. ಆದರೆ ಒಳಗೆ ಇರುವ ಜನಿವಾರ ಹಾಕಿಕೊಂಡರೆ ಇವರಿಗೆ ಅವರಿಗೆ ತೊಂದರೆ ಆಗಿದೆ. ಇವರ ಮೇಲೆ ಕುಳಿತು ಏನು ಕುಮ್ಮಕ್ಕು ಕೊಡುತ್ತಿದ್ದಾರೆ. ಅವರು ಯಾರಿಗೆ ಸಂದೇಶ ಕೊಡುತ್ತಿದ್ದಾರೆ. ಇದರ ಮೇಲೆ ಕುಣಿಯುತ್ತಿದ್ದಾರೆ. ಹೀಗಾಗಿ, ಶಿವಮೊಗ್ಗ, ಬೀದರ ಹಾಗೂ ಧಾರವಾಡದಲ್ಲಿ ಈ ಘಟನೆ ಆಗಲು ಸಿದ್ದರಾಮಯ್ಯ ನವರ ಕುಮ್ಮಕ್ಕು ಕಾರಣ ಆಗಿದೆ. ಅವರ ನೇರವಾಗಿ ಹೇಳದೇ ಸಂದೇಶದ ಮೂಲಕ ಇದನ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇವರ ಕೆಲಸ ಕೇವಲ ಸಮಾಜ ಒಡೆಯುವುದು. ಸಿಎಂ ಸಿದ್ದರಾಮಯ್ಯ ಅವರು ಘಟನೆ ನಡೆದಾಗಲೇ ಕ್ಷಮೆ ಯಾಚಿಸಬೇಕಿತ್ತು. ಅವರು ಹೇಳುತ್ತಿಲ್ಲ, ಇವರ ಮಂತ್ರಿಗಳು ಬಾಯಿ ಬಿಡ್ತಿಲ್ಲ. ಇದರ ಅರ್ಥ ಅವರಿಗೆ ಸಮಾಜ ಒಡೆಯಬೇಕು ಎಂದಿದೆ. ಮುಸ್ಲಿಂ ಸಮಾಜದ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದು. ಹಿಜಾಬ್ ಆಗಿದ್ದರೆ ಪ್ರತಿ ಗಂಟೆಗೆ ಅವರು ಪ್ರತಿಕ್ರಿಯೆ ಕೊಡುತ್ತಿದ್ದರು. ಆ ಬಗ್ಗೆ ರಾಜ್ಯದಲ್ಲಿ ಗದ್ದಲ ಮಾಡಿಸುತ್ತಿದ್ದರು. ಇವತ್ತು ಇದು ಆಗಲು ಅವರೇ ಕಾರಣ, ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ ಎಂದರು.
ಬೇರೆಯವರ ಮೇಲೆ ಕ್ರಮ ಆಗಿದ್ದು. ಅವನ ಮೇಲೂ ಕ್ರಮ ಆಗಬೇಕಿತ್ತು. ಆತ ಮುಸ್ಲಿಂ ಎಂಬ ಕಾರಣಕ್ಕೆ ಕ್ರಮ ತೆಗೆದುಕೊಂಡಿಲ್ಲ. ನಾವು ಇದರ ಬಗ್ಗೆ ಜನಾಕ್ರೋಶ ಯಾತ್ರೆಯಲ್ಲಿ ಸಹ ಮಾತನಾಡುತ್ತಿದ್ದೇವೆ. ಜನ ಸಹ ಇದನ್ನ ನೋಡುತ್ತಿದ್ದಾರೆ. ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಜನ ನೋಡುತ್ತಿದ್ದಾರೆ. ನಮ್ಮ ತಪ್ಪಿನಿಂದ ಈ ಸರ್ಕಾರ ಬಂದಿದೆ ಎಂದು ಜನ ಮಾತಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಜನ ಸರಿಯಾದ ಸಮಯದಲ್ಲಿ ತಕ್ಕ ಶಿಕ್ಷೆ ಕೊಡಲಿದ್ದಾರೆ. ಇದು ಜನಿವಾರದಿಂದ ಆರಂಭ ಆಗಿದ್ದು, ಮುಂದೆ ವಿದ್ಯಾರ್ಥಿಗಳು ದೇವರ ದರ್ಶನ ಪಡೆದು ತಿಲಕ ಹಚ್ಚಿ ಹೋಗ್ತಾರೆ. ಈಗ ಜನಿವಾರ ತೆಗೆಸಿದ್ದಾರೆ. ನಾಳೆ ಕುಂಕುಮ ಇಟ್ಟುಕೊಳ್ಳಬಾರದು ಅಂತಾರೆ. ವಿಭೂತಿ - ನಾಮ ಹಚ್ಚ ಬಾರದು ಅಂತಾರೆ. ಇವೆಲ್ಲ ಅವರು ಆರಂಭ ಮಾಡ್ತಾರೆ, ನಾವು ಸುಮ್ಮನೆ ಕುಳಿತರೆ ಇವೆಲ್ಲ ಆರಂಭ ಮಾಡ್ತಾರೆ ಎಂದರು.
ಧಾರವಾಡದಲ್ಲಿ ಭಾರೀ ಪ್ರತಿಭಟನೆ: ಇನ್ನು ಈ ಭಾಗದಲ್ಲಿ ಜನಿವಾರವನ್ನು ತೆಗೆಸಿರುವುದನ್ನು ವಿರೋಧಿಸಿ, ಇಂದು (ಏಪ್ರಿಲ್ 21) ಬೃಹತ್ ಪ್ರತಿಭಟನೆ ನಡೆದಿದೆ. ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ವಿಚಾರವಾಗಿ ಧಾರವಾಡದಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಅಧ್ಯಕ್ಷ ಶಿವಾನಂದ ಸತ್ತಿಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಲ್ಲಿನ ನಗರದ ಉಪನಗರ ಠಾಣೆ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ.
ಉಪನಗರ ಠಾಣೆ ಒಳಗೆ ನುಗ್ಗಲು ಯತ್ನ ನಡೆದಿದ್ದು, ಪೊಲೀಸರು ಒಳಗಡೆ ಬಿಡದಂತೆ ತಡೆದಿದ್ದಾರೆ. ಈ ಹಿನ್ನಲೆ ಪ್ರತಿಭಟನೆ ಕಾರ್ಯಕರ್ತರ ಜೊತೆ ಪೋಲಿಸರ ವಾಗ್ವಾದ ಶುರುವಾಗಿದೆ. ಜನಿವಾರ ಕಟ್ ಮಾಡಿದ್ದು ಪೊಲೀಸ್ ಸಿಬ್ಬಂದಿ ಅಲ್ಲ ಎನ್ನುತ್ತಿರುವ ಪೊಲೀಸರು. ಪೊಲೀಸರು ಕಟ್ ಮಾಡಿದ್ದರು ಎಂದು ವಿದ್ಯಾರ್ಥಿ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಪೋಲಿಸರ ಮತ್ತು ಬಜರಂಗದಳ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಪೋಲಿಸರು ಮಾತಿಗೆ ಬೆಲೆ ಕೊಡದ ಪ್ರತಿಭಟನಾಕಾರರುಬಜರಂಗದಳ ಕಾರ್ಯಕರ್ತ ಶಿವಾನಂದ ಸತ್ತಿಗೇರಿ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕೋ ಪೈಲಟ್: ನೈರುತ್ಯ ರೈಲ್ವೆಯಿಂದ ಗುಡ್‌ನ್ಯೂಸ್!
ಲೋಕೋ ಪೈಲಟ್, ಸಹ ಲೋಕೊ ಪೈಲಟ್‌ಗಳು ಹಾಗೂ ರೈಲ್ವೆ ವ್ಯವಸ್ಥಾಪಕರಿಗೆ ಅವರ ವಿಶ್ರಾಂತಿ ಅವಧಿಯಲ್ಲಿ ವಾಸ್ತವ್ಯಕ್ಕೆ ರನ್ನಿಂಗ್ ರೂಮ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಟಿ.ವಿ. ವಿಷ್ಣುಭೂಷಣ ಹೇಳಿದ್ದಾರೆ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 9, ಬೆಂಗಳೂರು ವಿಭಾಗದಲ್ಲಿ 4, ಮೈಸೂರು ವಿಭಾಗದಲ್ಲಿ 9 ಸೇರಿದಂತೆ ಒಟ್ಟು 22 ರನ್ನಿಂಗ್ ರೂಮ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರನ್ನಿಂಗ್ ರೂಮ್‌ನಲ್ಲಿ ಧ್ಯಾನ, ಯೋಗಾಸನ ಹಾಗೂ ಒಳಾಂಗಣ ಕ್ರೀಡೆಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯ ನಿರ್ಮಿಸಲಾಗಿದೆ. ಸುರಕ್ಷತೆಗಾಗಿ ಎಲ್ಲೆಡೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಬೆಡ್, ಶೌಚಾಲಯ, ಕುಡಿಯುವ ನೀರು, ಸ್ವಚ್ಛ ಹೊದಿಕೆ, ಸೊಳ್ಳೆ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಲೋಕೋ ಪೈಲಟ್‌ಗಳಿಗೆ ಕೇವಲ 5 ರೂಪಾಯಿಗೆ ಊಟ, ಉಪಾಹಾರ ಒದಗಿಸಲಾಗುತ್ತಿದೆ. ಒಂದು ಬಾರಿ ಊಟಕ್ಕೆ 65 ವೆಚ್ಚವಾಗಲಿದ್ದು. ಅದರಲ್ಲಿ 60 ರೂಪಾಯಿ ಮೊತ್ತವನ್ನು ರೈಲ್ವೆ ಇಲಾಖೆಯಿಂದಲೇ ಭರಿಸಲಾಗುವುದು. ಬೇರೆ ಕಡೆಯಿಂದ ಗೂಡ್ಸ್, ಪ್ಯಾಸೆಂಜರ್ ರೈಲುಗಳ ಲೋಕೋ ಪೈಲಟ್, ಸಹ ಲೋಕೋ ಪೈಲಟ್‌ಗಳು ಹಾಗೂ ವ್ಯವಸ್ಥಾಪಕರು ಮಾತ್ರ ರನ್ನಿಂಗ್ ರೂಮ್ ಬಳಸಬಹುದಾಗಿದೆ. ಒಬ್ಬ ಲೋಕೋ ಪೈಲಟ್ ಗರಿಷ್ಠ ಎಂಟು ಗಂಟೆ ಇಲ್ಲಿ ವಿಶ್ರಾಂತಿ ಪಡೆಯಬಹುದು. ಪ್ರತಿ ದಿನ 50ಕ್ಕೂ ಹೆಚ್ಚು ಸಿಬ್ಬಂದಿ ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರನ್ನಿಂಗ್ ರೂಮ್‌ಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಊಟ, ಉಪಾಹಾರ ಒದಗಿಸಲಾಗುತ್ತಿದೆ ಎಂದು ಲೋಕೋ ಪೈಲಟ್ ಶ್ಯಾಮಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications