ಕೆಐಐಟಿ ಪ್ರವೇಶ ಪರೀಕ್ಷೆ ಹಾಗೂ ಅರ್ಜಿ ಸಲ್ಲಿಸಲು ಶುಲ್ಕವಿಲ್ಲ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮಾರ್ಚ್,09: ಪ್ರತಿ ವರ್ಷವೂ ಒಬ್ಬ ವಿದ್ಯಾರ್ಥಿ ವಿವಿಧ ಸಂಸ್ಥೆಗಳಿಗೆ ಪ್ರವೇಶದ ಅರ್ಜಿ ಸಲ್ಲಿಸಲು ಮತ್ತು ಪ್ರವೇಶ ಪರೀಕ್ಷೆ ಬರೆಯಲು 5,000ರೂ.ನಿಂದ 10,000ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಬಹಳಷ್ಟು ಶಿಕ್ಷಣ ಸಂಸ್ಥೆಗಳು ತಮ್ಮದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಇಲ್ಲಿರುವ ಸಂಸ್ಥೆಗೆ ಅರ್ಜಿ ಹಾಗೂ ಪ್ರವೇಶ ಶುಲ್ಕ ಕಟ್ಟಬೇಕಿಲ್ಲ.

ಕಳಿಂಗ ಇನ್ಸ್ ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ವಿಶ್ವವಿದ್ಯಾಲಯ ವಿದ್ಯಾರ್ಥಿಸ್ನೇಹಿಯಾಗಿದ್ದು, ವಾರ್ಷಿಕ ಕೆಐಐಟಿಇಇ ಅರ್ಜಿ ಮತ್ತು ಪ್ರವೇಶ ಶುಲ್ಕ ಎರಡನ್ನೂ ರದ್ದುಗೊಳಿಸಿದೆ. ಇಲ್ಲಿರುವ ಯಾವುದೇ ವೃತ್ತಿಪರ ಕೋರ್ಸ್ ಗಳಿಗೆ ಹಣ ಕಟ್ಟುವಂತಿಲ್ಲ.

ದೇಶದಲ್ಲಿ ಹೊಸ ಪ್ರವೃತ್ತಿಯ ಪ್ರಾರಂಭಕ್ಕೆ ನಾಂದಿ ಹಾಡಿರುವ ಕೆಐಐಟಿ ಸಂಸ್ಥಾಪಕ ಡಾ.ಅಚ್ಯುತ ಸಮಂತ, 'ಹಲವಾರು ವಿದ್ಯಾರ್ಥಿಗಳು ಶುಲ್ಕ ಪಾವತಿ ಬಗ್ಗೆ ನನ್ನನ್ನು ಹಲವು ಬಾರಿ ಪ್ರಶ್ನಿಸಿದ್ದರು. ಆದ್ದರಿಂದ ನಾವು ಅರ್ಜಿ ಮತ್ತು ಪ್ರವೇಶ ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸಲು ನಿರ್ಧರಿಸಿದೆವು.[ಕೆಪಿಎಸ್ ಸಿ ಗ್ರೂಪ್ 'ಸಿ' ನೇಮಕಾತಿ ಅಧಿಸೂಚನೆ ವಿವರ ]

ಇದು ದೇಶಾದ್ಯಂತ ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ಕೊಂಚ ನೆಮ್ಮದಿಯನ್ನುಂಟು ಮಾಡುತ್ತದೆ ಎಂಬ ಭರವಸೆ ನಮ್ಮದು' ಎಂದರು. ಕಳಿಂಗ ಇನ್ಸ್ ಟಿಟ್ಯೂಟ್ ನಲ್ಲಿ ಯಾವ ಕೋರ್ಸ್ ಗಳಿವೆ? ಯಾವ ಕೋರ್ಸ್ ಗಳಿಗೆ ಪ್ರವೇಶ ಶುಲ್ಕವಿಲ್ಲ ಇನ್ನಷ್ಟು ಮಾಹಿತಿ ಇಲ್ಲಿದೆ.

ಯಾವ ಕೋರ್ಸ್ ಗಳಿಗೆ ಶುಲ್ಕವಿರುವುದಿಲ್ಲ?

ಯಾವ ಕೋರ್ಸ್ ಗಳಿಗೆ ಶುಲ್ಕವಿರುವುದಿಲ್ಲ?

ಅಂದರೆ ಕೆಐಐಟಿಯಲ್ಲಿ ಬಿಟೆಕ್ ನಿಂದ ಬಿಆರ್ ಟೆಕ್, ಎಂಬಿಬಿಎಸ್ ನಿಂದ ಬಿಡಿಎಸ್, ಎಂಸಿಎಯಿಂದ ಎಲ್ಎಲ್ಎಂವರೆಗೆ ಯಾವುದೇ ಕೋರ್ಸ್ ಗೆ ಪ್ರವೇಶ ಬಯಸುವವರು ಪ್ರವೇಶ ಪರೀಕ್ಷೆಗೆ ಶುಲ್ಕ ಪಾವತಿಸುವಂತಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ಇದೇ ನಿಯಮ ಅನ್ಚಯವಾಗಲಿದೆ ಎಂದು ಡಾ.ಅಚ್ಯುತ ಸಮಂತ ಹೇಳುತ್ತಾರೆ.

ವೃತ್ತಿಪರ ಸಂಸ್ಥೆಗಳು ಎಷ್ಟಿವೆ?

ವೃತ್ತಿಪರ ಸಂಸ್ಥೆಗಳು ಎಷ್ಟಿವೆ?

ಭಾರತದಲ್ಲಿ 30 ಎನ್ಐಟಿಗಳು (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), 15 ಐಐಟಿಗಳು(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ನಾಲ್ಕು ಐಐಐಟಿಗಳು (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ) ಮತ್ತು ಐದು ಐಐಎಸ್ಇಆರ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್)ಗಳು ಮಾತ್ರವಲ್ಲದೆ ಸಾಕಷ್ಟು ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅಂದರೆ ಪ್ರತಿವರ್ಷ ಮಾರ್ಚ್ ನಿಂದ ಆಗಸ್ಟ್ ಸಮಯದಲ್ಲಿ 160ಕ್ಕೂ ಹೆಚ್ಚು ಪ್ರವೇಶ ಪರೀಕ್ಷೆಗಳು ನಡೆಯುತ್ತವೆ.

ಕೆಐಐಟಿಇಇ ಯಲ್ಲಿ ಯಾವ ಯಾವ ಕೋರ್ಸ್ ಗಳಿವೆ?

ಕೆಐಐಟಿಇಇ ಯಲ್ಲಿ ಯಾವ ಯಾವ ಕೋರ್ಸ್ ಗಳಿವೆ?

ಕೆಐಐಟಿಇಇ ಏಪ್ರಿಲ್ 21-30, 2016ರ ನಡುವೆ ನಡೆಯುತ್ತಿದ್ದು ಯಾವುದೇ ಅರ್ಜಿ/ಪರೀಕ್ಷಾ ಶುಲ್ಕಗಳಿರುವುದಿಲ್ಲ. ಈ ಪರೀಕ್ಷೆಯನ್ನು ಬಿಟೆಕ್ (4 ವರ್ಷಗಳು); ಸಿವಿಎಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್, ಮೆಕ್ಯಾನಿಕಲ್ (ಆಟೊಮೊಬೈಲ್) ಮತ್ತು ಡ್ಯುಯಲ್ ಡಿಗ್ರೀ ಪ್ರೋಗ್ರಾಮ್ಗಳಿರುತ್ತವೆ.

ಇನ್ನಷ್ಟು ಕೋರ್ಸ್ ಗಳು?

ಇನ್ನಷ್ಟು ಕೋರ್ಸ್ ಗಳು?

ಬಿಟೆಕ್ ಮತ್ತು ಎಂಟೆಕ್-ಬಯೋಟೆಕ್ನಾಲಜಿ (ಡ್ಯುಯಲ್ ಪ್ರೋಗ್ರಾಮ್), ಬಿ ಆರ್ಕ್(5 ವರ್ಷ), ಬಿಟೆಕ್(ಲ್ಯಾಟರಲ್ ಎಂಟ್ರಿ-3 ವರ್ಷ), ಎಂಬಿಬಿಎಸ್(4.5 ವರ್ಷ), ಬಿಡಿಎಸ್(4 ವರ್ಷ), ಬಿಎಸ್ಸಿ ನರ್ಸಿಂಗ್(4 ವರ್ಷ), ಬಿಎಎಲ್ಎಲ್ಬಿ, ಬಿಬಿಎ ಎಲ್ಎಲ್ಬಿ ಮತ್ತು ಬಿಎಸ್ಸಿ ಎಲ್ಎಲ್ಬಿ(5 ವರ್ಷ), ಬ್ಯಾಚಲರ್ ಆಫ್ ಡಿಸೈನ್(ಫ್ಯಾಷನ್/ಟೆಕ್ಸ್ಟೈಲ್ಸ್-4 ವರ್ಷ), ಬ್ಯಾಚಲರ್ ಆಫ್ ಫಿಲ್ಮ್ ಅಂಡ್ ಟೆಲಿವಿಷ್ ಪ್ರೊಡಕ್ಷನ್(3 ವರ್ಷ), ಬಿಬಿಎ, ಬಿಸಿಎ, ಎಂಎಸ್ಸಿ (ಬಯೋಟೆಕ್ನಾಲಜಿ/ಅಪ್ಲೈಡ್ ಮೈಕ್ರೋಬಯಾಲಜಿ), ಇಂಟಿಗ್ರೇಟೆಡ್ ಮಾಸ್ಟರ್ ಆಫ್ ಕಮ್ಯುನಿಕೇಷನ್(5 ವರ್ಷ), ಎಂಎಸ್ಸಿ(ನರ್ಸಿಂಗ್), ಎಂಸಿಎ, ಎಂಸಿಎ (ಲ್ಯಾಟರಲ್ ಎಂಟ್ರಿ), ಎಂಟೆಕ್, ಎಲ್ಎಲ್ಎಂ ಮತ್ತು ಪಿಎಚ್ಡಿ ಕೋರ್ಸ್ ಗಳಿವೆ. ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಕೆಐಐಟಿಇಇ ಹಾಗೂ ಕೆಐಐಟಿ ಅರ್ಜಿ ಸಲ್ಲಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KIIT (Kalinga Institution of Industrial Technology) is a co-educational, autonomous university located at Bhubaneswar in the Indian state of Odisha. No fee for application and entrance test from this year.
Please Wait while comments are loading...