ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ

|
Google Oneindia Kannada News

ಧಾರವಾಡ, ಡಿಸೆಂಬರ್ 01: ಮೈಸೂರು-ಧಾರವಾಡ ನಡುವೆ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಉಭಯ ನಗರಗಳ ನಡುವೆ ಪ್ರತಿದಿನ ರೈಲು ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಧಾರವಾಡ-ಮೈಸೂರು ಮತ್ತು ಮೈಸೂರು-ಧಾರವಾಡ ನಡುವೆ ಸಂಚಾರ ನಡೆಸುವ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿ

ರೈಲು ಸಂಖ್ಯೆ 07302/ 07301 ಧಾರವಾಡ-ಮೈಸೂರು-ಧಾರವಾಡ ಹಬ್ಬದ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಧಾರವಾಡದಿಂದ 10/12/2020 ರವರೆಗೆ ಮತ್ತು ಮೈಸೂರಿನಿಂದ 11/12/2020 ರವರೆಗೆ ವಿಸ್ತರಿಸಲಾಗಿದೆ.

 ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ಧಿ ಘಟಕ ಸ್ಥಾಪನೆ ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ಧಿ ಘಟಕ ಸ್ಥಾಪನೆ

 Mysuru Dharwad Daily Special Train Service Extended

ಕೋವಿಡ್ ಲಾಕ್ ಡೌನ್ ಘೋಷಣೆಗೆ ಮೊದಲು ಪ್ರತಿದಿನ ಧಾರವಾಡ-ಮೈಸೂರು ನಡುವೆ ರೈಲು ಸಂಚಾರ ನಡೆಸುತ್ತಿತ್ತು. ಆದರೆ, ಸಾಮಾನ್ಯ ರೈಲಗಳು ರದ್ದಾಗಿರುವ ಹಿನ್ನಲೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ರೈಲು ಬಿಡಲಾಗಿತ್ತು.

ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ

Recommended Video

Corona ನಡುವೆ ಚಾಮುಂಡಿ ರಥೋತ್ಸವ : Mysuru Dasara 2020 | Oneindia Kannada

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮೈಸೂರು-ಧಾರವಾಡ ನಡುವಿನ ಹಬ್ಬದ ವಿಶೇಷ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಬೇಡಿಕೆ ಹೆಚ್ಚಿದ್ದರೆ ಪುನಃ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಸಾಮಾನ್ಯ ರೈಲುಗಳ ಸಂಚಾರದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

English summary
South western railway extended the festival special express train service from Mysuru to Dharwad and Dharwad to Mysuru. Train will run daily between two city's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X