ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರ್ಗಿ ಹತ್ಯೆಗೆ ಖಂಡನೆ, ಸಾಹಿತಿಗಳಿಂದ ಪ್ರಶಸ್ತಿ ವಾಪಸ್

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 02 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಯನ್ನು ಪಡೆದ ಸಾಹಿತಿಗಳು ತಮ್ಮ ಪ್ರಶಸ್ತಿಯನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ.

ಅಕ್ಟೋಬರ್ 3ರ ಶನಿವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ನೀಡಲಿದ್ದಾರೆ. 2010ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಯನ್ನು ಪಡೆದ ಸಾಹಿತಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಲಿದ್ದಾರೆ. [ಕಲಬುರ್ಗಿ ಹತ್ಯೆ : ರುದ್ರ ಪಾಟೀಲ್ ಗಾಗಿ ಹುಡುಕಾಟ]

dharwad

ಪ್ರಶಸ್ತಿ ಹಿಂದಿರುಗಿಸುವ ಸಾಹಿತಿಗಳು : ವೀರಣ್ಣ ಮಡಿವಾಳರ (ಬೆಳಗಾವಿ ಜಿಲ್ಲೆ), ಟಿ. ಸತೀಶ್ ಜವರೇಗೌಡ (ಮಂಡ್ಯ), ಸಂಗಮೇಶ ಮೆಣಸಿನಕಾಯಿ (ಧಾರವಾಡ), ಹನಮಂತ ಹಾಲಿಗೇರಿ (ಬಾಗಲಕೋಟೆ), ಶ್ರೀದೇವಿ ವಿ ಆಲೂರ (ಬಳ್ಳಾರಿ) ಹಾಗೂ ಚಿದಾನಂದ ಸಾಲಿ (ರಾಯಚೂರು). [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]

ಆ.30ರಂದು ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಆದರೆ, ಇದುವರೆಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಿಲ್ಲ. ಆದ್ದರಿಂದ ನಮ್ಮ ಪ್ರಶಸ್ತಿ ವಾಪಸ್ ನೀಡಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತೇವೆ ಎಂದು ಸಾಹಿತಿಗಳು ಹೇಳಿದ್ದಾರೆ.

ನಮಗೆ ಪ್ರಶಸ್ತಿ ಪ್ರಧಾನವಾದ ಸಂದರ್ಭದಲ್ಲಿಯೇ ಕಲಬುರ್ಗಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈಗ ಸಾಹಿತ್ಯ ಪರಿಷತ್ತು ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಶಸ್ತಿಯನ್ನು ವಾಪಸ್ ಮಾಡಲಾಗುತ್ತಿದೆ ಎಂದು ಸಂಗಮೇಶ ಮೆಣಸಿನಕಾಯಿ ಹೇಳಿದ್ದಾರೆ.

ಯಾವುದು ಈ ಪ್ರಶಸ್ತಿ? : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಗಳನ್ನು ಯುವ ಬರಹಗಾರರಿಗೆ ನೀಡಲಾಗುತ್ತದೆ.

ಅಂದಹಾಗೆ ಕೆಲವು ದಿನಗಳ ಹಿಂದೆ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು 2009ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡಿದ್ದ ಪಂಪ ಪ್ರಶಸ್ತಿಯನ್ನು ವಾಪಸ್ ನೀಡಿದ್ದರು. ತಮ್ಮ ಸ್ನೇಹಿತ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಅವರು ಪ್ರಶಸ್ತಿ ಮರಳಿಸಿದ್ದರು.

English summary
6 Kannada writers on Saturday, October 3rd will return their prestigious BMTC Aralu Saahitya Award to Kannada sahitya parishat protesting against the brutal murder of Kannada writer, Professor M.M.Kalburgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X