ಧಾರವಾಡದಲ್ಲಿ ಭೀಕರ ಅಪಘಾತ: ಆರು ಮಂದಿ ದುರ್ಮರಣ
ಧಾರವಾಡ, ನವೆಂಬರ್ 17: ಮುಂಬೈನಿಂದ ಹಂಪಿಗೆ ಬರುತ್ತಿದ್ದ ಖಾಸಗಿ ಬಸ್ ವೊಂದು ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಧಾರವಾಡದ ಅಣ್ಣಿಗೇರಿ ತಾಲೂಕಿನ ಕೋಳವಾಡ ಕ್ರಾಸ್ ಬಳಿ ಈ ಘಟಣೆ ನಡೆದಿದೆ. ಮೃತ ಆರ ಮಂದಿಯೂ ಮುಂಬೈ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಮೃತರನ್ನು ವಿಶ್ವನಾಥ್, ದಿನಕರ್, ರಮೇಶ್, ಸುಚಿತ್ರಾ, ಲಾಹು, ಸುಮೇಧಾ ಎಂದು ಗುರುತಿಸಲಾಗಿದೆ.
ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications