ಹು-ಧಾ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಧಾರವಾಡ, ಏ. 30 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರಯೋಜನಾ ವಿಭಾಗದ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಗೆ ಮೀಸಲಾಗಿಟ್ಟಿದ್ದ ಜಾಗವನ್ನು ಅಕ್ರಮವಾಗಿ ಹಸ್ತಾಂತರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದ

ಲೋಕಾಯುಕ್ತ ಎಸ್ಪಿ ಕೆ.ಪರಶುರಾಮ್ ನೇತೃತ್ವದಲ್ಲಿ ದಾಳಿ ನಡೆಸಿ, ನಗರ ಯೋಜನಾ ವಿಭಾಗದ ಕಚೇರಿಯಲ್ಲಿರುವ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು. ತಹಸೀಲ್ದಾರ್ ಎಸ್.ಎಸ್.ಬಿರಾದಾರ್ ಹಾಗೂ ಪಾಲಿಕೆಯ ಐದು ಅಧಿಕಾರಿಗಳ ವಿರುದ್ಧ ಭೂಮಿ ಹಸ್ತಾಂತರ ಮಾಡಿರುವ ಕುರಿತು ದೂರು ದಾಖಲಾಗಿತ್ತು. ಇದರ ಅನ್ವಯ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಲಾಗಿದೆ.

Hubli-Dharwad

ಸಾರ್ವಜನಿಕರಿಗಾಗಿ ಮೀಲಾಗಿಟ್ಟಿದ್ದ ಉಣಕಲ್‌ ಸರ್ವೆ ನಂ.544ಎ, 549ಎ, 560 ಜಾಗವನ್ನು ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಘಕ್ಕೆ ಹಸ್ತಾಂತರಿಸಲಾಗಿದೆ. ಸಂಘದವರು ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಈ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.[ಆರು ಭ್ರಷ್ಟರ ಮನೆ ಬಾಗಿಲು ತಟ್ಟಿದ ಲೋಕಾಯುಕ್ತರು]

ಹಿಂದೆ ತಹಸೀಲ್ದಾರ್ ಆಗಿದ್ದ ಬಿರಾದಾರ್, ಪಾಲಿಕೆಯ ಯೋಜನಾ ವಿಭಾಗದ ಮಾಜಿ ಅಧಿಕಾರಿ ಎಲ್.ಎಸ್.ಪವಾರ್, ಪಾಲಿಕೆ ಅಭಿಯಂತರ ಜಿ.ಕೆ.ಗಂಜಿಘಟ್ಟ, ಲೆಕ್ಕಾಧಿಕಾರಿ ಮಳ್ಳಪ್ಪಗೌಡ ಮುಂತಾದವರು ಈ ಅಕ್ರಮ ಹಸ್ತಾಂತರ ಪ್ರಕಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ಎಸ್ಪಿ ಕೆ.ಪರಶುರಾಮ್, ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಹಸ್ತಾಂತರಿಸಿರುವುದು ಕಾನೂನು ಬಾಹಿರವಾಗಿದೆ. ಆರೋಪಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+