ಧಾರವಾಡ: ಕಾಶ್ಮೀರ-ಕನ್ಯಾಕುಮಾರಿ ಸೈಕಲ್ ರೈಡ್: ಡಯಾಬಿಟಿಸ್ ನಿಯಂತ್ರಣಕ್ಕೆ ಹೊಸ ಅಭಿಯಾನ
ಮಧುಮೇಹ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಇಲ್ಲೊಬ್ಬ ಯುವಕ ತುಂಬಾ ಶ್ರಮಿಸುತ್ತಿದ್ದಾರೆ. ಹಾಗಾದರೆ ಆ ಯುವಕ ಯಾರು? ಯಾವ ಜಿಲ್ಲೆಯವರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಮಾರ್ಚ್, 03: ಮಧುಮೇಹ ನಿಜಕ್ಕೂ ಯಾವ ವಯಸ್ಸಿನವರಲ್ಲಿ ಬರುತ್ತಿದೆ ಎಂಬುವುದೇ ಸೋಜಿಗದ ಸಂಗತಿಯಾಗಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಇಲ್ಲೊಬ್ಬರು ತುಂಬಾ ಶ್ರಮಿಸುತ್ತಿದ್ದಾರೆ. ವಿನೂತನವಾಗಿ ಕೈಗೊಂಡಿರುವ ಈ ಅಭಿಯಾನ ಇದೀಗ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟಕ್ಕೂ ಏನಿದು ಪ್ರಯೋಗ ಅಂತೀರಾ ಇಲ್ಲಿದೆ ನೋಡಿ ವಿವರ.
ಸೈಕಲ್ ಸವಾರಿಯನ್ನು ನಾವು ಸಂಚಾರಕ್ಕೆ ಹಾಗೂ ವ್ಯಾಯಾಮ ಮಾಡಲು ಬಳಸುತ್ತೇವೆ. ಆದರೆ ಧಾರವಾಡ ಜಿಲ್ಲೆಯ ವೀರನಾರಾಯಣ ಕುಲಕರ್ಣಿ ಎನ್ನುವವರು ತಮ್ಮ ಸೈಕಲ್ ಜಾಥದ ಮೂಲಕ ಡಯಾಬಿಟಿಸ್ ಮೆಡಿಸಿನ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೆಯೇ ಈ ಮೂಲಕ ಮಧುಮೇಹ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಕುಲಕರ್ಣಿ ಅವರು ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲು ಮುಂದಾಗಿದ್ದಾರೆ. ವೃತ್ತಿಯಿಂದ ಫ್ರೀಡಂ ಫಾರ್ ಡಯಾಬಿಟಿಸ್ ಸಂಸ್ಥೆಯ ಉದ್ಯೋಗಿಯಾಗಿರುವ ವೀರನಾರಾಯಣ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 4000 ಕಿಲೋಮೀಟರ ಸೈಕಲ್ ರೈಡ್ ಮಾಡಿದ್ದಾರೆ. ಈ ಮೂಲಕ ಮಧುಮೇಹ ಮುಕ್ತ ಭಾರತದ ಕನಸನ್ನು ಹೊತ್ತು ಮುನ್ನಡೆಯುತ್ತಿದ್ದಾರೆ.
ಡಯಾಬಿಟಿಸ್ ನಿಯಂತ್ರಣಕ್ಕೆ ಹೊಸ ಅಭಿಯಾನ
ಇನ್ನು ಕೆ2ಕೆ cycle Ride ಶೀರ್ಷಿಕೆಯ ಅಡಿಯಲ್ಲಿ ತಮ್ಮ ನಲವತ್ತು ದಿನಗಳ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದು, ಇದೇ ಭಾನುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ ದೇಶಪಾಂಡೆ ಫೌಂಡೇಶನ್ ಸೇರಿದಂತೆ ಬಹುತೇಕ ಕಡೆಯಲ್ಲಿ ಕರ್ತವ್ಯ ನಿರ್ವಹಿಸಿರುವ ವೀರನಾರಾಯಣ ಕುಲಕರ್ಣಿ ಅವರು, ರಾಜ್ಯದ ವಿವಿಧ ಮೂಲೆಯಲ್ಲಿರುವ ವಿವಿಧ ಸಂಘ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಡಯಾಬಿಟಿಸ್ ರೋಗದಿಂದ ಯಾವ ರೀತಿ ನಮ್ಮ ಜೀವನವನ್ನು ಕಾಪಾಡಿಕೊಳ್ಳಬೇಕು ಎನ್ನುವಂತಹ ಮಹತ್ವದ ಸಂದೇಶವನ್ನು ಪಸರಿಸಲಿದ್ದಾರೆ. ಇದರೊಂದಿಗೆ ದೇಶ ಪರ್ಯಟನೆ ಮಾಡುತ್ತಿದ್ದು, ಅದರಲ್ಲೂ ಸೈಕಲ್ ಮೂಲಕವೇ ಇಂತಹದೊಂದು ಅಭಿಯಾನ ಮಾಡುತ್ತಿರುವುದು ಇನ್ನು ವಿಶೇಷವಾಗಿದೆ.
ಸೈಕಲ್ ರೈಡ್ ಮೂಲಕ ಜಾಗೃತಿ ಅಭಿಯಾನ
ಒಟ್ಟಿನಲ್ಲಿ ವೀರನಾರಾಯಣ ಕುಲಕರ್ಣಿ ಅವರು, ಸೈಕಲ್ ರೈಡ್ ಮಾಡುವ ಮೂಲಕ ಮಧುಮೇಹ ನಿಯಂತ್ರಣದ ಜೊತೆಗೆ, ಮಧುಮೇಹ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಕನಸನ್ನು ಹೊತ್ತಿದ್ದಾರೆ. ಬಿಸಿಲು, ಗಾಳಿ, ಚಳಿ ಅನ್ನದೆಯೇ ಸಾರ್ವಜನಿಕ ಕಾಳಜಿಯ ಜೊತೆಗೆ, ಜನರ ಜೀವನದ ಬಗ್ಗೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ಕೆ ಮುಂದಾಗಿರುವ ಇವರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.












Click it and Unblock the Notifications