ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕವಿವಿ ಪ್ರಾಧ್ಯಾಪಕ ಅಮಾನತು

Posted By: Basavaraj
Subscribe to Oneindia Kannada

ಧಾರವಾಡ, ಆಗಸ್ಟ್ 09: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ದಿನೇಶ್ ನಾರಾಯಣಕರ ಅವರನ್ನು ಅಮಾನತುಗೊಳಿಸಲಾಗಿದೆ.

'ಲೈಂಗಿಕ ಶೋಷಣೆ ತಡೆ ಸಮಿತಿ'ಸಭೆಯು ವಿವಿಗೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕವಿವಿ ಸಿಂಡಿಕೇಟ್ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕುಲಪತಿ ಪ್ರೊ ಪ್ರಮೋದ್ ಗಾಯಿ ಅವರು ಅಪರಾಧಶಾಸ್ತ್ರ ಹಾಗೂ ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ದಿನೇಶ್ ನಾರಾಯಕರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು.

Karnataka University Assistant professor suspended for sexual harassment

ಹಾಗೂ ಪ್ರಕರಣದ ವಿಚಾರಣೆಗಾಗಿ ನ್ಯಾಯಾಧೀಶರ ಸಮಿತಿ ರಚಿಸಲಾಗಿದೆ ಎಂದೂ ಪ್ರೊ ಗಾಯಿ ತಿಳಿಸಿದ್ದಾರೆ. ದಿನೇಶ್ ನಾರಾಯಣಕರ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ 2016ರ ಡಿಸೆಂಬರ್ 19ರಂದು ಕುಲಪತಿ ಪ್ರೊ ಗಾಯಿ ಅವರಿಗೆ ಲಿಖಿತ ದೂರು ನೀಡಿದ್ದರು.

ದೂರಿನನ್ವಯ ಕುಲಪತಿ ಗಾಯಿ ಅವರು ಆಗಷ್ಟ ೭ರಂದು ಪ್ರಕರಣವನ್ನು ವಿವಿಯ ಲೈಂಗಿಕ ಶೋಷಣೆ ತಡೆ ಸಮಿತಿಗೆ ಒಪ್ಪಿಸಿದ್ದರು.

ವಿವಿ ಸಿಂಡಿಕೇಟ್ ಸದಸ್ಯೆ ದೇವಕಿ ಯೋಗಾನಂದ ಅವರ ನೇತೃತ್ವದ ಲೈಂಗಿಕ ಶೋಷಣೆ ತಡೆ ಸಮಿತಿಯು ಜುಲೈ 8ರಂದು 5 ಘಂಟೆಗಳ ಕಾಲ ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ದಿನೇಶ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು.

Bengaluru Molestation Survivor Identifies Attackers

ನಂತರ ದಿನೇಶ ಅವರನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ಪ್ರಕರಣದ ಮುಂದಿನ ವಿಚಾರಣೆಗಾಗಿ ಸಮಿತಿ ರಚಿಸಿ ತ್ವರಿತ ವಿಚಾರಣೆ ಸಡೆಸಬೇಕು ಎಂದು ಶಿಫಾರಸ್ಸು ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka University assistant professor Dinesh Narayanakar has been suspended by vice chancellor Pro Pramod Gayi on Tuesday in sexual harassment case. Pro Gayi has ordered as suspend as per recommendation of universities’ ‘Sexual Harassment Prevention Committee’ and appointed a committee to conduct inquiry.
Please Wait while comments are loading...