ಕಲಘಟಗಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿಂಬಣ್ಣವರ್ ಕಣಕ್ಕೆ

ಹುಬ್ಬಳ್ಳಿ,ಏಪ್ರಿಲ್ 17: ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಧಾರವಾಡ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಬಂಡಾಯ ಬೇಗುದಿ ಉಂಟಾಗಿದೆ.

ಟಿಕೇಟ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಆಕಾಂಕ್ಷಿ ಸಿ.ಎಂ ನಿಂಬಣ್ಣವರ್ ಬೆಂಬಲಿಗರು ಕಲಘಟಗಿ ಪಟ್ಟಣ ಬಂದ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಬೆಳಿಗ್ಗೆಯಿಂದಲೆ ಬೀದಿಗಿಳಿದ ನಿಂಬಣ್ಣವರ್ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳಿಯ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

Kalaghatgi Elections 2018 : CM Nimbannavar to contest as independent as BJP rebel

ಇನ್ನು ನಿಂಬಣ್ಣವರ್ ಬಿಟ್ಟು ಕ್ಷೇತ್ರ ದ ಹೊರಗಿನಿಂದ ಬಂದ ಮಹೇಶ್ ತೆಂಗಿನಕಾಯಿ ಗೆ ಟಿಕೇಟ್ ನೀಡಿರೋದ್ರ ಹಿಂದೆ ಬಿಎಲ್ ಸಂತೋಷ ಹಾಗೂ ಸ್ಥಳಿಯ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ರು. ಅಲ್ಲದೆ ಅದು ದೊಡ್ಡ ಮಟ್ಟದ ಫೇಸ್ ಬುಕ್ ವಾರ್ ಗೆ ಕಾರಣವಾಯಿತು.

ಕಲಘಟಗಿ ಬಿಜೆಪಿ ಯುವಮೋರ್ಚಾ ಮುಖಂಡ ನಾಗರಾಜ್ ಎನ್ನೋರು, ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿ ವಿರುದ್ದ ಫೇಸ್ ಬುಕ್ ನಲ್ಲಿ ಬಹಿರಂಗವಾಗೇ ಅಸಮಾಧಾನ ತೊಡಿಕೊಂಡ್ರು. ಧಾರವಾಡ ಜಿಲ್ಲಾ ಬಿಜೆಪಿಯನ್ನ ಇಬ್ಬರು ನಾಯಕರು ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಿದ್ರು.

Kalaghatgi Elections 2018 : CM Nimbannavar to contest as independent as BJP rebel

ಅಲ್ಲದೆ ಬೆಳಿಗ್ಗೆಯಿಂದಲೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ ನಿಂಬಣ್ಣವರ್ ಅಭಿಮಾನಿಗಳು ಕಲಘಟಗಿ ಪಟ್ಟಣವನ್ನ ಬಂದ್ ಮಾಡೋದ್ರ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ಶಾಕ್ ನೀಡಿದ್ರು. ಬಳಿಕ ಮಾತನಾಡಿದ ಟಿಕೇಟ್ ವಂಚಿತ ನಿಂಬಣ್ಣವರ್ , ನನಗೆ ಸ್ಥಳೀಯ ನಾಯಕರೇ ಮೋಸ ಮಾಡಿದ್ದಾರೆ. ಹೀಗಾಗಿ ಸೂಕ್ತ ದಾಖಲೆ ಬಿಡುಗಡೆ ಮಾಡುತ್ತೇನೆ. ಆದ್ರೆ ನಾನು ಈಗಾಗಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಇತ್ತ ಬೆಂಬಲಿಗರ ಆಕ್ರೋಶ ಮಾತ್ರ ಮುಂದುವರೆದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+