ಜುಲೈ 31 ಧಾರವಾಡದ ಇತಿಹಾಸದಲ್ಲಿ ಸುವರ್ಣ ದಿನ

Subscribe to Oneindia Kannada

ಧಾರವಾಡ, ಜುಲೈ, 22: ಕರ್ನಾಟಕದ ವಿದ್ಯಾನಗರ ಎಂದೇ ಖ್ಯಾತಿ ಪಡೆದಿರುವ ಧಾರವಾಡಕ್ಕೆ ಜುಲೈ 31 ಸಂಭ್ರಮದ ದಿನ. ಭಾರತೀಯ ತಾಂತ್ರಿಕ ಮಹಾವಿದ್ಯಾಲಯ (ಐಐಟಿ) ಧಾರವಾಡದಲ್ಲಿ ಆರಂಭವಾಗುತ್ತಿದ್ದು ಆಗಸ್ಟ್ 1 ರಿಂದ ತರಗತಿಗಳು ಆರಂಭವಾಗಲಿವೆ.

ಕೇವಲ ಧಾರವಾಡ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹೆಮ್ಮೆ ತರುವ ದಿನ. ಇಷ್ಟು ದಿನ ಮುಂಬೈ, ಚೆನ್ನೈ, ದೆಹಲಿ ಎಂದು ಅನಿವಾರ್ಯವಾವಾಗಿ ತೆರಳಬೇಕಿದ್ದ ವಿದ್ಯಾರ್ಥಿಗಳಿಗೆ ಹತ್ತುರದಲ್ಲೇ ಉನ್ನತ ಶಿಕ್ಷಣ ಲಭ್ಯವಾಗುವಂತೆ ಆಗುತ್ತಿದೆ.

IIT-Dharwad set to open on July 31

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳಿಯಿದ್ದ 470 ಎಕರೆ ಪ್ರದೇಶವನ್ನು ಉನ್ನತ ಶಿಕ್ಷಣ ಇಲಾಖೆ ತನ್ನ ವಶಕ್ಕೆ ಪಡೆದುಕೊಳ್ಳಲಿದ್ದು ರಾಜ್ಯದ ದಶಕಗಳ ಕನಸು ನನಸಾಗಿದೆ.[ಧಾರವಾಡ ಐಐಟಿ ಕ್ಯಾಂಪಸ್‌ಗೆ 470 ಎಕರೆ ಜಾಗ]

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಐಐಟಿ ಮುಂಬೈ ನಿರ್ದೇಶಕರು ಧಾರವಾಡ ಐಐಟಿ ಅಭಿವೃದ್ಧಿ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಸಹಕಾರ ನೀಡಲಿದ್ದಾರೆ. ಕೇಂದ್ರ ತಾಂತ್ರಿಕ ಶಿಕ್ಷಣ ಇಲಾಖೆ ಈಗಾಗಲೆ ಸಿಬ್ಬಂದಿ ನೇಮಕ ಮಾಡಿದೆ. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ..[ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Dharwad campus of the Indian Institute of Technology is to be inaugurated on July 31. Union HRD minister Prakash Javadekar is likely to inaugurate the institution at its temporary campus in Water and Land Management Institute on Pune-Bengaluru National Highway.
Please Wait while comments are loading...